ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ ಪ್ರದರ್ಶನ

Must Read

ಮೂಡಲಗಿ: ತಾಲೂಕಿನ ಹೊಸಯರಗುದ್ರಿ ಗ್ರಾಮದಲ್ಲಿ ಶ್ರೀ ಈರಾಲಿಂಗೇಶ್ವರ ಜಾತ್ರಾಮಹೋತ್ಸವ ನಿಮಿತ್ತವಾಗಿ ಜ.11 ರಂದು ರಾತ್ರಿ 9-30ಕ್ಕೆ ಗ್ರಾಮದ ಶ್ರೀ ಲಕ್ಷ್ಮೀ ದೇವಿ ನಾಟ್ಯ ಸಂಘ ಅರ್ಪಿಸುವ 5ನೇ ಕಲಾಕುಸುಮ ದಿಲ್ಲಿ ಹೊಕ್ಕ ಪುಂಡ ಹುಲಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಉಮೇಶ ಚಿಪ್ಪಲಕಟ್ಟಿ ತಿಳಿಸಿದಾರೆ.

ಸಮಾರಂಭದ ಸಾನ್ನಿಧ್ಯವನ್ನು ಮರೆಗುದ್ದಿಯ ಶ್ರೀ ನಿರುಪಾಧೀಶ್ವರ ಶ್ರೀಗಳು, ಹೊಸಯರಗುದ್ರಿಯ  ಶ್ರೀ ಸಿದ್ಧಪ್ರಭು ಶಿವಾಚಾರ್ಯ ಶ್ರೀಗಳು, ಮಲ್ಲಯ್ಯ ಹಿರೇಮಠ, ಪ್ರಭು ಹಿರೇಮಠ ವಹಿಸುವರು.

ಶಾಸಕ ಹಾಗೂ ಕೆ.ಎಂ.ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಘನ ಅಧ್ಯಕ್ಷತೆ ವಹಿಸುವರು, ಸರ್ವೋತ್ತಮ ಜಾರಕಿಹೊಳಿ ಮತ್ತು ಡಾ.ರಾಜೇಂದ್ರ ಸಣ್ಣಕ್ಕಿ ಅಧ್ಯಕ್ಷತೆ ವಹಿಸುವರು ಹಾಗೂ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ಜನಪ್ರತಿನಿಧಿಗಳು ಮತ್ತಿತರರು ಭಾಗವಹಿಸುವರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group