spot_img
spot_img

ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ- ರಾಮಯ್ಯ

Must Read

ಬೆಳಗಾವಿ: ಉತ್ತಮ ರೀತಿಯಲ್ಲಿ ಅಭ್ಯಾಸ ಮಾಡಿ, ಜ್ಞಾನಾರ್ಜನೆ ಮಾಡಿಕೊಂಡು, ಉತ್ತಮ ಪ್ರಜೆಗಳಾಗಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ನಗರ ಕೇಂದ್ರ ಗ್ರಂಥಾಲಯ ಬೆಳಗಾವಿಯ ಉಪನಿರ್ದೇಶಕರಾದ ರಾಮಯ್ಯ ಅವರು ಹೇಳಿದರು.

ಅವರು ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯ ಮತ್ತು ಬೀ. ಕೆ ಕಾಲೇಜಿನ ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿ ಕೈಗೊಂಡ ಯೋಜನಾ ಕಾರ್ಯದ  ಬಗ್ಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ವಿದ್ಯಾರ್ಥಿಗಳು ಗ್ರಂಥಾಲಯದಲ್ಲಿನ ಸಾರ್ವಜನಿಕ ಸೇವೆಗಳು, ಅಲ್ಲಿಯ ಕಾರ್ಯನಿರ್ವಹಣೆ ಮತ್ತು ಸಮುದಾಯದ ಬಗ್ಗೆ ಅವರ ಜವಾಬ್ದಾರಿ,ಮತ್ತು  ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಸುಮಾರು ಹತ್ತು ದಿನಗಳ ಕಾಲ ಅಧ್ಯಯನ ಕೈಗೊಂಡು,ಯೋಜನೆ ರೂಪಿಸಿದರು. ಅವರಿಗೆ ಉಪನಿರ್ದೇಶಕರು ಮತ್ತು ಅವರ ಸಿಬ್ಬಂದಿಗಳಾದ, ಗ್ರಂಥಪಾಲಕರಾದ ಶಶಿಕಲಾ ಸೀಮಿಮಠ, ಪ್ರಕಾಶ ಇಚಲಕರಂಜಿ, ಸುಮಿತ್ ಕಾವಳೆ,ಅಂಬೇಕರ್ ಮತ್ತಿತರರು ಸೂಕ್ತ ಮಾಹಿತಿ ಮತ್ತು ವಿವರಣೆ ನೀಡಿದರು.

ಈ ಸಂಧರ್ಭದಲ್ಲಿ ಆನಂದ ಮುತ್ತಗಿ, ಸಂಗೀತಾ, ಗುಡ್ಡದ,ಸುನಿಲ, ಲಕ್ಷ್ಮಿ, ವಿಜಯಲಕ್ಷ್ಮಿ, ಸರಸ್ವತಿ,ಪೂರ್ಣಿಮಾ, ಅಕ್ಷತಾ ಮತ್ತಿತರರು ಹಾಜರಿದ್ದರು.

- Advertisement -
- Advertisement -

Latest News

ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದಗೆ ೭೬.೦೭ ಲಕ್ಷ ರೂ ಲಾಭ

ಮೂಡಲಗಿ: ಸುಣಧೋಳಿ ಮಹಿಳಾ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ೨೦೨೩ರ ಮಾರ್ಚ ಅಂತ್ಯಕ್ಕೆ ರೂ.೭೬.೦೭ ಲಕ್ಷ ಲಾಭವನ್ನು ಗಳಿಸಿ ಪ್ರಗತಿಯಲ್ಲಿ  ಸಾಗುತ್ತಿದೆ ಎಂದು ಸಹಕಾರಿಯ ಅಧ್ಯಕ್ಷೆ...
- Advertisement -

More Articles Like This

- Advertisement -
close
error: Content is protected !!