spot_img
spot_img

ವಾರದ ಪ್ರಾರ್ಥನೆ ; ಲಿಂಗಾಯತ ಮಠಗಳ ಕುರಿತು ಉಪನ್ಯಾಸ.

Must Read

- Advertisement -

ಬೆಳಗಾವಿ- ಡಾ ಫ ಗು ಹಳಕಟ್ಟಿ ಲಿಂಗಾಯತ ಭವನ ಮಹಾಂತೇಶ ನಗರ ಬೆಳಗಾವಿಯಲ್ಲಿ ದಿ. 23/6 /2024 ರಂದು ಲಿಂಗಾಯತ ಮಠಗಳ ಕುರಿತು ಶಂಕರ ಗುಡಸ ಉಪನ್ಯಾಸ ನೀಡಿದರು

ಅಧ್ಯಕ್ಷತೆಯನ್ನು ಈರಣ್ಣದೇಯನ್ನವರ ವಹಿಸಿದ್ದರು ಸುರೇಶ ನರಗುಂದ ಅವರು ಸಾಮೂಹಿಕ ಪ್ರಾರ್ಥನೆ ನಡೆಸಿ ಕೊಟ್ಟರು ಪ್ರಾರಂಭದಲ್ಲಿ ಸುವರ್ಣ ಗುಡಸ,ಜಯಶ್ರೀ ಚಾವಲಗಿ ಆನಂದ ಕಕಿ೯, ಬಿ ಪಿ ಜವನಿ, ಮಂಜುಳಾ ದೇಯನ್ನವರ,ರುದ್ರಮ್ಮ ಅಕ್ಕನವರ, ವಿ ಕೆ ಪಾಟೀಲ್ ಮುಂತಾದ ಶರಣ ಶರಣೆಯರು ವಚನ ವಿಶ್ಲೇಷಣೆ ಮಾಡಿದರು.

ಶಾಹು ಮಹಾರಾಜರದು ಅರಭಾವಿ ದುರದುಂಡಿ ಮಠದ ಜೊತೆ ಅನ್ಯೋನ್ಯ ಸಂಬಂಧ ಇತ್ತು 12ನೇ ಶತಮಾನದ ನಂತರ ಮಠಗಳು ಪ್ರಾರಂಭವಾದವು .ಶೂನ್ಯ ಪೀಠ ಮೊದಲ ಅಧ್ಯಕ್ಷರು ಅಲ್ಲಂಪ್ರಭು ,ವಿರಕ್ತಮಠ ಎಂದರೆ ರಕ್ತ ಸಂಬಂಧದಿಂದ ದೂರ ಇದ್ದವರು. ಗುರು ಕುಲ, ಮಠಗಳಿಗೂ ಯಾವುದೇ ಸಂಬಂಧವಿಲ್ಲ. ಸ್ವಾಮಿಗಳ ಶಿಷ್ಯರು ಕಜ್ಜಾಯಕ್ಕಾಗಿ ಮನೆಮನೆ ಬರುತ್ತಿದ್ದರು ಅವರ ದುಃಖ ದುಮ್ಮಾನಗಳನ್ನ ಮಠಕ್ಕೆ ಕರೆದು ಸಮಸ್ಯೆ ಪರಿಹರಿಸುತ್ತಿದ್ದರು. ಭಾಲ್ಕಿ ಗುರು ಪರಂಪರೆಯ ಮಠ .ಹಾನಗಲ್ ಸ್ವಾಮಿಗಳು ತರಬೇತಿ ನೀಡಿ ಮಠಕ್ಕೆ ಸ್ವಾಮಿಗಳನ್ನು ಕಳಿಸುತ್ತಿದ್ದರು.ಗುರು ಮಠಕ್ಕಿಂತ ವಿರಕ್ತಮಠಗಳು ಶ್ರೇಷ್ಠ ಎಂದು ಚಿದಾನಂದ ಮೂರ್ತಿ ಸಹ ಅಭಿಪ್ರಾಯಪಟ್ಟಿದ್ದಾರೆ.

- Advertisement -

ಮಠಗಳು ಉಚಿತ ಶಿಕ್ಷಣ ವಸತಿ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವ ಕೇಂದ್ರಗಳಾಗಿದ್ದವು. ವಾರದ ಮಲ್ಲಪ್ಪ ,ಸಿದ್ದಪ್ಪ ಕಂಬಳಿ, ಅವರನ್ನು ನಾವು ನೆನೆಯಲೇಬೇಕು ಎಂದು ಶಂಕರ ಗುಡಸ ಅವರು ಉಪನ್ಯಾಸವನ್ನು ನೀಡಿದರು. ಸದಾಶಿವ ದೇವರಮನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಎಸ್ಎಸ್ ಪೂಜಾರ್, ಬಸವರಾಜ ಕರಡಿಮಠ,ಶಿವಾನಂದ ಲಾಳಸಂಗಿ, ಕಮಲಾ ಗಣಾಚಾರಿ, ಸಿ ಕೆ ಕೋಳಿವಾಡ , ಬಸವರಾಜ ಬಿಜ್ಜರಗಿ, ಶಿವಾನಂದ ತಲ್ಲೂರ ,ಶಿವಾನಂದ ನಾಯ್ಕ, ಅನೀಲ ರಘಶೆಟ್ಟಿ ,ಎಂ ವೈ ಮನಸಿನಕಾಯಿ ಮುಂತಾದ ಶರಣ ಶರಣೆಯರಿದ್ದರು ವಚನ ಮಂಗಲದೊಂದಿಗೆ ಮುಕ್ತಾಯವಾಯಿತು.

- Advertisement -
- Advertisement -

Latest News

ವಿದ್ಯಾರ್ಥಿ ಜೀವನದ ನಿಜವಾದ ಕೌಶಲ ಆಲಿಸುವಿಕೆ – ನಟ ಮಾಸ್ಟರ್ ಮಂಜುನಾಥ ಅಭಿಮತ

ವಿದ್ಯಾರ್ಥಿ ಜೀವನದಲ್ಲಿ ಕೇಳುವಿಕೆ ಹಾಗೂ ಅರ್ಥಮಾಡಿಕೊಳ್ಳುವಿಕೆಯು ನಿಜವಾದ ಕೌಶಲ್ಯವಾಗಿದೆ ಎಂದು ಕನ್ನಡದ ಪ್ರಸಿದ್ಧ ನಟ ಮಾಸ್ಟರ್ ಮಂಜುನಾಥ ಅಭಿಪ್ರಾಯಪಟ್ಟರು. ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಮಾಜ ವಿಜ್ಞಾನ...
- Advertisement -

More Articles Like This

- Advertisement -
close
error: Content is protected !!
Join WhatsApp Group