ಮುಧೋಳ- ಕನ್ನಡ ನಾಡಿನ ಚಿತ್ರರಂಗದ ದೈತ್ಯ ಪ್ರತಿಭೆ .ನಟ ಮತ್ತು ಕನಾ೯ಟಕಕ್ಕೆ ವಿಶೇಷ ಕೊಡುಗೆಯನ್ನು ನೀಡಿರುವ ಅತ್ಯಂತ ಜನಪ್ರಿಯತೆಯನ್ನು ಹೊಂದಿರುವ ಡಿ.ಬಾಸ್ ದಶ೯ನ ಅವರು ಕೇವಲ ಆರೋಪಿ . ಅಪರಾಧಿಯಲ್ಲ. ಆರೋಪಿ ಎಂದ ಮಾತ್ರಕ್ಕೆ ಒಂದಿಷ್ಟು ವಿಷ ಕೊಡಿ ಎಂದು ಕೇಳುವ ಮಟ್ಟಕ್ಕೆ ಹಿಂಸೆ ಕೊಡುವುದು ತುಂಬಾ ಖಂಡನೀಯ ಎಂದು ಕನಾ೯ಟಕ ರಾಜ್ಯ ಸವ೯ಕಲಾವಿದರ ಒಕ್ಕೂಟದ ಅಧ್ಯಕ್ಷ ಶರಣಬಸವಶಾಸ್ತ್ರಿಗಳು ಹೇಳಿದ್ದಾರೆ.
ಅವರು ಇಂದು ಸವ೯ಕಲಾವಿದರ ಒಕ್ಕೂಟದ ಸರಳ ಸಭೆಯಲ್ಲಿ ಮಾತನಾಡುತ್ತಾ ಕ್ರಿಮಿನಲ್ ಗಳಿಗೆ ಕೊಡುವ ಹಿಂಸೆಯನ್ನು ದರ್ಶನ್ ಅವರಿಗೆ ಕೊಡುವ ಅಗತ್ಯತೆ ಇದೆಯಾ? .ದರ್ಶನ್ ಅವರು ಅಷ್ಟು ಕೆಟ್ಟವರಾ? ದರ್ಶನ್ ಅವರು ಬೆಳಕು ನೋಡದ ಹಾಗೆ ಕೂಡಿ ಹಾಕುವುದು ಸರಿಯಾದ ಕ್ರಮವಲ್ಲ .ಸತ್ಯಾಸತ್ಯತೆ ಹೊರ ಬರುವವರೆಗೂ ಸಾಮಾನ್ಯ ಆರೋಪಿತರ ನೋಡಿ. ಚಿತ್ರರಂಗಕ್ಕೆ ಒಂದು ಗೌರವ ಕೊಡಿ ಎಂದು ಅವರು ಸಕಾ೯ರಕ್ಕೆ ವಿನಂತಿಸಿದ್ದಾರೆ .

