ಬೀದರ: ಕಾಂಗ್ರೆಸ್ ಸರ್ಕಾರದಿಂದ ಉಚಿತ ವಿದ್ಯುತ್ ನೀಡಿದ್ದಾರೆ. ನಾವು ಕರೆಂಟ್ ಬಿಲ್ ಕಟ್ಟಲ್ಲ, ಬೇಕಾದರೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ ಮನೆಗೆ ಹೋಗಿ ಕೇಳಿ ಎಂದು ಗ್ರಾಹಕರೊಬ್ಬರು ವಿದ್ಯುತ್ ಮೀಟರ್ ರೀಡರನ್ನು ದಬಾಯಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಬೀದರ್ ದಕ್ಷಿಣ ಕ್ಷೇತ್ರ ಯದ್ದಲಾಪುರ್ ಗ್ರಾಮದಲ್ಲಿ ನಡೆದ ಘಟನೆ ಇದು. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಕಾಡ್೯ನಲ್ಲಿ ಕರೆಂಟ್ ಬಿಲ್ ಉಚಿತ ಎಂದು ಇದೆ ನಾವು ಬಿಲ್ ಕಟ್ಟಲ್ಲ ಎಂದು ಬೀದರ್ ನ ಗ್ರಾಹಕ ಕರೆಂಟ್ ಬಿಲ್ ವಸೂಲಿ ಗೆ ಬಂದ ಅಧಿಕಾರಿ ಜೊತೆ ವಾದ ಮಾಡಿರುವ ಘಟನೆ ನಡೆದಿದೆ.
ಹೌದು, ಕಾಂಗ್ರೆಸ್ ಪಕ್ಷವು ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಇನ್ನೂರು ಯುನಿಟ್ ವಿದ್ಯುತ್ ಉಚಿತ ಮತ್ತು ಹಲವು ಯೋಜನೆ ನೀಡುತ್ತೇವೆ ಎಂದು ಭರವಸೆ ನೀಡಿದ್ದರು ಇದೀಗ ಕಾಂಗ್ರೆಸ್ ಪಕ್ಷ 135 ಸ್ಥಾನ ಪಡೆಯುವ ಮೂಲಕ ಸಂಪೂರ್ಣ ಬಹುಮತಕ್ಕೆ ತಲುಪಿರುವ ಕಾರಣ ಜನರು ಉಚಿತ ವಿದ್ಯುತ್ ಸೇವೆ ನೀಡುವಂತೆ ಜೆಸ್ಕಾಂ ಅಧಿಕಾರಿಗಳ ಜೊತೆ ವಾದ ನಡೆಸಿದ್ದಾರೆ.
ಅಂತಹ ಘಟನೆ ಇಂದು ಬೀದರನಲ್ಲಿ ನಡೆದಿದೆ ವಿದ್ಯುತ್ ಬಾಕಿ ಬಿಲ್ ಪಾವತಿಸಿ ಎಂದು ಜೆಸ್ಕಾಂ ಅಧಿಕಾರಿ ಜನರಿಗೆ ಹೇಳಿದಾಗ ನಾನು ವಿದ್ಯುತ್ ಬಿಲ್ ಕಟ್ಟಲ್ಲ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಉಚಿತ ಎಂದು ಹೇಳಿದ್ದಾರೆ. ಅವರ ಮನೆಗೆ ಹೋಗಿ ಕೇಳಿ ನಮ್ಮಲ್ಲಿ ಕೇಳಿದರೆ ಸರಿ ಇರಲ್ಲ ಎಂದಿರುವುದು ಜೆಸ್ಕಾಂ ಅಧಿಕಾರಿಗಳಿಗೆ ವಿದ್ಯುತ್ ಉಚಿತ ಘೋಷಣೆ ಯೋಜನೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ವರದಿ: ನಂದಕುಮಾರ ಕರಂಜೆ, ಬೀದರ