Homeಲೇಖನಸಾಹಿತ್ಯ ಸಂಸ್ಕೃತಿ ಸೇತುವೆ ಪ್ರೊ. ಶಾರದಾ ಮೇಟಿ (ಪಾಟೀಲ)

ಸಾಹಿತ್ಯ ಸಂಸ್ಕೃತಿ ಸೇತುವೆ ಪ್ರೊ. ಶಾರದಾ ಮೇಟಿ (ಪಾಟೀಲ)

spot_img

ನಾವು – ನಮ್ಮವರು

 

ಪ್ರೊ. ಶಾರದಾ ಪಾಟೀಲ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರದ ಮೊದಲ ವಿಶ್ವಸ್ಥರು ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಮೇ 4 ರಂದು ಪುಣೆಯಲ್ಲಿ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ ಮತ್ತು ಸಮಸ್ತ ಲಿಂಗಾಯತ ಸಂಘಟನೆಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ” ಬಸವ ಭೂಷಣ ಪ್ರಶಸ್ತಿ ” ಪಡೆದ ಹಿರಿಮೆ ಅವರದು. ನಮ್ಮ ವೇದಿಕೆ ಯಲ್ಲಿ ಎಲ್ಲರಿಗೂ ಶಾರದಮ್ಮ ಅಂತಲೇ ಚಿರಪರಿಚಿತರು. ಮಾತೃಹೃದಯಿ, ವೇದಿಕೆಯ ಬಗೆಗೆ ಅಪಾರ ಕಳಕಳಿ, ಕಾಳಜಿ ಹೊಂದಿದ್ದಾರೆ. ಸಹೃದಯಿಗಳು,

ದಾಸೋಹಿಗಳು, ಬಸವತತ್ವದ ಅನುಯಾಯಿ, ವಚನ ಸಾಹಿತ್ಯ ದಲ್ಲಿ ಅಪಾರವಾದ ಆಸಕ್ತಿ. ತಮ್ಮ ವಿಷಯದ ಜೊತೆ ಜೊತೆಗೆ ಉಳಿದ ಎಲ್ಲ ವಿಷಯದಲ್ಲೂ ಅಗಾಧವಾದ ಅಧ್ಯಯನಶೀಲತೆ ಮತ್ತು ಪಾಂಡಿತ್ಯವನ್ನು ಗಳಿಸಿದವರು ಅತ್ಯಂತ ಹಸನ್ಮುಖಿ ವ್ಯಕ್ತಿತ್ವ ಮತ್ತು ಎಲ್ಲರನ್ನೂ ನಮ್ಮವರು ಎನ್ನುವ ಪ್ರೀತಿಯ ಗುಣ ಹೊಂದಿದ ಅಪರೂಪದ ಉತ್ಸಾಹಿ ಮಹಿಳೆ.

