ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ

Must Read

ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ ಚಂದ್ರಶೇಖರ್ ಪತ್ತಾರ್ ಹೇಳಿದರು.

ಬುಧವಾರದಂದು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ವತಿಯಿಂದ ವಿವಿಧ ಕಲಾ ಕ್ಷೇತ್ರಗಳಲ್ಲಿ ಪಿ.ಎಚ್.ಡಿ ಪದವಿ ಪಡೆದ ಕಲಾವಿದರಿಗೆ ಗೌರವ ಸನ್ಮಾನ ನೆರವೇರಿಸಿ ಮಾತನಾಡಿದ ಅವರು, ಜಾನಪದ ಕಲೆ ಸಾಗರವಿದ್ದಂತೆ, ಗ್ರಾಮೀಣ ಪ್ರದೇಶದಲ್ಲಿರುವ ಸಾಮಾನ್ಯ ವ್ಯಕ್ತಿ, ಕೂಡ ನಶಿಸಿ ಹೋಗುತ್ತಿರುವ ಕಲೆಯನ್ನು ಪೋಷಿಸುತ್ತ ಅದ್ಭುತ ಕಲಾವಿದನಾಗಿ ಹೊರಹೊಮ್ಮಬಹುದು ಎಂಬುದಕ್ಕೆ ಇವತ್ತಿನ ನಾಲ್ವರೂ ಅತಿಥಿಗಳು ನಿದರ್ಶನ ಎಂದು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಇತ್ತೀಚೆಗೆ ತಮಿಳುನಾಡಿನ ಏಷ್ಯಾ ಇಂಟರ್ ನ್ಯಾಶನಲ್ ಕಲ್ಚರ್ ರಿಸರ್ಚ್ ಯುನಿವರ್ಸಿಟಿಯಿಂದ ಭಜನಾ ಕಲೆಯಲ್ಲಿ ಗೌರವ ಡಾಕ್ಟರೇಟ್‌ ಪಡೆದ ಮುಗಳಖೋಡ ಗ್ರಾಮದ ಹಾರ್ಮೋನಿಯಂ ವಾದಕ ಡಾ.ಮಹಾಲಿಂಗ ಯಡವನ್ನವರ ಹಾಗೂ ಗಾಯಕ ಡಾ.ಶಿವಲಿಂಗ ಮುನ್ಯಾಳ, ಸಿದ್ಧಿ ಸೋಗು ಕಲೆಯಲ್ಲಿ ಡಾಕ್ಟರೇಟ್‌ ಪಡೆದ ಮೂಡಲಗಿಯ ಡಾ.ಚುಟುಕುಸಾಬ್ ಜಾತಗಾರ, ಸಮರ್ಪಣೆ ಮತ್ತು ಸಮಾಜ ಸೇವೆಯಲ್ಲಿ ಇಂಡಿಯನ್ ಅಚಿವರ ಎಕ್ಸಲೆನ್ಸ್ ಅವಾರ್ಡ್ ಪಡೆದ ಸವಸುದ್ದಿ ಗ್ರಾಮದ ಶ್ರೀ ಕೃಷ್ಣ ಪಾರಿಜಾತ ಕಲಾವಿದ ಮೀರಾಸಾಬ್ ನದಾಫ್ ಅವರಿಗೆ ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ಸರ್ವ ಸದಸ್ಯರಿಂದ ಗೌರವ ಸನ್ಮಾನ ನೆರವೇರಿಸಲಾಯಿತು. ಸನ್ಮಾನಿತ ಅತಿಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ಅಲ್ತಾಫ್ ಹವಾಲ್ದಾರ್, ಸುಭಾಸ್ ಕಡಾಡಿ, ವಿನೋದ್ ಎಮ್ಮಿ, ಸಚಿನ್ ಪತ್ತಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group