ಸಿಂದಗಿ: ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ಕಾರ್ಪೋರೇಟ ಕಂಪನಿಗಳು ದೇಶವನ್ನು ಆಳಿದ ಬ್ರಿಟಿಷ್ ಈಸ್ಟ ಇಂಡಿಯಾ ಕಂಪನಿಗಿಂತಲು ಕ್ರೂರಿಗಳಾಗಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಅಧ್ಯಕ್ಷ ಅಣ್ಣಾರಾಯ ಈಳಗೇರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರೈತ ಕಾರ್ಮಿಕರ ತಾಲೂಕು ಪಧಾಧಿಕಾರಿಗಳ ಜಂಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂದು ಸುಲಿಗೆ ಮಾಡುವ ಈಸ್ಟ್ ಇಂಡಿಯಾ ಕಂಪನಿ ಒಂದೆ ಇದ್ದರೆ ಇಂದು ಸ್ವದೇಶಿ ಹಾಗೂ ವಿದೇಶಿ ನೂರಾರು ಕಂಪನಿಗಳು ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಅಂತವರ ಬೆನ್ನಿಗೆ ಕೇಂದ್ರ ಸರಕಾರ ನೀತಿದೆ. ದೇಶದ ಸ್ವಾವಲಂಬನೆಗೆ ಭದ್ರ ಬುನಾದಿ ಹಾಕಿರುವ ರೈಲ್ವೇ, ವಿಮಾನ, ಸಾರಿಗೆ, ಎಲ್.ಐ.ಸಿ ಬ್ಯಾಂಕು, ತೈಲಭಾವಿಗಳು ಮುಂತಾದ ಸಾರ್ವಜನಿಕ ಸಂಸ್ಥೆಗಳನ್ನು ಈ ಕಂಪನಿಗಳಿಗೆ ಮಾರುವುದು ಒಂದೆಡೆಯಾದರೆ ಈ ಕಂಪನಿಗಳ ಲಕ್ಷಾಂತರ ಕೋಟಿ ಸಾಲಮನ್ನಾ ಮಾಡುವುದು ಹತ್ತಾರು ಲಕ್ಷ ಕೋಟಿಯಷ್ಟು ವಸೂಲಿಯಾಗದ ಸಾಲ ಕೈ ಬಿಡುವುದು ಲಕ್ಷ ಲಕ್ಷ ಕೋಟಿ ತೆರಿಗೆ ಮನ್ನಾ ಮಾಡುವುದರೊಂದಿಗೆ ದೇಶದ ಆರ್ಥಿಕತೆಯನ್ನು ದಿವಾಳಿ ಮಾಡಲಾಗಿದೆ ಎಂದು ಟೀಕಿಸಿದರು.
ಕಾರ್ಮಿಕರ ಕಾನೂನುಗಳ ತಿದ್ದುಪಡಿ ಕೃಷಿನಾಶಕ, ರೈತ ವಿರೋಧಿ ಮೂರು ಕರಾಳ ಕಾನೂನುಗಳ ಜಾರಿ ಎ.ಪಿ.ಎಮ್.ಸಿ, ವಿದ್ಯುತ್ ಮುಂತಾದ ಜನ ವಿರೋಧಿ ಕರಾಳ ಕಾನೂನುಗಳು ಜಾರಿಗೆ ತಂದು ದೇಶದ ಜನರನ್ನು ಕಾರ್ಪೋರೇಟ ಕಂಪನಿಗಳ ಗುಲಾಮರನ್ನಾಗಿ ಮಾಡಲಾಗುತ್ತಿದೆ ಎಂದರು ಇದನ್ನು ವಿರೋಧಿಸಿ ಹೋರಾಟ ಮಾಡುವ ಜನರನ್ನು ದೇಶದ್ರೋಹಿಗಳು ನಗರ ನಕ್ಸಲರು ಎಂದು ಹೇಳಿ ಜೈಲಿಗೆ ತಳ್ಳಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನೆ ಬುಡಮೇಲು ಮಾಡಲು ಹೊರಟಿರುವ ಕೇಂದ್ರದ ನರೇಂದ್ರ ಮೋದೀಜಿಯವರ ಸರಕಾರವನ್ನು ತೊಲಗಿಸಲು ಸ್ವಾತಂತ್ರ ಹೋರಾಟದ ಚಲೇಜಾವ್ ಚಳುವಳಿಯಂಥ ಹೋರಾಟ ಮಾಡಬೇಕಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಿ.ಐ.ಟಿ.ಯು ಕಾರ್ಮಿಕ ಸಂಘಟನೆಯ ತಾಲೂಕ ಅಧ್ಯಕ್ಷೆ ಸರಸ್ವತಿ ಮಠ ಅವರು ವಹಿಸಿದ್ದರು.