ಪ್ರೊ. ಶಾರದಾ ಪಾಟೀಲ ಅವರು 09.03. 1947 ರಲ್ಲಿ ವಿಜಯಪುರದ ಮೂಲ ಕೃಷಿ ಕುಟುಂಬದಲ್ಲಿ ಜನಿಸಿದರು
ಇವರ ತಂದೆಯವರು ಶಂಕರಗೌಡ ಭೀಮನಗೌಡ ಪಾಟೀಲ ಅವರು ನಿವೃತ್ತ ಮಾಮಲೇದಾರರು ಹಾಗೂ ಮುತ್ತಗಿ ಬಸವನ ಬಾಗೇವಾಡಿ ತಾಲೂಕು ವಿಜಯಪುರ ಜಿಲ್ಲೆಯವರು ಇವರ ತಾಯಿ ಗಂಗಾಬಾಯಿ ಶಂಕರಗೌಡ ಪಾಟೀಲಇವರಿಗೆ ನಾಲ್ಕು ಜನರು ಸಹೋದರಿಯರು, ಇಬ್ಬರು ಸಹೋದರರು. ಇವರ ಪ್ರಾಥಮಿಕ ಶಿಕ್ಷಣ ವಿಜಯಪುರ ಸಿಂದಗಿಯಲ್ಲಿ, ಹೈಸ್ಕೂಲ್ ಶಿಕ್ಷಣವನ್ನು ಶಂಕ್ರಪ್ಪ ಸಕ್ರಿ ಹೈಸ್ಕೂಲ ಬಾಗಲಕೋಟೆಯಲ್ಲಿ ಕಾಲೇಜು ಶಿಕ್ಷಣವನ್ನು ಬಸವೇಶ್ವರ ಕಾಲೇಜು ಬಾಗಲಕೋಟೆಯಲ್ಲಿ ಪದವಿ ಶಿಕ್ಷಣವನ್ನು ಕೆಸಿಪಿ ಸೈನ್ಸ್ ಕಾಲೇಜ್ ವಿಜಯಪುರದಲ್ಲಿ ಮುಗಿಸಿದ್ದಾರೆ (ಪ್ರಾಣಿ ಶಾಸ್ತ್ರ ಹಾಗೂ ಸಸ್ಯ ಶಾಸ್ತ್ರ) ಸ್ನಾತಕೋತ್ತರ ಶಿಕ್ಷಣವನ್ನು ಪ್ರಾಣಿ ಶಾಸ್ತ್ರದಲ್ಲಿ 1971ರಲ್ಲಿ ತೇರ್ಗಡೆಯಾದರು. ಇವರ ಮುಖ್ಯ ವಿಷಯ ಕೀಟಶಾಸ್ತ್ರ.

ಪ್ರೊ. ಶಾರದಾ ಪಾಟೀಲ ಅವರು ಶ್ರೀ ಅನ್ನದಾನೇಶ್ವರ ಕಲಾ, ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯ ಗದಗ ಜಿಲ್ಲೆಯ ನರೇಗಲ್ ನಲ್ಲಿ (ಉಪನ್ಯಾಸಕಿಯರಾಗಿ)
ರೀಡರ್ ಹಾಗೂ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 2004 ರಲ್ಲಿ ಇವರು ಸೇವೆಯಿಂದ ನಿವೃತ್ತಿ ಹೊಂದಿದರು.ಪ್ರೊ. ಶಾರದಾ ಪಾಟೀಲ ಅವರು ನಿವೃತ್ತಿಯ ನಂತರ 2006 ರಿಂದ ಇಲ್ಲಿಯವರೆಗೆ ಬಾದಾಮಿಯಲ್ಲಿ ವಾಸ್ತವ್ಯ ಹೂಡಿದ್ದಾರೆ.

1972 ಡಿಸೆಂಬರ್ 25ರಂದು ಪ್ರೊಫೆಸರ್ ಹನುಮರೆಡ್ಡಿ ರಾಮರೆಡ್ಡಿ ಮೇಟಿ ಪ್ರಾಚಾರ್ಯರು ಭೌತಶಾಸ್ತ್ರ ಪ್ರಾಧ್ಯಾಪಕರು ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯ (ಮೂಲತಃ ನರಗುಂದ ತಾಲೂಕಿನ ಅರಿಷಿಣಗೋಡಿ) ಅವರೊಂದಿಗೆ ವಿವಾಹವಾಯ್ತು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು
ಹಿರಿಯ ಮಗಳು ಡಾ. ಪ್ರಿಯದರ್ಶಿನಿ ಉಗಲವಾಟ
ಸ್ತ್ರೀರೋಗ ತಜ್ಞೆಯಾಗಿದ್ದಾರೆ.
ಅಳಿಯ ಡಾ.ಸುರೇಶ ಉಗಲವಾಟ M.S (Gen surgeon) ಇರುವರು. ಬಾದಾಮಿಯಲ್ಲಿ ದಂಪತಿಗಳು ತಮ್ಮದೇ ಆದ ಸ್ವಂತ ಆಸ್ಪತ್ರೆ ಹೊಂದಿದ್ದಾರೆ.

