ಹುಣಶ್ಯಾಳ ಪಿಜಿಯ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮಕ್ಕೆ ಕನ್ನೇರಿ ಶ್ರೀಗಳಿಂದ ಚಾಲನೆ

Must Read

ಮೂಡಲಗಿ: ನಿಜಗುಣ ದೇವರು ಎಲ್ಲಾ ಸಂಪ್ರದಾಯದೊಂದಿಗೆ ಬೆರೆತು ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ ಎಂದು ಕೊಲ್ಲಾಪೂರದ ಶ್ರೀ ಸಿದ್ಧಗಿರಿ ಕನ್ನೇರಿಮಠದ ಡಾ: ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಹೇಳಿದರು.

ಅವರು ಸೋಮವಾರದಂದು ತಾಲೂಕಿನ ಹುಣಶ್ಯಾಳ ಪಿ.ಜಿ ಗ್ರಾಮದ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಜರುಗಿದ ಶ್ರೀ ನಿಜಗುಣ ದೇವರ ಷಷ್ಠ್ಯಬ್ಧಿ ಸಂಭ್ರಮ ಸಮಾರಂಭದ 25ನೇ ಸತ್ಸಂಗ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಶ್ರೀಮಠಕ್ಕೆ ಎಲ್ಲಾ ಪರಂಪರೆಯ ಸ್ವಾಮಿಗಳು ಬರುತ್ತಾರೆ ಎಂದರೆ ನಿಜಗುಣ ದೇವರ ಒಂದು ಉದ್ದೇಶ ಪ್ರೀತಿಯೇ ದೇವರು. ಎಲ್ಲರನ್ನೂ ಪ್ರೀತಿಸುವುದು ಎನ್ನುವುದು ಅವರ ತತ್ವವಾಗಿದೆ. ಭಗವಂತನು ಒಲಿಯುವುದು ಪ್ರೀತಿಗಾಗಿ. ಇವತ್ತು ನಿಜಗುಣ ದೇವರ ಬದುಕು ತುಂಬಾ ಅದ್ಭುತವಾದದ್ದು ಎಂದರು.

ಬೆಳಗಳೂರಿನ ವಿಭೂತಿಪೂರಮಠದ ಡಾ: ಶ್ರೀ ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ ನಿಜಗುಣ ದೇವರ ಸಾಹಿತ್ಯಕ್ಕೆ ನಾವು ಕೂಡಾ ಮಾರು ಹೋದವರೇ ಎಂದರಲ್ಲದೇ ನಗದು ಇಲ್ಲದೇ ಇರುವವನು ಬಡವನಲ್ಲ.ನಗು ಇಲ್ಲದವನು ಬಡವ. ಯಾವಾಗಲೂ ನಗುವ ನಿಜಗುಣ ದೇವರ ವ್ಯಕ್ತಿತ್ವ ಎಲ್ಲರಿಗೂ ಕೂಡಾ ಮಾದರಿಯಾಗಿದೆ ಎಂದರು.

ಷಷ್ಠ್ಯಬ್ಧಿ ಸಂಭ್ರಮದ ಗೌರವಾಧ್ಯಕರು ಹಾಗೂ ಬೆಳಗಾವಿ-ಹುಕ್ಕೇರಿ ಹಿರೇಮಠದ ಪೂಜ್ಯ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಅವರು ಮಾತನಾಡಿ, ಸಂತ ಎಂದರೆ ಸ್ವಂತ ವಿಚಾರ, ಸ್ವಂತಕ್ಕಾಗಿ ಬದುಕುವವನಲ್ಲಾ ಎಲ್ಲರೂ ನನ್ನವರು ಎಂದು ಬದುಕುವವನು ನಿಜವಾದ ಸಂತ ಆ ಸಾಲಿನಲ್ಲಿ ನಿಜಗುಣ ದೇವರು ಇದ್ದಾರೆ ಎಂದರು.

ವೇದಿಕೆ ಮೇಲೆ ಶ್ರೀಮಠದ ನಿಜಗುಣ ದೇವರು, ಅರಕೇರಿಯ ಶ್ರೀ ಅವಧೂತ ಸಿದ್ಧ ಮಹಾರಾಜರು, ಜಗದ್ಗುರು ಶ್ರೀ ವೃಷಭಲಿಂಗ ಮಹಾಸ್ವಾಮಿಗಳು, ಶ್ರೀ ಮಹಾದೇವಾನಂದ ಸರಸ್ವತಿ ಮಹಾಸ್ವಾಮಿಗಳು,ಸದಾನಂದ ಮಹಾಸ್ವಾಮಿಗಳು, ಸುಣಧೋಳಿಯ ಶ್ರೀ ಅಭಿನವ ಶಿವಾನಂದ ಮಹಾಸ್ವಾಮಿಜಿ, ನಯಾನಗರದ ಶ್ರೀ ಅಭಿನವ ಸಿದ್ಧಲಿಂಗ ಮಹಾಸ್ವಾಮಿಜಿ,ಮಾತೋಶ್ರೀ ಸಿದ್ದೇಶ್ವರಿ ತಾಯಿಯವರು, ತೊಂಡಿಕಟ್ಟಿಯ ಶ್ರೀ ಅಭಿನವ ವೆಂಕಟೇಶ ಮಹಾರಾಜರು, ಕೃಪಾನಂದ ಮಹಾಸ್ವಾಮಿಜಿ ಸೇರಿದಂತೆ ಅನೇಕ ಮಹಾತ್ಮರು ಉಪಸ್ಥಿತರಿದ್ದರು. ಗಣೇಶ ಮಹಾರಾಜರು ಕಾರ್ಯಕ್ರಮ ನಿರೂಪಿಸಿದರು.

ಮಹಾತ್ಮರ ಭವ್ಯ ಸ್ವಾಗತ: 

ಸುಕ್ಷೇತ್ರದ ಮಹಾದ್ವಾರದಿಂದ ಶ್ರೀಮಠಕ್ಕೆ ಶೃಂಗಾರ ರಥದಲ್ಲಿ ಮಹಾತ್ಮರನ್ನು ಸಹಸ್ರ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು. ವೈರಾಗ್ಯನಿಧಿ ಮಾತೋಶ್ರೀ ಚಂಪಮ್ಮಾ ತಾಯಿಯವರ ಮಂದಿರ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಜರುಗಿತು. ಬೆಳಿಗ್ಗೆ ಶ್ರೀ ಸಿದ್ಧಲಿಂಗ ಯತಿರಾಜರ, ಶ್ರೀ ಶಾಂಭವಿ ಮಾತೆಯ, ಶ್ರೀ ಸಿದ್ಧಲಿಂಗ ಮಹಾರಾಜರ ಮೂರ್ತಿಗಳಿಗೆ ರುದ್ರಾಭಿಷೇಕ ಜರುಗಿತು. ಓಂಕಾರ ಧ್ವಜಾರೋಹಣ, ಶ್ರೀ ಸಿದ್ಧಲಿಂಗ ರಥದ ಕಳಸಾರೋಹಣ, ನಂತರ ಸಹಸ್ರ ಮುತೈದೆಯರ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group