ಮೂಡಲಗಿ – ಜಗತ್ತಿನ ಅತೀ ಶ್ರೇಷ್ಠ ಸಂವಿಧಾನವಾದ ನಮ್ಮ ದೇಶದ ಹೆಮ್ಮೆಯ ಸಂವಿಧಾನ ಸಮರ್ಪಣೆಯ ಅಮೃತ ಮಹೋತ್ಸವದ ಅಂಗವಾಗಿ ಮೂಡಲಗಿ ಪಟ್ಟಣದ ಶ್ರೀ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಬೃಹತ್ ಸಂವಿಧಾನ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.
ಮಹಾವಿದ್ಯಾಲಯದ ಎಲ್ಲಾ ಉಪನ್ಯಾಸಕರು ಸುಮಾರು ೧೨೦೦ ವಿದ್ಯಾರ್ಥಿಗಳೊಂದಿಗೆ ಕಾಲೇಜಿನಿಂದ ಹೊರಟು ಪಟ್ಟಣದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದವರೆಗೆ ಸಂವಿಧಾನ ಜಾಗೃತಿ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಅಂಭೇಡ್ಕರ್ ವೃತ್ತದಲ್ಲಿ ಸಮಾವೇಶಗೊಂದು, ಅಲ್ಲಿ ಸಂವಿಧಾನದ ಪೀಠಿಕೆಯ ಪ್ರತಿಜ್ಙಾ ವಿಧಿಯನ್ನು ಬೋಧಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಮಹೇಶ ಕಂಬಾರ ಅವರು ಮಾತನಾಡುತ್ತಾ, ನಮ್ಮ ಮಹಾವಿದ್ಯಾಲಯವು ಪ್ರತಿ ವರ್ಷದಂತೆ ಈ ವರ್ಷವೂ ಸಹ ವಿಶಿಷ್ಟವಾಗಿ ಆಚರಿಸುತ್ತ ಬಂದಿದ್ದು, ಕಳೆದ ಸಾಲಿನಲ್ಲಿ ‘ಮನೆ ಮನೆಗೆ ಸಂವಿಧಾನ’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದನ್ನು ಸ್ಮರಿಸಿದರು. ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಅವಕಾಶವನ್ನು ಕಲ್ಪಿಸಿರುವ ಸಂವಿಧಾನವು ಈ ದೇಶದ ನಾಡಿಮಿಡಿತವಾಗಿದೆ ಮತ್ತು ಪ್ರತಿಯೊಬ್ಬರೂ ಸಂವಿಧಾನದ ಆಶಯಗಳಿಗೆ ತಕ್ಕಂತೆ ಬದುಕಬೇಕೆಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೂಡಲಗಿಯ ಸಮಾಜ ಕಲ್ಯಾಣ ಇಲಾಖೆಯ ನಿಲಯಪಾಲಕರಾದ ಯಲ್ಲಪ್ಪ ಭಜಂತ್ರಿಯವರು ಪೀಠಿಕೆಯ ಪ್ರತಿಜ್ಙಾ ವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದಲ್ಲಿ ಗುತ್ತಿಗೆದಾರರಾದ ಮರಿಯಪ್ಪ ಮರೆಪ್ಪಗೋಳ, ಶಾಬು ಸಣ್ಣಕ್ಕಿ, ಸುರೇಶ ಸಣ್ಣಕ್ಕಿ, ಉಪನ್ಯಾಸಕರಾದ ಸಂಜೀವ ಗಾಣಿಗೇರ, ಸಂಜೀವ ಮದರಖಂಡಿ, ಚೇತನ್ ರಾಜ್, ಯೋಗಿನಿ, ರಾಧಾ ಎಂ. ಎನ್, ಸುಮಿತ್ರಾ ಮಾಸ್ತಿ, ಶಿವಾನಂದ ಚಂಡಕೆ, ಪ್ರಸಾದ ವಗ್ಗನ್ನವರ, ನಿಂಗಪ್ಪ ಸಂಗ್ರೋಜಿಕೊಪ್ಪ, ಡಾ. ಹಾಲಪ್ಪ ಮಡಿವಾಳರ, ಹನಮಂತ ಕಾಮಬಳೆ ಮುಂತಾದವರು ಭಾಗವಹಿಸಿದರು.