ಪ್ರೊ. ಶಾರದಾ ಪಾಟೀಲ ಅವರು ಕನ್ನಡ ,ಹಿಂದಿ ,ಇಂಗ್ಲಿಷ್ ಸಾಹಿತ್ಯ ವಿಶ್ಲೇಷಣೆ, ಶರಣ ಸಾಹಿತ್ಯದ ಬಗ್ಗೆ ಮತ್ತು ಕೃಷಿಯ ಬಗ್ಗೆ ಒಲವು ಹೊಂದಿದ್ದಾರೆ. ಇತಿಹಾಸ, ಸಂಸ್ಕೃತಿ ,ಪರಂಪರೆ, ಸಂಗೀತಗಳಲ್ಲಿ ಸಹ ಇವರಿಗೆ ವಿಶೇಷ ಆಸಕ್ತಿ.

ಪ್ರೊ. ಶಾರದಾ ಪಾಟೀಲ ಅವರ ಶೈಕ್ಷಣಿಕ ಸೇವೆ ಅಪಾರ ವಾದದ್ದು. ಕನ್ನಡದಲ್ಲಿ ಹಲವಾರು ವೈಜ್ಞಾನಿಕ ಲೇಖನಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ ಆಯೋಜಿಸಿದ “ಕನ್ನಡದಲ್ಲಿ ವೈಜ್ಞಾನಿಕ ಬರವಣಿಗೆ” ಎಂಬ ಕಮ್ಮಟದಲ್ಲಿ ಭಾಗವಹಿಸಿ ಜೀವ ಸೃಷ್ಟಿಯ ರಹಸ್ಯ ಪ್ರಬಂಧ ಮಂಡನೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಪ್ರಕಟವಾಗುವ ಪ್ರಸಾರಂಗ ವಿಭಾಗದಲ್ಲಿ “ಪ್ರಾಣಿ ಪ್ರಪಂಚದಲ್ಲಿ “ಅಮ್ಮಾ ಅವರ ಗಂಡಂದಿರು” ಪುಸ್ತಕ ಪ್ರಕಟಣೆ.

ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ವೈಜ್ಞಾನಿಕ ಲೇಖನಗಳು ಪ್ರಕಟಗೊಂಡಿವೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ಹಲವಾರು ಕವಿಗೋಷ್ಠಿಯಲ್ಲಿ ಭಾಗಿಯಾಗಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಆಯೋಜಿಸಿದ ಗದಗ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನದಲ್ಲಿ ಪ್ರಬಂಧ ಮಂಡನೆ, 2009ರಲ್ಲಿ ಶರಣ ಮೇಳ ಕೂಡಲಸಂಗಮದಲ್ಲಿ ಮೂರು ಸಲ ಪ್ರಬಂಧ ಮಂಡನೆ ಮಾಡಿದ್ದಾರೆ.

ಪ್ರೊ. ಶಾರದಾ ಪಾಟೀಲ ಅವರು ಹಲವಾರು ಸಾಮಾಜಿಕ ಸಂಘಟನೆಗಳ ಸದಸ್ಯತ್ವವನ್ನು ಹೊಂದಿದ್ದಾರೆ.
ಹೇಮವೇಮಚಾರಿ ಟೇಬಲ್ ಮಹಿಳಾ ವಿಭಾಗದ ಸಂಸ್ಥೆಗೆ ಅಧ್ಯಕ್ಷೆಯಾಗಿದ್ದಾರೆ. ಕಾವೇರಿ ಮಹಿಳಾ ಸಂಘ ನರೇಗಲ್ಲ ಅಡಿಯಲ್ಲಿ ಕಾವೇರಿ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ ನರೇಗಲ್ಲ ಕಾವೇರಿ ಮಹಿಳಾ ಹಾಲು ಉತ್ಪಾದಕರ ಸಂಘ ನರೇಗಲ್ ನಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.ಅಕ್ಕನ ಬಳಗ ಮತ್ತು ಮಹಿಳಾ ಸಂಸ್ಥೆ ಕೋಶಾಧಿಕಾರಿಯಾಗಿ ಸೇವೆ ಸಲ್ಲಿಸಿರುವರು.

