ಸಿಂದಗಿ: ತಾಲೂಕಿನ ಬಗಲೂರ — ಘತ್ತರಗಿ ಗ್ರಾಮದ ಮಧ್ಯೆ ಹರಿಯುವ ಭೀಮಾನದಿಗೆ ಅಡ್ಡಲಾಗಿ ನಿರ್ಮಿಸಲಾಗುತ್ತಿರುವ ಬ್ಯಾರೇಜ್ ಕಾಮಗಾರಿ ವಿಳಂಬ ಹಾಗೂ ಬ್ಯಾರೇಜ ಹಿನ್ನಿರಿನಿಂದ ಮುಳುಗಡೆ ಯಾಗಿರುವ ರೈತರ ಜಮಿನುಗಳ ಖೋಟ್ಟಿ ಸರ್ವೇ ಖಂಡಿಸಿ ಬಗಲೂರು ಗ್ರಾಮದ ಡಾ. ಅಂಬೇಡ್ಕರ ವೃತ್ತದಲ್ಲಿ ಬೃಹತ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಧರ್ಮರಾಜ ಯಂಟಮಾನ ಮಾತನಾಡಿ, ಸನ್ 2019 ರಿಂದ ನಿರ್ಮಿಸಲಾಗುತ್ತಿರುವ ಬ್ಯಾರೇಜ ಕಾಮಗಾರಿ ಆಮೆ ನಡಿಗೆಯಲ್ಲಿ ನಡೆಯುತ್ತಿದೆ ಮತ್ತು ಪ್ರತಿ ವರ್ಷ ಮಳೆಗಾಲದ ಸಮಯದಲ್ಲಿ ಮತ್ತು ಹಿಂದಿನ ಡ್ಯಾಮ್ ಗಳಿಂದ ನೀರು ಬಿಟ್ಟಾಗ ಬೀಮಾ ನದಿಯ ಅಕ್ಕ ಪಕ್ಕ ಗ್ರಾಮಕ್ಕೆ ಹೊಂದಿಕೊಂಡಂತೆ ಇರುವ ರೈತರ ಜಮೀನುಗಳು ಸಂಪೂರ್ಣ ಮುಳಗಡೆಯಾಗಿ ಅಪಾರ ಪ್ರಮಾಣದ ರೈತರಿಗೆ ಹಾನಿ ಉಂಟುಮಾಡುತ್ತಿದೆ, ಪ್ರತಿ ವರ್ಷ ಹಳೆ ಬ್ಯಾರೇಜ ಗೇಟ್ ತೆರೆಯುವುದಕ್ಕಾಗಿ ಲಕ್ಷಾಂತರ ರೂಪಾಯಿಗಳ ಟೆಂಡರ ಹರಾಜು ಮಾಡುತ್ತಿದ್ದು ಸತತ ಮೂರು ವರ್ಷವಾದರೂ ಒಂದು ಬಾರಿಯೂ ಹಳೆಯ ಗೇಟ್ ತೆರೆಯದೆ ಇರುವುದರಿಂದ ಬ್ರಿಡ್ಜ್ ಮುಳುಗಡೆಯಾಗಿ ಅಪಾರ ಪ್ರಮಾಣದ ರೈತರಿಗೆ ಹಾನಿ ಉಂಟಾಗುತ್ತಿದೆ ಅಲ್ಲದೆ ಬ್ಯಾರೇಜದಿಂಧ ಮುಳುಗಡೆಯಾದ ರೈತರ ಪರಿಹಾರಕ್ಕೆ ಅರ್ಹರಲ್ಲದ ರೈತರ ಪಟ್ಟಿ ತಯಾರಿಸಿದ್ದು ಕೂಡಲೆ ಅರ್ಹ ರೈತರಿಗೆ ಪರಿಹಾರ ಒದಗಿಸಬೇಕು ಮತ್ತು ಶೀಘ್ರಗತಿಯಲ್ಲಿ ಬ್ಯಾರೇಜ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದಕ್ಕ ಮುನ್ನ ಭೀಮಾನದಿಯ ಬ್ಯಾರೇಜನಿಂದ ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆ ಮಾಡುತ್ತಾ ಬಗಲೂರ ಗ್ರಾಮದ ಡಾ|| ಬಿ ಆರ್ ಅಂಬೇಡ್ಕರ ವೃತ್ತದಲ್ಲಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಿಂಗರಾಜ ವಾಲಿಕಾರ ಮಾತನಾಡಿ, “ಮುಳುಗಡೆಯಾದ ರೈತರ ಜಮೀನುಗಳಿಗೆ ನ್ಯಾಯಯುತವಾದ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು.
ಇದೆ ಸಂದರ್ಭದಲ್ಲಿ ಸಿದ್ದಣ್ಣ ಐರೋಡಗಿ, ಸುನೀಲ ನೌಟಾಕ, ಸುನೀಲ ಹೂನಳ್ಳಿ, ಚೇತು ಮಾಗಣಗೇರಿ, ಶಿರಸಗಿ ಗ್ರಾಮದ ಮಡಿವಾಳ ಶಿರಸಗಿ, ವಿಠ್ಠಲ ಕೋರಿ, ಮಲ್ಲಪ್ಪ ನಡಕುರ ಮತ್ತು ಗ್ರಾ.ಪಂ ಅಧ್ಯಕ್ಷರು ಸುನೀಲ ಮಾಗಣಗೇರಿ ಸೇರಿದಂತೆ ನೂರಾರು ಸಾರ್ವಜನಿಕರು ಇದ್ದರು.