ಈ ಸಂದರ್ಭದಲ್ಲಿ ಅಂಗನವಾಡಿ ನೌಕರರ ಸಂಘದ ಪ್ರತಿಭಾ ಕುರುಡೆ, ಅಕ್ಷರ ದಾಸೋಹ ನೌಕರ ಸಂಘ, ಗ್ರಾ.ಪಂ ನೌಕರರ ಸಂಘ ಎಮ್.ಕೆ ಚಳ್ಳಗಿ ರೈತ ಸಂಘ, ಬಸೀರಅಹ್ಮದ ತಾಂಬೆ, ಮಲ್ಲಿಕಾರ್ಜುನ ಬಳಬಟ್ಟಿ, ದವಲಸಾಬ ಜಮಾದಾರ ಮಾತನಾಡಿ ಕರಾಳ ಕಾನೂನುಗಳ ವಿರುದ್ದ ಹೋರಾಟ ಮಾಡುವುದಾಗಿ ಘೋಷಿಸಿದರು.
ನಂತನ ನಡೆದ ಚರ್ಚೆಯಲ್ಲಿ ದೇಶದಾದ್ಯಂತ ಅಗಷ್ಟ-9 ರಂದು ನಡೆಯುವ ಕಾರ್ಪೋರೇಟ ಕಂಪನಿಗಳೆ ದೇಶ ಬಿಟ್ಟು ತೊಲಗಿ ಚಳವಳಿಯನ್ನು ಸಿಂದಗಿ ತಾಲೂಕದಲ್ಲಿಯು ಮಾಡಲು ತೀರ್ಮಾನ ಕೈಗೊಳ್ಳಲಾಯಿತು.
ಶ್ರೀಮಂತ ಮರಾಠೆ, ಅನ್ವರ ಹುಸೇನ ಮುಲ್ಲಾ, ಮಲ್ಲು ಕುಕನೂರ, ರಮೇಶ ತಳವಾರ, ಗುರುಪಾದ ಹಡಪದ, ಆನಂದ ತಳವಾರ, ಕುಮಾರ ಪಾಟೀಲ, ದೇವಕ್ಕೇಮ್ಮ ಬೋರಗಿ, ಎಸ್.ಜಿ.ಬೋರಗಿ, ಎಮ.ಜಿ.ಪರಗೊಂಡ ಎಮ.ಎಮ.ಹುಣಶ್ಯಾಳ ಜಯಶ್ರೀ ಪಾರ್ತನಳ್ಳಿ, ರೇಣುಕಾ ಸುಣಗಾರ, ಸುಬದ್ರಾ ಸುಣಗಾರ, ಸಜ್ಜನಬಾಯಿ ಯಂಕಂಚಿ ಸೇರಿದಂತೆ ಹಲವರು ಇದ್ದರು.
ಗ್ರಾ.ಪಂ ನೌಕರರ ಸಂಘದ ತಾಲೂಕ ಕಾರ್ಯದರ್ಶಿ ಎಮ.ಎಸ.ಕೊಂಡಗುಳಿ ಸ್ವಾಗತಿಸಿದರು. ಅಂಗನವಾಡಿ ನೌಕರರ ಸಂಘದ ಸರೋಜಿನಿ ಗದ್ದಗಿಮಠ ವಂದಿಸಿದರು.
ಸಭೆಯು ಪ್ರಾರಂಭವಾಗುವದಕ್ಕೂ ಮುನ್ನ ಇತ್ತಿಚೆಗೆ ನಿಧನರಾದ ಕ.ಪ್ರಾಂತ.ರೈತ ಸಂಘದ ಮಾಜಿ ತಾಲೂಕ ಅಧ್ಯಕ್ಷ ಹಾಗೂ ಹಾಲಿ ಮೋರಟಗಿ ಘಟಕದ ಅಧ್ಯಕ್ಷ ಚಿನ್ನಪ್ಪ ಕುಂಬಾರ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸುವುದರೊಂದಿಗೆ ಮೈತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.