ಪ್ರೊ. ಶಾರದಾ ಪಾಟೀಲ್ ಅವರು ಹಲವಾರು ಸಾಹಿತ್ಯ ಸಂಘಟನೆಗಳ ಸದಸ್ಯತ್ವವನ್ನು ಹೊಂದಿದ್ದಾರೆ.
ರೋಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಸೇವೆ, ರೋಣ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ, ಬಾದಾಮಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಸೇವೆ, ವೀರ ಪುಲಕೇಶಿ ವಿದ್ಯಾವರ್ಧಕ ಸಂಸ್ಥೆಯ ಪದವಿ ಮಹಾವಿದ್ಯಾಲಯದ ಆಡಳಿತ ಮಂಡಳಿಯ ನಿರ್ದೇಶಕರಾಗಿ ಪ್ರಸ್ತುತದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

*ರಾಷ್ಟ್ರಮಟ್ಟದ (INTAC) INDIAN NATIONAL TRUST FOR ART AND HERITAGE. NEW DELHI. ಆಜೀವ ಸದಸ್ಯರಾಗಿ,
*”Indian poetess” ರಾಷ್ಟ್ರ ಮಟ್ಟದ ಸಂಸ್ಥೆಯ ಆಜೀವ ಸದಸ್ಯತ್ವವನ್ನು ಹೊಂದಿದ್ದಾರೆ
2015 ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ ಬೆನ್ ನಲ್ಲಿ ಬಸವ ಜಯಂತಿಯ ಅಂಗವಾಗಿ ಆಯೋಜಿಸಿದ “ಅರಿದರೆ ಶರಣ ಮರೆದಡೆ ಮಾನವ” ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ
*ಕರ್ನಾಟಕ ಇತಿಹಾಸ ಅಕಾಡೆಮಿ ಅಜೀವ ಸದಸ್ಯತ್ವ,
ಸಿರಿಗಂಧ ಸಂಸ್ಕೃತಿ ಬಳಗ ಬಾದಾಮಿ ನಿರ್ದೇಶಕರಾಗಿದ್ದಾರೆ.

ಪ್ರೊ. ಶಾರದಾ ಪಾಟೀಲ ಅವರು ದತ್ತಿ ದಾಸೋಹಗಳನ್ನು ಸಹ ಸ್ಥಾಪಿಸಿದ್ದಾರೆ. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನಲ್ಲಿ ತಂದೆಯವರ ಹೆಸರಿನಲ್ಲಿ ದತ್ತಿ ಸ್ಥಾಪನೆ,
ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ತಂದೆಯವರ ಹೆಸರಿನಲ್ಲಿ ದತ್ತಿಸ್ಥಾಪನೆ ಮಾಡಿದ್ದಾರೆ.

