spot_img
spot_img

ದೈಹಿಕ, ಮಾನಸಿಕ ದೃಢತೆಗೆ ಕ್ರೀಡೆಗಳು ಸಹಕಾರಿ- ಸರ್ವೋತ್ತಮ ಜಾರಕಿಹೊಳಿ

Must Read

ಹಲಗಿ: ಕುಸ್ತಿ, ಕಬಡ್ಡಿ, ಖೋಖೋ, ವಾಲಿಬಾಲ್‍ದಂತಹ ಗ್ರಾಮೀಣ ಕ್ರೀಡೆಗಳು ಮನುಷ್ಯನಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಢವಾಗಲು ಸಹಕಾರಿಯಾಗಿವೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಹೇಳಿದರು.

ಸೋಮವಾರದಂದು ತಾಲೂಕಿನ ಅರಳಿಮಟ್ಟಿ ಗ್ರಾಮದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಬೆಳಗಾವಿ, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಳಗಾವಿ, ತಾಲೂಕಾ ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ ಢವಳೇಶ್ವರ, ಬಸವೇಶ್ವರ ಸ್ಪೋರ್ಟ್ಸ್ ಕ್ಲಬ್ ಅರಳಿಮಟ್ಟಿ ಸಂಯುಕ್ತ ಆಶ್ರಯದಲ್ಲಿ ಬೆಳಗಾವಿ ಜಿಲ್ಲಾಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು ಮಹಾಭಾರತದಲ್ಲಿ ಕೃಷ್ಣ ಹೇಳಿದಂತೆ ಕ್ರೀಡಾಪಟುಗಳು ಕೂಡ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ತಮ್ಮ ಕಾಯಕವಾದ ಕ್ರೀಡೆಯನ್ನು ಶ್ರದ್ಧೆಯಿಂದ ಆಡಿದ್ದೆ ಆದರೆ ಗೆಲವು ಶತಸಿದ್ಧ, ಪ್ರಶಸ್ತಿ ಪದಕಗಳು ತಾನಾಗಿಯೇ ಒಲಿದು ಬರುತ್ತವೆ, ಯುವಕರು ಇಂಥ ಗ್ರಾಮೀಣ ಕ್ರೀಡೆಗಳ ಕಡೆಗೆ ಹೆಚ್ಚಿನ ಗಮನ ಹರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. 

ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಮಾತನಾಡಿ ಗ್ರಾಮೀಣ ಭಾಗದ ಕ್ರೀಡೆಗಳನ್ನು ಬೆಳೆಸಲು ಕ್ರೀಡಾ ಇಲಾಖೆ ಹಾಗೂ ನಮ್ಮ ಭಾಗದ ಶಾಸಕರು ಹಾಗೂ ಕೆಎಂಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಕೊಡುಗೆ ಅಪಾರವಾಗಿದೆ, ಜಿಲ್ಲಾ ಮಟ್ಟದ ಕ್ರೀಡಾಕೂಟ ಒಂದು ಗ್ರಾಮದಲ್ಲಿ ಆಗಬೇಕಾದರೆ ಊರಿನ ಗುರುಹಿರಿಯರ ಸಹಕಾರ ಅತಿ ಅವಶ್ಯಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷರಾದ ರಂಗಪ್ಪ ಕಳ್ಳಿಗುದ್ದಿ  ವಹಿಸಿದ್ದರು. ಕ್ರೀಡಾಕೂಟದಲ್ಲಿ ಜಿಲ್ಲೆಯ 14 ತಾಲೂಕುಗಳ ತಂಡಗಳು ಭಾಗವಹಿಸಿ, ಕುಸ್ತಿ, ಕಬಡ್ಡಿ, ಖೋಖೋ, ವಾಲಿಬಾಲ್, ಚಕ್ಕಡಿ ಸ್ಪರ್ಧೆ, ಯೋಗಾಸನ ಕ್ರೀಡೆಗಳು ಜರುಗಿ, ವಿಜೇತರಾದ ತಂಡಗಳಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕರಾದ ಅಬ್ದುಲ್ ಮಿರ್ಜಾನಾಯಕ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಬಸವರಾಜ ಜಕ್ಕಣ್ಣವರ, ಕ್ರೀಡಾ ಇಲಾಖೆ ಸಾಹಸ ತರಬೇತಿದಾರರಾದ ರಮೇಶ ಅಲಗೂಡೇಕರ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಣಮಂತ ತಾಳಿಕೋಟಿ, ಗ್ರಾಮದ ಮುಖಂಡರಾದ ನಂದೆಪ್ಪಾ ನಾಡಗೌಡ, ಹಣಮಂತ ನಾಯಕ, ಮುರಿಗೆಪ್ಪಾ ಹುಬ್ಬಳ್ಳಿ, ಬಸಪ್ಪಾ ಬಾರ್ಕಿ, ಅಲ್ಲಪ್ಪಾ ಖಾನಪ್ಪನವರ, ಈರಪ್ಪಾ ನಂದಗನ್ನವರ, ಮಡಿವಾಳಯ್ಯಾ ಗುಡದಯ್ಯನಮಠ, ಮಹಾದೇವ ನಂದೆಪ್ಪನವರ, ದುಂಡಪ್ಪಾ ಪಾಟೀಲ, ಶಿವಾನಂದ ಬಸಯ್ಯಾ ಮಠಪತಿ, ಶಿವಾನಂದ ನಂದೆಪ್ಪನವರ ಹಾಗೂ ಸಂಘಟಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಬಸವೇಶ್ವರ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಮಹಾಂತೇಶ ಪುರವಂತ ಸ್ವಾಗತಿಸಿದರು. ಜಿಲ್ಲಾ ಯುವ ಪ್ರಶಸ್ತಿ ವಿಜೇತ ಹಣಮಂತ ಮದಣ್ಣವರ ನಿರೂಪಿಸಿ ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ

ಬೆಳಗಾವಿ: ಮಕ್ಕಳಿಲ್ಲದ ಬಡ ದಂಪತಿಗಳಿಗೆ ರಿಯಾಯಿತಿ ದರದಲ್ಲಿ ಸಂತಾನ ಪ್ರಾಪ್ತಿ ಚಿಕಿತ್ಸೆ ಕೊಡಿಸಲು ಕೊಲ್ಲಾಪುರದ ಸಿದ್ಧಗಿರಿ ಮಠದ ದತ್ತಿ ಆಸ್ಪತ್ರೆಯಲ್ಲಿ ಐವಿಎಫ್ ಕೇಂದ್ರ ಸ್ಥಾಪಿಸಲಾಗಿದೆ ಎಂದು ಮುಜರಾಯಿ,...
- Advertisement -

More Articles Like This

- Advertisement -
close
error: Content is protected !!