spot_img
spot_img

ಸಾಹಿತಿ ಮತ್ತು ಶಿಕ್ಷಕರಿಗೆ ಅಭಿನಂದನಾ ಸಮಾರಂಭ

Must Read

spot_img
- Advertisement -

ಬಸವ ಸಮಿತಿ 2024ನೇ ಸಾಲಿನ ವಿಶ್ವ ಬಸವ ಜಯಂತಿ ಪ್ರಯುಕ್ತ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಮತ್ತು ಕವನ ಸ್ಪರ್ಧೆಯಲ್ಲಿ ಭಾಗವಹಿಸಿದ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದ ವಿಶ್ರಾಂತ ಪ್ರೌಢಶಾಲಾ ಶಿಕ್ಷಕರು ಹಾಗೂ ಕವಿಗಳಿಗೆ ಹಿರಿಯ ಸಾಹಿತಿ ಸ ರಾ ಸುಳಕೂಡೆ ಅವರು ಅಭಿನಂದನಾ ಪತ್ರ ಮತ್ತು ಕರ್ನಾಟಕ ವಿದ್ಯಾವರ್ಧಕ ಸಂಘದ ದಿನದರ್ಶಿಕೆ ಅರ್ಪಿಸಿ ಗೌರವಿಸಿದರು

ಬಸವಣ್ಣೆಪ್ಪ ಭೀಮಪ್ಪ ಕಾದ್ರೊಳ್ಳಿ , ಕಿತ್ತೂರು ತಾಲೂಕಿನ ಹಿರೇನಂದಿಹಳ್ಳಿ ಗ್ರಾಮದ ಹಿರಿಯ ಸಹಕಾರಿಗಳು, ಕವಿಗಳು, ಬಸವನಕುಡಚಿ ದೇವರಾಜ ಅರಸು ಕಾಲೋನಿಯ ನಿವಾಸಿಗಳಾದ  ಗುರುಸಿದ್ದಯ್ಯ ಹಿರೇಮಠ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಖಾನಾಪುರ ತಾಲೂಕು ಘಟಕದ ನಿಕಟ ಪೂರ್ವ ಅಧ್ಯಕ್ಷರು, ನಿವೃತ್ತ ಪ್ರಾಂಶುಪಾಲರು, ಕವಿಗಳು, ಸಂಘಟಕರು, ಮತ್ತು ಸಾಂಸ್ಕೃತಿಕ ರಾಯಭಾರಿಗಳಾದ ಇಟಗಿ ಗ್ರಾಮದ  ವಿಜಯ ವೀ.ಬಡಿಗೇರ ಇವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಘಟಕದ ನಿವೇಶನದಲ್ಲಿ ನಿರ್ಮಿಸಿರುವ ಕನ್ನಡ ಭವನದಲ್ಲಿ ಸತ್ಕರಿಸಲಾಯಿತು.

ಹಿರಿಯ ಸಾಹಿತಿ, ಖ್ಯಾತ ಅಂಕಣಕಾರರಾದ ಪ್ರೊ. ಯು. ಎನ್. ಸಂಗನಾಳಮಠ, ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಮಾಜಿ ಅಧ್ಯಕ್ಷರಾದ ಮೋಹನ ಬಸನಗೌಡ ಪಾಟೀಲ, ಯ.ರು. ಪಾಟೀಲ, ಗೌರವ ಕಾರ್ಯದರ್ಶಿಗಳಾದ ಮಹಾಂತೇಶ ಯಲ್ಲಪ್ಪ ಮೆಣಸಿನಕಾಯಿ, ಸಂಘಟನಾ ಕಾರ್ಯದರ್ಶಿಗಳಾದ ವೀರಭದ್ರಪ್ಪ ಅಂಗಡಿ, ಹಿರಿಯ ಸಹಕಾರಿ ಬಿ. ಕೆ. ಮಲಾಬಾದಿ, ಆಶು ಕವಿ ಚನ್ನಬಸವಯ್ಯ ಕೋಳಿವಾಡ, ಹಿಂದಿ ಭಾಷೆಯ ರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ , ಕವಿ, ಸಾಹಿತಿ, ಅನುವಾದಕರಾದ ಡಾ. ಸುನಿಲ ಪರೀಟ, ಶ್ರೀಮತಿ ಸುಮನ ಪರೀಟ, ಶಿಕ್ಷಣ ತಜ್ಞರಾದ ಅಶೋಕ ಉಳ್ಳೇಗಡ್ಡಿ, ಮಠಪತಿ, ಗದಗ, ಚರಂತಿಮಠ, ಸಮಾಜ ಸೇವಕರಾದ ವಾಲಿಕಾರ ಮುಂತಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಮಾಜಿ ಸೈನಿಕರ ಸಂಘದ ಬೆಂಬಲ

ಮೂಡಲಗಿ - ಮೂಲಭೂತ ಬೇಡಿಕೆಗಳ ಈಡೇರಿಕೆಗಾಗಿ ಇದೇ ದಿ. ೧೦ ರಿಂದ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ಅಖಿಲ ಕರ್ನಾಟಕ ಮಾಜಿ ಸೈನಿಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group