ಪ್ರೊ. ಶಾರದಾ ಪಾಟೀಲ ಅವರ ದಾಸೋಹ ಸೇವೆ ಅಗಾಧವಾದದ್ದು. ಬಾದಾಮಿಯ ಹೇಮವೇಮ ಸಮುದಾಯ ಭವನದಲ್ಲಿ ಭೋಜನಾಲಯ, ಕೂಡಲಸಂಗಮದಲ್ಲಿ ಬಸವಚೇತನ ಹೈಸ್ಕೂಲ್ ಗೆ ಒಂದು ಲಕ್ಷದ 11,000 ಸಾವಿರ ರೂಪಾಯಿ ದ
ದೇಣಿಗೆ,ಅನ್ನದಾನೇಶ್ವರ ಪದವಿ ಕಾಲೇಜಿನಲ್ಲಿ ಒಂದು ಲಕ್ಷ ರೂಪಾಯಿ ನೀಡಿದ್ದಾರೆ. (ಬಡ ವಿದ್ಯಾರ್ಥಿಗಳಿಗಾಗಿ)
ಬಸವನ ಬಾಗೇವಾಡಿ ಕರಿಬಂಟನಾಳ ಗ್ರಾಮದಲ್ಲಿ ಶಾಲಾ ಕೊಠಡಿಗೆ 5 ಲಕ್ಷ ರೂಪಾಯಿ ನೀಡಿದ್ದಾರೆ.
ಈಶ್ವರ್ ಮಂಟೂರ ಬಸವಜ್ಞಾನ ಗುರುಕುಲ ಹುನ್ನೂರು ಮದರ್ಖಂಡಿಯಲ್ಲಿ ಗುರು ಬಸವೇಶ್ವರ ಮೂರ್ತಿ ದಾಸೋಹ,ಬಸವಕಲ್ಯಾಣದಲ್ಲಿ ಅನುಭವ ಮಂಟಪಕ್ಕೆ 25,000 ದಾಸೋಹ, ಇನ್ನಿತರ ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಪ್ರೊ. ಶಾರದಾ ಪಾಟೀಲ ಅವರು ಹಲವಾರು ರಾಜ್ಯಮಟ್ಟದ ವಿಚಾರಗೋಷ್ಠಿಗಳಲ್ಲಿ ಭಾಗವಹಿಸಿ ಉಪನ್ಯಾಸ ನೀಡಿರುವರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ರಾಜ್ಯಮಟ್ಟದ ಸಮಾವೇಶವನ್ನು ಗದಗಿನಲ್ಲಿ ಆಯೋಜಿಸಿದಾಗ ಅದರಲ್ಲಿ ,”ಶರಣ ಸಂಸ್ಕೃತಿ ಉಳಿಸುವಲ್ಲಿ ಬೆಳೆಸುವಲ್ಲಿ ಮಹಿಳೆಯ ಪಾತ್ರ”ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ್ದಾರೆ.
ಅಖಿಲ ಭಾರತ ಕದಳಿ ಮಹಿಳಾ ಸಮ್ಮೇಳನ ದಾವಣಗೆರೆಯಲ್ಲಿ “ನಿರ್ವಯಲು” ಸ್ವರಚಿತ ರೂಪಕಕ್ಕೆ ಅಪಾರ ಜನಮನ್ನಣೆ ಗಳಿಸಿದ್ದು ಹೆಮ್ಮೆಯ ವಿಷಯ.
*ಹಂಪಿ ವಿಶ್ವವಿದ್ಯಾಲಯದಿಂದ ಪ್ರಕಟಗೊಳ್ಳುತ್ತಿರುವ’ ವಿಜ್ಞಾನ ಲೋಕ’ ಎಂಬ ಪತ್ರಿಕೆಯಲ್ಲಿ ಹಲವಾರು ವೈಜ್ಞಾನಿಕ ಲೇಖನಗಳನ್ನು ಬರೆದ ಅನುಭವ ಇವರಿಗಿದೆ.
ರೋಣ ತಾಲೂಕ್ ನರೇಗಲ್ ನಲ್ಲಿ ಮಹಿಳೆಯರ ಆರ್ಥಿಕ ಸಂವರ್ಧನೆಗಾಗಿ ‘ ಕಾವೇರಿ ಮಹಿಳಾ ಸಂಘ ರಚಿಸಿ, ಅದರ ಅಡಿಯಲ್ಲಿ ‘ಮಹಿಳಾ ಹಾಲು ಉತ್ಪಾದಕರ ಸಂಘ, ಹೂ ಮನೆ ಎನ್ನುವ ಒಂದು ಶಿಶುವಿಹಾರ ಪ್ರಾರಂಭಿಸಿದ್ಧರು. ಮಹಿಳೆಯರಿಗೆ ಮೇಣಬತ್ತಿ ಮಾಡುವ, ಹತ್ತಿ ತುಂಬುವ ಬಾರದಾನ, ಊದಿನ ಕಡ್ಡಿ ಮಾಡುವುದು, ಎಂಬ್ರಾಯ್ಡರಿ ಟೈಲರಿಂಗ್ ವೃತ್ತಿ ಗಳ ಬಗ್ಗೆ ಕಾರ್ಯಗಾರ ನಡೆಸಿ ಅವರನ್ನು ಆರ್ಥಿಕವಾಗಿ
ಸಬಲಗೊಳಿಸುವಲ್ಲಿ ದೊಡ್ಡ ಮಟ್ಟದ ಪ್ರಯತ್ನ ಮಾಡಿದ್ದಾರೆ
ಹಲವಾರು ಮಠಮಾನ್ಯಗಳಿಗೆ ಆಧ್ಯಾತ್ಮಿಕ ಪುಸ್ತಕಗಳನ್ನು ಪ್ರಕಟಿಸಲು ಸಹಾಯಧನ ನೀಡಿದ್ದಾರೆ.

