spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

spot_img
- Advertisement -

ಅಲ್ಲಮ ಪ್ರಭು

12ನೆಯ ಶತಮಾನ ಅಸಂಖ್ಯಾತ ಶಿವಶರಣರ ಭಕ್ತಿಯಿಂದ ತೊಳಗಿ ಬೆಳಗುತಿಹ ಕನ್ನಡ ನಾಡಿನ ಕಲ್ಯಾಣ. ಅಲ್ಲಿ ಭಕ್ತಿ ಭಂಡಾರಿ ಬಸವಣ್ಣನವರು ಕಟ್ಟಿದ ಅನುಭವ ಮಂಟಪ. ಆ ಅನುಭವ ಮಂಟಪದ ಪ್ರಥಮ ಶೂನ್ಯ ಪೀಠಾಧಿಪತಿಗಳೇ ಅಲ್ಲಮರು.

ಅಲ್ಲಮ ಪ್ರಭುದೇವರು ಹುಟ್ಟಿದ ಊರು ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳ್ಳೆಗಾವಿ. ಈವರೆಗೂ ಬಳ್ಳೇಗಾವಿ ಯಾವುದೇ ಅಭಿವೃದ್ಧಿಯನ್ನು ಹೊಂದದಿರುವುದು ವಿಷಾದನೀಯ. ಇವರ ಕಾಲ 12ನೆಯ ಶತಮಾನ ತಾಯಿ ಸುಜ್ಞಾನಿ ತಂದೆ ನಿರಹಂಕಾರ ಮತ್ತೊಂದು ದಾಖಲೆ ಪ್ರಕಾರ ನಾಗವಾಸಾಧಿಪತಿ ಅಂತಲೂ ಹೇಳಲಾಗಿದೆ. ಮದ್ದಳೆ ಬಾರಿಸುವುದು ಅಲ್ಲಮರಿಗೆ ಅತ್ಯಂತ ಪ್ರಿಯವಾದದ್ದು. ಅಲ್ಲಮರ ಗುರು ಅನಿಮಿಷಯ್ಯ ಇದಿಷ್ಟು ಅವರ ಸಂಕ್ಷಿಪ್ತ ಹಾಗೂ ಸ್ತೂಲ ಪರಿಚಯ

- Advertisement -

ವಿಶ್ವ ಪ್ರಪಂಚವೇ ತನ್ನ ವಿಶ್ವನಾಮ ವಿಶ್ವರೂಪ ವಿಶ್ವಕ್ರಿಯೆ ತನಗೆ ಅಂಗವಾಗಿ ಕಾಲ ದೇಶ ವಸ್ತುವಿನಲ್ಲಿ ಎತ್ತೆತ್ತ ನೋಡಿದಡತ್ತತ್ತ ಕಾಣದಂತೆ ಕಂಡು, ಸುಳಿಯದಂತೆ ಸುಳಿದು, ಇಲ್ಲದಂತೆ ಇರುವ ಪರಿಪೂರ್ಣ ಪರಜ್ಯೋತಿ ಗುಹೇಶ್ವರಲಿಂಗವೇ ತಾನಾಗಿ ನಿಂದು ನಡೆದಾಡುವ ಅಲ್ಲಮರ ವಿಗಡ ಚಾರಿತ್ರ್ಯವನ್ನು ತಿಳಿಯಬೇಕೆಂದಿದ್ದರೆ ಸಿದ್ಧವೀರಣ್ಣೊಡೆಯರು ಬರೆದ ಪ್ರಭುದೇವರ ಶೂನ್ಯ ಸಂಪಾದನೆಯನ್ನು ಒಳಗೊಕ್ಕು ನೋಡಬೇಕು, ಅರಿದು ಆನಂದಿಸಬೇಕು ಆ ದಿವ್ಯ ಮಹಾಮಂಗಳ ಸೌಂದರ್ಯವನ್ನು.
ಗೂಳೂರು ಸಿದ್ಧವೀರಣ್ಣೊಡೆಯರು ಶೂನ್ಯ ಸಂಪಾದನೆ ಪ್ರಾರಂಭದಲ್ಲಿಯೇ ಹೇಳುವಂತೆ ಪ್ರಭುದೇವರು ಹರಿಹರ ದೇವ ಮತ್ತು ಶಿವಗಣ ಪ್ರಸಾದಿ ಮಹದೇವಯ್ಯಗಳು ಚಿತ್ರಿಸುವಂತೆ ಶಾಪದಿಂದ ಭೂಮಿಗೆ ಬಂದವರಲ್ಲ  ಪರಶಿವ ಲಿಂಗದ ಪ್ರತ್ಯಕ್ಷ ಅವತಾರವೇ ಅಲ್ಲಮ ಪ್ರಭು ದೇವರೆಂದು ಖಡಾ ಖಂಡಿತವಾಗಿ ಅಭಿಪ್ರಾಯವನ್ನುಉಲ್ಲೇಖಿಸುತ್ತಾರೆ.
ನನಗೆ ತುಂಬಾ ಇಷ್ಟವಾದ ಅಲ್ಲಮಪ್ರಭುದೇವರ ಒಂದು ವಚನವನ್ನು ಇಲ್ಲಿ ವಿಶ್ಲೇಷಣೆಗೆ ತೆಗೆದುಕೊಂಡಿದ್ದೇನೆ ನೋಡೋಣ

