spot_img
spot_img

ಭೀಕರ ರಸ್ತೆ ಅಪಘಾತದಲ್ಲಿ ಬೀದರನ ಪಿಎಸ್ಐ ಸಾವು

Must Read

ಬೀದರ – ಆಂಧ್ರ ಪ್ರದೇಶದ ಚಿತ್ತೂರು ಬಳಿ ರಸ್ತೆಯಲ್ಲಿ ಬೆಳಗಿನ ಜಾವ ನಡೆದ ಭೀಕರ ಅಪಘಾತದಲ್ಲಿ ಬೀದರ ಮೂಲದ ಪಿಎಸ್ಐ ಹಾಗೂ ಇಬ್ಬರು ಪೇದೆಗಳು ದಾರುಣವಾಗಿ ಸಾವಿಗೀಡಾಗಿದ್ದಾರೆ.

ಬೆಂಗಳೂರು ಶಿವಾಜಿ ನಗರ ಪಿಎಸ್ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಿನಾಶ ರೋಳಾ ಅಪಘಾತದಲ್ಲಿ ಮೃತರಾಗಿದ್ದಾರೆ.

ಆಂಧ್ರದ ತಿರುಪತಿಯತ್ತ ಗಾಂಜಾ ಸಂಬಂಧ ಪ್ರಕರಣವೊಂದರಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಪಿಎಸ್ಐ ಹಾಗೂ ಪೇದೆಗಳು ಇನ್ನೋವಾ ಕಾರಿನಲ್ಲಿ ಹೊರಟಾಗ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದ ಕಾರು ಸುಮಾರು ೩೦ ಅಡಿ ದೂರ ಹೋಗಿ ಬಿದ್ದಿತ್ತು ಎನ್ನಲಾಗಿದೆ.     

ಬಸವಕಲ್ಯಾಣದ ನಿವೃತ್ತ ಪಿಎಸ್ಐ ಕಾಶೀನಾಥ ರೋಳಾ ಅವರ ಪುತ್ರ ಅವಿನಾಶ ರೋಳಾ ಇತ್ತೀಚೆಗಷ್ಟೇ ಬೀದರನಿಂದ ಶಿವಾಜಿನಗರದ ಠಾಣೆಗೆ ವರ್ಗವಾಗಿ ಹೋಗಿದ್ದರು. ಕರ್ತವ್ಯದ ಮೇಲೆ ಪೇದೆಗಳೊಂದಿಗೆ  ತೆರಳುವಾಗ ರಸ್ತೆ ಅಪಘಾತ ದಲ್ಲಿ ಸಾವಿಗೀಡಾಗಿದ್ದಾರೆ. ಈ ದುರಂತದಿಂದ ಶಿವಾಜಿ ನಗರ ಠಾಣೆಯಲ್ಲಿ ಹಾಗೂ ಬೀದರನಲ್ಲಿ ಸೂತಕದ ವಾತಾವರಣ ಮಡುಗಟ್ಟಿದೆ.


ವರದಿ: ನಂದಕುಮಾರ ಕರಂಜೆ, ಬೀದರ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಸಿಂದಗಿ: ಪಟ್ಟಣದ ಭೀಮಾಶಂಕರ ಮಠದಲ್ಲಿ ವಿಶ್ವ ಹಿಂದೂ ಪರಿಷತ್ ಸ್ಥಾಪನಾ ದಿನ ಮತ್ತು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಮಾಡಲಾಯಿತು. ಸಮಾರಂಭದಲ್ಲಿ ದಿವ್ಯ ಸಾನ್ನಿಧ್ಯ ವಹಿಸಿದ್ದ ಕೊಗಟನೂರ ಪೂಜ್ಯಶ್ರೀ...
- Advertisement -

More Articles Like This

- Advertisement -
close
error: Content is protected !!