” ಬಸವ ಧರ್ಮ ಇದು ಕನ್ನಡದ ಧರ್ಮ. ವಿಶ್ವಧರ್ಮವಾಗಿ ಬೆಳೆದು ನಿಲ್ಲುವಂತಾಗಬೇಕು. ಆ ನಿಟ್ಟಿನಲ್ಲಿ ನಾವೆಲ್ಲ ಒಗ್ಗಟ್ಟಿನಿಂದ ಈ ಅನನ್ಯ ತತ್ವ ಸಿದ್ಧಾಂತಗಳ ತೇರನ್ನು ಎಳೆಯಬೇಕಿದೆ. ಮನೆ ಮನೆಗಳಲ್ಲಿ, ಮನಮನಗಳಲ್ಲಿ ಬಸವ ಪ್ರಜ್ಞೆ ಮೂಡಬೇಕು. ಕಾಯಕ ದಾಸೋಹಗಳ ಚಿಂತನೆ ಪ್ರತಿಯೊಬ್ಬನ ಅಂತರಂಗಕ್ಕೆ ಇಳಿಯಬೇಕು. ಅಂದಾಗ ಮತ್ತೆ ಕಲ್ಯಾಣ.”ಎನ್ನುವುದು ಅವರ ಸಿದ್ಧಾಂತ.

ಕೊನೆಯಲ್ಲಿ ಪ್ರೊ. ಶಾರದಾ ಪಾಟೀಲ ಅವರ ಜೀವನ ಸಂದೇಶ ಈ ರೀತಿ ಇದೆ. ಇರಬೇಕಿಲ್ಲ ನಾವು ಅವರಿವರಂತೆ, ಇದ್ದರೂ ಸಾಕು ಯಾರಿಗೂ ಹೊರೆ ಆಗದಂತೆ. ಬೇಕಿಲ್ಲ ನಮಗೆ ಅವರು ಹಾಗಂತೆ ಹೀಗಂತೆ….
ನಮ್ಮಷ್ಟಕ್ಕೆ ನಾವಿದ್ದರೆ ಬೇರೆ ಯಾವ ಚಿಂತೆ….
ಸುಖ-ದುಃಖ ಏನಾದರಂತೆ….
ಬದುಕನ್ನು ಸ್ವೀಕರಿಸೋಣ ಬಂದಂತೆ.
“Be good,Do good,When the time comes bow down & dissappear”

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

RELATED ARTICLES

Most Popular

error: Content is protected !!
Join WhatsApp Group