- Advertisement -
ಮೂಡಲಗಿ – ತಾಲೂಕಿನ ಹುಣಶಾಳ ಪಿ ಜಿ ಗ್ರಾಮದಲ್ಲಿ ಭಾರೀ ಮಳೆ ಗಾಳಿಗೆ ಮರವೊಂದು ಆಕಳಿನ ಮೇಲೆ ಉರುಳಿದ ಪರಿಣಾಮ ಎತ್ತು ಸ್ಥಳದಲ್ಲಿಯೇ ಸಾವೀಗೀಡಾದ ಪ್ರಕರಣ ಜರುಗಿದೆ.
ಶಂಕರ ರೊಡ್ಡನವರ ಎಂಬುವವರಿಗೆ ಸೇರಿದ ಆಕಳ ಮೇಲೆ ಭಾರಿ ಮರ ಉರುಳಿ ಬಿದ್ದಿದೆ. ತುಂಬಾ ದಿನಗಳಿಂದ ಮಳೆ ಬಾರದೆ ಹೈರಾಣಾದ ಜನತೆಗೆ ತಂಪೆರೆದಿದೆ ಎನ್ನುವಷ್ಟರಲ್ಲಿ ಭಾರೀ ಮಳೆ ಗಾಳಿಗೆ ಅನೇಕ ಅನಾಹುತಗಳನ್ನು ಮಳೆ ತಂದೊಡ್ಡಿದೆ.
ಮಳೆಗೆ ಮರ ಬಿದ್ದು ಆಕಳು ಸಾವು ಸಂಭವಿಸಿದ್ದು ರೈತನನ್ನು ಕಂಗೆಡಿಸಿದೆ