spot_img
spot_img

ಮುದ ನೀಡುವ ಕಥಾ ಪುಸ್ತಕಗಳು

Must Read

- Advertisement -

ಕಥೆಗಳೆಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ? ಯಾರಾದರೂ ಕಥೆ ಹೇಳುತ್ತಾರೆಂದರೆ ಹಸುಗೂಸುಗಳಿಂದ ಹಿಡಿದು ಹಣ್ಣುಹಣ್ಣು ಮುದುಕರವರೆಗೆ ಎಲ್ಲರೂ ಕಿವಿಗೊಟ್ಟು ಕುಳಿತುಕೊಳ್ಳುತ್ತಾರೆ!

ಕಥೆ ಕೇಳುವುದಕ್ಕೂ ಇಷ್ಟ; ಕೇಳುವವರಿದ್ದರೆ ಹೇಳುವುದಕ್ಕೂ ಖುಷಿಕೊಡುವ ಸಂಗತಿ.

ಎಂಟು ದಶಕಗಳ ಸಂನ್ಯಾಸ ಜೀವನ ನಡೆಸಿದ್ದ ಪೇಜಾವರಮಠದ ಪೂಜ್ಯ ವಿಶ್ವೇಶತೀರ್ಥ ಸ್ವಾಮಿಜೀ, ತಮ್ಮ ಸಾವಿರಾರು ಆಶೀರ್ವಚನ- ಪ್ರವಚನಗಳಲ್ಲಿ ಹೇಳಿದ ಕಥೆಗಳು ಸಾವಿರಾರು. ಅವೆಲ್ಲವೂ ಕೂಡ ಭಾರತೀಯ ಸಂಸ್ಕೃತಿ, ಪರಂಪರೆ, ಜನಜೀವನ, ಜೀವನಮೌಲ್ಯಗಳು, ಸದಾಚಾರಗಳನ್ನು ಸುಲಭವಾಗಿ ಸರಳವಾಗಿ ಪರಿಚಯಿಸುವ ಕಥೆಗಳು, ದೃಷ್ಟಾಂತ ಕಥೆಗಳು.  

- Advertisement -

ಪೂಜ್ಯರು ಹೇಳಿದ ಕಥೆಗಳಲ್ಲೇ ತಮಗೆ ದೊರೆತಷ್ಟನ್ನು  ಸಂಪಾದಿಸಿ, ಪುಸ್ತಕರೂಪದಲ್ಲಿ ತಂದಿದ್ದಾರೆ, ರಾಮಕುಂಜದ ಟಿ. ನಾರಾಯಣಭಟ್ಟರು. ‘ವಿಶ್ವಸಂದೇಶ: ಪೂರ್ವಾರ್ಧ, ಉತ್ತರಾರ್ಧ’, ವಿಶ್ವಕಥಾಕುಂಜ’ ಹೆಸರಿನ ಈ ಮೂರು ಪುಸ್ತಕಗಳಲ್ಲಿ ಆರುನೂರಕ್ಕೂ ಹೆಚ್ಚಿನ ಕಥೆಗಳಿವೆ.  ಪುಟ, ಅರ್ಧಪುಟದಷ್ಟಿರುವ ಒಂದೊಂದು ಕಥೆಯೂ ಗಾತ್ರದಲ್ಲಿ ಚಿಕ್ಕದು; ಅದು ನಿರ್ವಹಿಸುವ ಪಾತ್ರದಲ್ಲಿ ಬಹಳ ದೊಡ್ಡದು. 

ಅಜ್ಜ-ಅಜ್ಜಿಯರಿಗೆ, ತಾಯಿ-ತಂದೆಯರಿಗೆ, ಪ್ರಾಥಮಿಕ-ಪ್ರೌಢಶಾಲಾ ಶಿಕ್ಷಕರಿಗೆ, ವ್ಯಕ್ತಿತ್ವವಿಕಸನ ತರಬೇತುದಾರರಿಗೆ, ಭಾಷಣಕಾರರಿಗೆ ಮಾಹಿತಿಕಣಜವಾಗಿ_ ಕಥಾಕಣಜವಾಗಿ ಒದಗಿಬರುವ ಈ ಕೃತಿಗಳು ಸಾಮಾನ್ಯ ಓದಿಗೂ ಹೇಳಿಮಾಡಿಸಿದಂತಿವೆ! ಪುಟ್ಟಮಕ್ಕಳೂ ಕುತೂಹಲದಿಂದ ಓದುವಂತಿವೆ. ಮೂರನ್ನೂ ಓದಿ ಮುಗಿಸುವಾಗ ಪೂಜ್ಯ ಸ್ವಾಮಿಜೀಯವರ ಕಥಾಸಂಗ್ರಹವನ್ನು ಕುರಿತು ಬೆರಗು, ಅಚ್ಚರಿ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ. 

ಆಸಕ್ತರು ಈ ಮೂರೂ ಪುಸ್ತಕಗಳನ್ನು ಖರೀದಿಸಲು  WhatsApp ಮಾಡಿ : 7483681708

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group