ಬೈಲಹೊಂಗಲ: ಶಿವ ಚೈತನ್ಯದ ಬೆಳಕಿನಲ್ಲಿ ಬೆಳಗುವವರೆಲ್ಲರೂ ಶಿವ ಸ್ವರೂಪಿಗಳೇ ಮನಸ್ಸಿಗೆ ಅಂಟಿದ ದಲಿತತೆಯ ಕೊಳೆಯನ್ನು ತೊಳೆದು ಸರ್ವರಿಗೂ ಸಮಬಾಳು ಸಮಪಾಲು ತತ್ವವನ್ನು ಅನುಷ್ಠಾನಕ್ಕೆ ತಂದ 12ನೇ ಶತಮಾನದ ಶರಣರು ಜಗಕ್ಕೆ ಮಾದರಿ ಎಂದು ಬಿ ಎಸ್ ತೇಗೂರ ಗುರುಗಳು ನುಡಿದರು.
ಪಟ್ಟಣದ ಪತ್ರಿ ಬಸವೇಶ್ವರ ಅನುಭವ ಮಂಟಪದಲ್ಲಿ ಪತ್ರಿಬಸವ ನಗರ ಅಭಿವೃದ್ಧಿ ಸಂಘದ 22ನೇ ಮಾಸಿಕ ಅನುಭಾವ ಗೋಷ್ಠಿ, ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತ ಕದಳಿ ಮಹಿಳಾ ವೇದಿಕೆಯ ಹಲಗಲಿ ಗಂಗಮ್ಮ ಹಡಪದ ದತ್ತಿ ಉಪನ್ಯಾಸ ದಲಿತ ವರ್ಗದಿಂದ ಬಂದ ಶರಣರು ವಿಷಯ ಕುರಿತು ಅವರು ಮಾತನಾಡಿದರು.
ಶಿವಾನಂದ ತುಳಜನ್ನವರ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಂಸದ ಜಗದೀಶ ಶೆಟ್ಟರ್ ಶಿಲ್ಪಾ ಶೆಟ್ಟರ್ ದಂಪತಿಗಳನ್ನು ಸನ್ಮಾನಿಸಲಾಯಿತು ಅಧ್ಯಕ್ಷೆ ಪ್ರೇಮಕ್ಕ ಅಂಗಡಿ ಮಾತನಾಡಿದರು.
ಜಿಲ್ಲಾ ಕದಳಿ ಮಹಿಳಾ ವೇದಿಕೆ ಪತ್ರಿ ಬಸವನಗರ ಅಭಿವೃದ್ಧಿ ಸಂಘ ಹಿರಿಯ ನಾಗರಿಕರ ವೇದಿಕೆ ಜಾಗತಿಕ ಲಿಂಗಾಯತ ಮಹಾಸಭಾ ಅಜಗಣ್ಣ ಮುಕ್ತಾಯಕ್ಕ ಬಳಗಗಳ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.
ಗೌರಿ ಕರ್ಕಿ ಪ್ರಾಸ್ತಾವಿಕ ನುಡಿದರು ಮುಕ್ತಾಯಕ್ಕ ಬಳಗ ಪ್ರಾರ್ಥಿಸಿತು ರಾಜೇಶ್ವರಿ ದ್ಯಾಮನಗೌಡರ ಸ್ವಾಗತಿಸಿದರು ಪತ್ರಯ್ಯ ಕುಲಕರ್ಣಿ ವಂದಿಸಿದರು ಕಾಡಪ್ಪ ರಾಮಗುಂಡಿ ನಿರೂಪಿಸಿದರು