ವಚನ ವಿಶ್ಲೇಷಣೆ

ಅಜ್ಞಾನವೆಂಬ ತೊಟ್ಟಿಲೊಳಗೆ ಜ್ಞಾನವೆಂಬ ಶಿಶುವ ಮಲಗಿಸಿ
ಸಕಲ ವೇದ ಶಾಸ್ತ್ರಗಳೆಂಬ ನೇಣ ಕಟ್ಟಿ ಹಿಡಿದು ತೂಗಿ ಜೋ ಜೋ ಎಂದು ಜೋಗುಳವಾಡುತ್ತಿದ್ದಾಳೆ ಬ್ರಾಂತಿ ಎಂಬ ತಾಯಿ. ತೊಟ್ಟಿಲು ಮುರಿದು ನೇಣು ಹರಿದು ಜೋಗುಳ ನಿಂದಲ್ಲದೆ ಗುಹೇಶ್ವರನೆಂಬ ಲಿಂಗವ ಕಾಣಬಾರದು.

- Advertisement -

ಕಾಯದ ವಿಕಾರ ಪ್ರಾಣದ ಸಂಚಲ ಮನದ ಮರವೇ ಬುದ್ಧಿಯ ಸಂಶಯ ಈ ವಿಪರೀತಗಳನ್ನೆಲ್ಲ ಬಿಟ್ಟು ತನ್ನ ಒಳಗೆ ಇಳಿದು ನೋಡಿದರೆ ತಾನು ಜ್ಞಾನ ಶಿಶು ಲಿಂಗದ ಕೂಸು. ಈ ಕೂಸನ್ನು ನಿರಂತರ ನಿದ್ರೆಯಲ್ಲಿ ಇರಬೇಕೆಂಬ ಪ್ರಯತ್ನ ಭ್ರಾಂತಿ ಎಂಬ ತಾಯಿಗೆ ಅಂತೆಯೇ ತನ್ನ ನಿಜವ ಮರೆಸಿರುವ ಅಜ್ಞಾನವನ್ನೇ ತೊಟ್ಟಿಲು ಮಾಡಿ ಅದನ್ನು ವೇದ ಶಾಸ್ತ್ರ ಆಗಮ ಪುರಾಣ ತತ್ವದರ್ಶನಗಳೆಂಬ ಹಗ್ಗದಿಂದ ತೊಲೆಗೆ ಕಟ್ಟಿ ತೊಟ್ಟಿಲಲ್ಲಿ ಅರಿವಿನ ಅಂಕುರವನ್ನೇ ಮರೆವೆಗೊಳಗು ಮಾಡಿ ಮಲಗಿಸಿ,
ನೀನೇ ಶೂರ ನೀನೇ ಧೀರ ಎಂದು ಬ್ರಾಂತಿ ಯೆಂಬ ತಾಯಿ ಜೋಗುಳ ಹಾಡುತ್ತ, ಸ್ವಯಂ ಜ್ಯೋತಿಯ ದಿವ್ಯ ಬೆಳಗನ್ನು ಕತ್ತಲೆ ಗೊಳಿಸಿ ನಿದ್ರೆಗೆ ಹಚ್ಚಿದ್ದಾಳೆ ಕೂಸು ಬೇಕಾದರೆ ಮಲಗಬಹುದು ಸಾಕಾದರೆ ಏಳ ಬಹುದು ಮಲಗಿದರೆ ತಾನಾರೆಂಬ ಪ್ರಜ್ಞೆ ತನಗಿಲ್ಲ.ಎದ್ದರೆ ತನ್ನರಿವಿನ ಇರವು ತನಗೆ. ವೇದ ಶಾಸ್ತ್ರದಿಂದ ಆಧಾರಗೊಂಡ ಅಜ್ಞಾನದಲ್ಲಿ ಎಷ್ಟು ಕಾಲ ಮಲಗಬೇಕು ಅಜ್ಞಾನವನ್ನು ಮುರಿದು ಶಾಸ್ತ್ರ ವಿಚಾರಗಳನ್ನು ಹರಿದು ಭ್ರಾಂತಿ ಜೋಗುಳವನ್ನು ನಿಲ್ಲಿಸಿದರೆ ಮಾತ್ರ .ದಿವ್ಯ ಜ್ಯೋತಿಯ ಕೂಸು ದಿವ್ಯದ ವಿಸ್ತಾರದಲ್ಲಿ ಆಡಬಲ್ಲದು ಹಾಗಲ್ಲದೆ ಜೋಗುಳದ ಮೋಹನ ಮಂತ್ರದಲ್ಲಿ ಮಲಗಿದರೆ ತನ್ನ ನಿಜದರಿವಾದ ಗುಹೇಶ್ವರ ಲಿಂಗವ
ಕಾಣಬಾರದು ಎಂದು ಅಲ್ಲಮಪ್ರಭುಗಳು ವಚನದಲ್ಲಿ ತುಂಬಾ ಸುಂದರ ವಾಗಿ ಉಲ್ಲೇಖಿಸಿದ್ದಾರೆ.

ಗೌರಮ್ಮ ನಾಶಿ
ಬಾಗಲಕೋಟ

ಕೃಪೆ —
ಶೂನ್ಯ ಸಂಪಾದನೆ ಪರಾಮರ್ಶೆ
ಪ್ರೊ ಎಸ್.ಎಸ್. ಭೂಸನೂರ ಮಠ ವಿರಚಿತ

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group