spot_img
spot_img

ದೇವೇಗೌಡರ ಸಾಧನೆ ಕನ್ನಡಿಗರಿಗೆ ಸ್ಪೂರ್ತಿದಾಯಕ: ನಾಡೋಜ ಡಾ.ಮಹೇಶ ಜೋಶಿ

Must Read

- Advertisement -

ಬೆಂಗಳೂರು: ದೃಷ್ಟಿ ವಿಕಲಚೇತನರು ಆನೆಯನ್ನು ಸ್ಪರ್ಶಿಸಿ  ತಮ್ಮ ಅರಿವಿಗೆ ಸಿಕ್ಕಷ್ಟನ್ನೇ ಆನೆ ಎಂದು ಕೊಳ್ಳುವಂತೆ ದೇವೇಗೌಡರನ್ನು ಎಲ್ಲರೂ ತಮಗೆ ದಕ್ಕಿದಂತೆ ವಿಶ್ಲೇಷಿಸುತ್ತಿದ್ದಾರೆ. ಆದರೆ ಅವರ ವ್ಯಕ್ತಿತ್ವ ಮತ್ತು ಸಾಧನೆ ಬಹಳ ವಿಶಾಲವಾದದ್ದು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ. ಡಾ.ಮಹೇಶ ಜೋಶಿ ವಿಶ್ಲೇಷಿಸಿದರು.

ಅವರು ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ ನೇ.ಭ.ರಾಮಲಿಂಗ ಶೆಟ್ಟರ  ದೇವೇಗೌಡರ ಜೀವನ ಮತ್ತು ಸಾಧನೆಯನ್ನು ಕುರಿತ ‘ಮಣ್ಣಿನ ಮಗ’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. 

ದೆಹಲಿಯ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕನ್ನಡಿಗ ದೇವೇಗೌಡರು ಕನ್ನಡ ಸಾಂಸ್ಕೃತಿಕ ಲೋಕಕ್ಕೆ ಅಪಾರ ಕೊಡುಗೆಯನ್ನು ನೀಡಿದವರು. ಕನ್ನಡದ ಅಸ್ಮಿತೆಯನ್ನು ರಾಷ್ಟಮಟ್ಟಕ್ಕೂ ಕರೆದೊಯ್ದ ಅವರು ‘ರಾಗಿ ಮುದ್ದೆ’ಯ ದೇಸಿತನನ್ನು ಜಗತ್ತಿಗೇ ಸಾರಿದ್ದು ಅವರ ಸಾಧನೆಗೆ ಒಂದು ರೂಪಕದಂತಿದೆ ಎಂದು ವಿಶ್ಲೇಷಿಸಿ ನೆಲಮೂಲ ಸಂಸ್ಕೃತಿಯಿಂದ ಬಂದ ನೇ.ಭ.ರಾಮಲಿಂಗ ಶೆಟ್ಟರು ವಿರಾಟ್ ದೇಸಿ ಪ್ರತಿಭೆ ದೇವೇಗೌಡರ ಬಗ್ಗೆ ಬರೆದಿರುವುದು ಅರ್ಥಪೂರ್ಣವಾಗಿದೆ ಎಂದರು.  

- Advertisement -

ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ಮಾತನಾಡಿ ರಾಮಲಿಂಗ ಶೆಟ್ಟರ ಕೃತಿ ಕೇವಲ ದೇವೇಗೌಡರ ಇತಿಹಾಸವಾಗದೆ  ಕರ್ನಾಟಕದ ಇನ್ನೂ ವಿಸ್ತರಿಸಿದರೆ ಭಾರತದ ರಾಜಕೀಯ ಮತ್ತು ಸಾಂಸ್ಕೃತಿಕ ಇತಿಹಾಸ ಕೂಡ ಆಗಿದೆ. ದೇವೇಗೌಡರ ಅರವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಅವರು ಅಧಿಕಾರದಲ್ಲಿದ್ದು ಆರೂವರೆ ವರ್ಷಗಳಿಗೂ ಕಡಿಮೆ. ಚಿಕ್ಕ ವಯಸ್ಸಿನಲ್ಲಿಯೇ ವಿರೋಧ ಪಕ್ಷದ ನಾಯಕರಾದ ಅವರು ಹಠ, ಛಲ, ಸಾಧನೆ, ಬದ್ದತೆಗಳಿಂದ ಬಹಳ ಎತ್ತರಕ್ಕೆ ಏರಿದರು. ಹುಬ್ಬಳ್ಳಿ ಈದ್ಗ ಮೈದಾನದ ವಿವಾದವನ್ನು ಅವರು ಮುತ್ಸದ್ದಿತನದಿಂದ ಬಗೆಹರಿಸಿದ್ದಕ್ಕೆ ನಾನೇ ನಿದರ್ಶನವಾಗಿದ್ದೇನೆ, ಕರ್ನಾಟಕದ ಕೃಷಿ, ನೀರಾವರಿ ವಿಷಯಗಳಲ್ಲಿ ಅವರು ಮಾಡಿರುವ ಹೋರಾಟಗಳು ಸ್ಮರಣೀಯ. ಇಂತಹ ಕೃತಿಗಳಿಗೆ ನಾಡಿಗೆ ಪರಂಪರೆಯ ಪ್ರಜ್ಞೆಯನ್ನು ಒದಗಿಸುತ್ತದೆ. ಪರಂಪರೆ ಇರುವ ನಾಡಿಗೆ ಮಾತ್ರ ಭವಿಷ್ಯವಿರುತ್ತದೆ ಎಂದು ಹೇಳಿದರು.

