ಮಕ್ಕಳಲ್ಲಿ ಸೃಜನಶೀಲ ಚಟುವಟಿಕೆಗಳು ಅಗತ್ಯ- ಡಾ. ಜ್ಯೋತಿ ಪೂಜಾರ

Must Read

ಸಿಂದಗಿ: ವಿದ್ಯಾರ್ಥಿಗಳಲ್ಲಿ ಸಮಗ್ರ ಬೆಳವಣಿಗೆಯನ್ನು ಉತ್ತೇಜಿಸಲು ಶಾಲೆಗಳಲ್ಲಿ ಸೃಜನಶೀಲ ಚಟುವಟಿಕೆಗಳು ಅತ್ಯಗತ್ಯ ಎಂದು ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಜ್ಯೋತಿ ಪೂಜಾರ ಹೇಳಿದರು.

ಪಟ್ಟಣದ ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ಕ್ರಿಯೇಟಿವ್ ಡೆ (ಸೃಜನಶೀಲ ದಿನ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಗಳಲ್ಲಿ ಸೃಜನಶೀಲ ಚಟುವಟಿಕೆಗಳು ಹಮ್ಮಿಕೊಳ್ಳುವುದರಿಂದ ಮಕ್ಕಳು ಕಲ್ಪನೆ, ವಿಮರ್ಶಾತ್ಮಕ ಚಿಂತನೆ ಮತ್ತು ಸಮಸ್ಯೆಗಳನ್ನು ಪರಿಹರಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುತ್ತಾರೆ. ಕಲೆ, ಸಂಗೀತ ಮತ್ತು ನವೀನ ಯೋಜನೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸೃಜನಶೀಲತೆಯನ್ನು ಹೆಚ್ಚಿಸುವುದು ಮಾತ್ರವಲ್ಲದೆ ಕಲಿಕೆಯ ಪ್ರೀತಿಯನ್ನು ಬೆಳೆಸಿಕೊಳ್ಳುತ್ತಾರೆ ಎಂದು ಹೇಳಿದರು.

ಸೃಜನಶೀಲತೆಯನ್ನು ಬೆಳೆಸುವ ವಾತಾವರಣವನ್ನು ಮೊದಲು ಮನೆ ಮತ್ತು ಶಾಲೆಯಲ್ಲಿ ಮಕ್ಕಳಿಗೆ ನಿರ್ಮಿಸಿಕೊಡಬೇಕು. ಮಕ್ಕಳ ಸೃಜನಶೀಲತೆಯನ್ನು ಪಾಲಕರು-ಶಿಕ್ಷಕರು ಪ್ರೋತ್ಸಾಹಿಸ ಬೇಕು. ಅವರು ನೈಜ ಜಗತ್ತಿನಲ್ಲಿ ಸೃಜನಶೀಲರಾಗಿರುವಂತೆ ಪ್ರೋತ್ಸಾಹಿಸಬೇಕು. ಮಕ್ಕಳು ಬೆಳೆಯಲು ಮತ್ತು ಬದಲಾವಣೆಯನ್ನು ತರಲು, ಚಿಕ್ಕ ವಯಸ್ಸಿನಿಂದಲೇ ಸೃಜನಶೀಲತೆ ಅತ್ಯಗತ್ಯ. ಆದ್ದರಿಂದ ವಿದ್ಯಾರ್ಥಿಗಳಿಗೆ ಸೃಜನಶೀಲರಾಗಲು ಕ್ರಿಯೇಟಿವ್ ಕಿಡ್ಸ್ ಹೋಮ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಲಾ ವಿದ್ಯಾರ್ಥಿಗಳು ಪ್ರಾಣಿ, ಪಕ್ಷಿ, ಪರಿಸರ, ವಿಜ್ಞಾನ, ಗಣಿತ ಹಾಗೂ ಇತಿಹಾಸಕ್ಕೆ ಸಬಂಧಿಸಿದ ಮಾದರಿಗಳನ್ನು ವಯಕ್ತಿಕವಾಗಿ ಪ್ರದರ್ಶಿಸಿ ಅವುಗಳ ವಿವರಣೆಯನ್ನು ತಮ್ಮ ತೊದಲು ನುಡಿಯಿಂದ ಹೇಳುವ ಮೂಲಕ ತಮ್ಮ ಸೃಜನಶೀಲತೆಯನ್ನು ಹೊರಹೊಮ್ಮಿಸಿದರು.
ಶಿಕ್ಷಕಿಯರಾದ ಮಂಗಲಾ ಬಮ್ಮಣ್ಣಿ, ಸಾಧನಾ ಇಮಡೆ, ಗೌರಿ ಪಾಟೀಲ, ಶಾಂತಾ ಮೊಸಲಗಿ, ಸುಕನ್ಯಾ ಹುಬ್ಬಳ್ಳಿ, ಪ್ರೀತಿ ಪಟ್ಟಣಶೆಟ್ಟಿ, ಲಕ್ಷ್ಮಿ ಬಡಿಗೇರ ಹಾಗೂ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.

Latest News

ಕವನ : ಕವಿತೆಗೊಂದು ಕರೆಯೋಲೆ

ಕವಿತೆಗೊಂದು ಕರೆಯೋಲೆ ಬರೆಯಲೆಂದು ಕುಳಿತ ನನಗೆ ಪದಗಳೇ ಸಿಗುತಿಲ್ಲ... ನುಡಿಗಳೆಲ್ಲ ಮುನಿಸಿಕೊಂಡು ದೂರ ಓಡುತಿವೆಯಲ್ಲ...!ಬೆರಳುಗಳಿಗೂ ಲೇಖನಿಗೂ ಒಳಗೊಳಗೆ ನಡೆಯಿತಾ? ಒಳಜಗಳ!! ಮನಃಪಟದಲೋ ಸಾವಿರಾರು ಅಕ್ಷರ ಬಳಗ... ಕವಿತೆ ಕಟ್ಟಲದೇಕೋ ಆಗದೆ ಸಾಗಿದೆ ಕಾಳಗ...ಪ್ರೀತಿಯಿಂದ ಕವಿತೆಗೊಂದು ಓಲೆ ಬರೆದು...

More Articles Like This

error: Content is protected !!
Join WhatsApp Group