ಮಡಿವಾಳ ಮಾಚಿದೇವ
ಜನನ -ಕ್ರಿ. ಶ.1120ರಿಂದ 1130ರ ಮಧ್ಯದ ಅವಧಿ
ಜನ್ಮಸ್ಥಳ ಬಿಜಾಪುರ ಜಿಲ್ಲೆಯ ದೇವರ ಹಿಪ್ಪರಗಿ.
ತಂದೆ-ಪರ್ವತಯ್ಯ, ತಾಯಿ – ಸುಜ್ಞಾನಮ್ಮ
ಇತರೆ ಹೆಸರುಗಳು ಮಾಚಯ್ಯ. ಮಾಚಿದೇವ. ಮಾಚಿತಂದೆ.
ಗುರುಗಳು ಮಲ್ಲಿಕಾರ್ಜುನ ಸ್ವಾಮಿ.
ವಚನಗಳು -3 46ಕ್ಕೂ ಹೆಚ್ಚು.
ವಚನದ ಅಂಕಿತನಾಮ ಕಲಿದೇವಯ್ಯ. ಕಲಿದೇವರ ದೇವ.
ಉದ್ಯೋಗ ಶರಣರ ಬಟ್ಟೆ ಒಗೆಯುವ ಕಾಯಕ/ಅಗಸ/ಮಡಿವಾಳ. ಕುಲದೈವ ಕಲಿದೇವರು.
ಇವರನ್ನು ವೀರಭದ್ರನ ಅವತಾರ ಎಂದು ಕರೆಯುತ್ತಿದ್ದರು.
ಸಮಾಜಕ್ಕೆ ಇವರು ಅಗಸತನ ಮೇಲಲ್ಲ. ಆಗಸತನ ಕೀಳಲ್ಲ ಎಂದು ತಿಳಿಸಿ ಕೊಟ್ಟರು.
12ನೇಯ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಮೇಲು ಕೀಳು ತಾರತಮ್ಯ.ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಿಂದ ವಂಚಿತ ಸಾಮಾಜಿಕ ಅಸಮಾನತೆಯ. ಹಾಗೂ ವರ್ಗ ಬೇಧ. ವರ್ಣ ಬೇಧ ಮುಂತಾದ ಶೋಷಣೆಗಳಿಂದ ಸಮಾಜದ ಜನರು ತತ್ತರಿಸಿ ಹೋಗಿದ್ದ ಸಮಯದಲ್ಲಿ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಒದಗಿಸಲು ಶ್ರಮ ವಹಿಸಿ ಸಾಮಾಜಿಕ ಕ್ರಾಂತಿಯನ್ನೇ ಎಬ್ಬಿಸಿದಂತ ಅಗ್ರಗಣ್ಯರಲ್ಲಿ ಮಡಿವಾಳ ಮಾಚಿದೇವರು ಪ್ರಮುಖರು. ಮಾಚಿದೇವರ ವಚನಗಳ ಮೂಲಕವೇ ಅವರ ವ್ಯಕ್ತಿತ್ವ ತಿಳಿಯಬಹುದಾಗಿದೆ.
ವಚನ ತನ್ನಂತಿರಬೇಕು ತಾನು ವಚನದಂತಿರ
ಅದೆಂತೆಂದಡೆ:
ತನುಮನಧನವನ್ನೆಲ್ಲ ಹಿಂದಿಟ್ಟುಕೊಂಡು
ಮಾತಿನ ಬಡಬೆಯ ಮುಂದಿಟ್ಟುಕೊಂಡು
ಒಡೆಯನ ಕಂಡು ನಾಯಿ ಬಾಲವ ಬಡಿದುಕೊಂಬಂತೆ
ಆತೆರ ನಾಯಿತೆಂದ ಕಲಿದೇವರ ದೇವಯ್ಯ
ಆಶಯ : ನಾಯಿ ತನ್ನ ಯಜಮಾನ ಯಾವಾಗಲೂ ತನ್ನನ್ನೇ ಗಮನಿಸಬೇಕು , ತನ್ನನ್ನು ಮುದ್ದಿನಿಂದ ನೋಡಿಕೊಳ್ಳಬೇಕು,ತನ್ನನ್ನೇ ಪ್ರಶಂಸೆ ಮಾಡಬೇಕು ಎಂಬ ನಿರೀಕ್ಷೆಯಿಂದ ತನ್ನ ಬಾಲವನ್ನು ಅಲ್ಲಾಡಿಸುತ್ತ ಯಜಮಾನನ ಸುತ್ತ ಸುತ್ತುತ್ತಾ ಇರುತ್ತದೆ. ಹಾಗೆಯೇ ಸಮಾಜದಲ್ಲಿ ಕೆಲವು ಜನರು ತನು ಮನ ಧನದಿಂದ ಯಾವುದೇ ರೀತಿಯ ಸಹಾಯ ಮಾಡದೇ ಕೇವಲ ತಮ್ಮ ಮಾತಿನಿಂದ ಎಲ್ಲರನ್ನೂ ಮರುಳು ಮಾಡುವರು. ತಾವೇ ಎಲ್ಲ ಕೆಲಸ ಕಾರ್ಯಗಳನ್ನು ಮಾಡಿದ್ದು ಎಂದು ಹೇಳಿಕೊಳ್ಳುವರು ಅವರ ಮಾತಿಗೂ ನಡೆಯುವ ಕೆಲಸಕ್ಕೂ ಯಾವುದೇ ಸಂಬಂಧಗಳಿರುವದಿಲ್ಲ ಆದರೆ ಅವರಲ್ಲಿ ದುಡ್ಡಿನ ಅನುಕೂಲ ಹಾಗೂ ನೆರವೇರಿಸುವ ಶಕ್ತಿ ಸಾಮರ್ಥ್ಯ ಇದ್ದರೂ ಅದರ ಬಳಕೆ ಮಾಡಿ ಕೊಳ್ಳದೆ ಕೇವಲ ಮಾತಿನಲ್ಲೇ ಎಲ್ಲವನ್ನೂ ನಡೆಸಲು ಪ್ರಯತ್ನಿಸುತ್ತಾನೆ ತನ್ನ ಯಜಮಾನನ್ನು ಮೆಚ್ಚಿಸಲು ಬಾಲವನ್ನು ಅಲ್ಲಾಡಿಸುವ ನಾಯಿಯಂತೆ ಸಮಾಜದ ಜನರನ್ನು ಮೆಚ್ಚಿಸುವುದನ್ನು ಕೇವಲ ಮನರಂಜನೆಗಾಗಿ ಹೊರತು ಅದನ್ನು ಗಂಭಿರತೆಯಿಂದ ನೋಡವದು ಮೂರ್ಖತನವಾಗುವದು.
ಅಂತರ್ಜಾಲದ ಕೃಪೆ ಲಕ್ಷ್ಮೀ ಕಾಯಕದ, ಕನ್ನಡ ವಿಷಯದ ಉಪನ್ಯಾಸಕರು ಗದಗ