ಮಾಜಿ ವಿಧಾನ ಪರಿಷತ್ ಸಭಾಪತಿ ವಿ.ಆರ್.ಸುದರ್ಶನ್ ಅವರು ಮಾತನಾಡಿ ರಾಮಲಿಂಗ ಶೆಟ್ಟರ ಕೃತಿ ಉತ್ತಮ ಲೇಖನಗಳನ್ನು ಹೊಂದಿದ್ದು ದೇವೇಗೌಡರ ವ್ಯಕ್ತಿತ್ವದ ಗಟ್ಟಿತನವನ್ನು ವಿವರಿಸುತ್ತದೆ. ದೇವರಾಜ ಅರಸು ಅವರು ಮುಖ್ಯಮಂತ್ರಿಗಳಾಗಿ ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದ ಅವಧಿ ಕರ್ನಾಟಕ ವಿಧಾನ ಮಂಡಲದ ಇತಿಹಾಸದಲ್ಲಿ ಸುವರ್ಣಾಕ್ಷರಗಳಿಂದ ಬರೆದಿಡುವಂತಹದು. ಆಗ ನಡೆದ ಸಂಸಧೀಯ ಕಲಾಪಗಳನ್ನು ಈಗಿನ ಹೊಸ ಸದಸ್ಯರು ಅಧ್ಯಯನ ಮಾಡ ಬೇಕು. ರಾಷ್ಟ್ರೀಯ ಜಲನೀತಿಯ ಪರಿಕಲ್ಪನೆಯನ್ನು ಪರಿಚಯಿಸಿದ ದೇವೇಗೌಡರು. ಪ್ರಜಾಪ್ರಭುತ್ವಕ್ಕೆ ಹೊಸತನವನ್ನು ತಂದರು ಎಂದು ಹೇಳಿದರು. ಆದಿ ಚುಂಚನಗಿರಿ ಪೀಠಾಧ್ಯಕ್ಷರಾದ ಶ್ರೀ ಶ್ರೀ ನಿರ್ಮಲಾನಂದ ಮಹಾಸ್ವಾಮಿಗಳು ಮಾತನಾಡಿ ಕೆಂಪೇಗೌಡರಂತೆ ದೇವೇಗೌಡರು ಧರ್ಮಪ್ರಭುಗಳು, ನಾಡಿನ ಜನರ ಏಳಿಗೆಯನ್ನೇ ತಮ್ಮ ಉಸಿರಾಗಿಸಿ ಕೊಂಡವರು. ಇಂತಹವರ ಕುರಿತು ಎಷ್ಟು ಕೃತಿಗಳು ಬಂದರೂ ಸ್ವಾಗತಾರ್ಹವೇ ಎಂದರು. ದೇವೇಗೌಡರನ್ನು ಯೋಗ ಪುರುಷ ಮತ್ತು ಯುಗ ಪುರುಷ ಎಂದು ಬಣ್ಣಿಸಿದ ಡಾ.ಹಂಪ.ನಾಗರಾಜಯ್ಯನವರು ಈ ಕೃತಿ ಸಮಕಾಲೀನ ಮತ್ತು ಸರ್ವಕಾಲೀನ ಎರಡೂ ನೆಲೆಗಳನ್ನು ಹೊಂದಿದೆ. ಬೆಂಗಳೂರಿಗೆ ಮೇಲ್ಸೇತುವೆ ತಂದ ದೇವೇಗೌಡರು ಮಹಿಳಾ ಬರಹಗಾರರಿಗೆ ದೊಡ್ಡ ಮೊತ್ತ ಅತ್ತಿಮಬ್ಬೆ ಪ್ರಶಸ್ತಿಯನ್ನು ಸ್ಥಾಪಿಸಿದ್ದರು. ಅವರ ವ್ಯಕ್ತಿತ್ವದ ಕುರಿತು ಇನ್ನಷ್ಟು ಚರ್ಚೆಗಳಾಗಲಿ ಎಂದರು. 

ಪದ್ಮಶ್ರೀ ಡಾ.ಸಿ.ಎನ್.ಮಂಜುನಾಥ್ ಅವರು ಮಾತನಾಡಿ ರಾಜಕೀಯವಾಗಿ ದೇವೇಗೌಡರಿಗೆ ಟ್ವಿಂಟಿ ಟ್ವಂಟಿ ಕ್ರಿಕೆಟ್ನಂತೆ ಪ್ರತಿ ಚೆಂಡಿಗೂ ರನ್ ಗಳಿಸುವ ಅನಿವಾರ್ಯತೆಯ  ಇನ್ನಿಂಗ್ಸ್ ಸಿಕ್ಕಿತು. ಅದರಲ್ಲಿಯೂ ಅವರು ಗೆದ್ದರು, ವಿಶ್ವಗಸಂಸ್ಥೆಯ ಮನ ಒಲಿಸಿ ಕರ್ನಾಟಕಕ್ಕೆ ನೀರಾವರಿಗೆ ಹಣ ತಂದ ಹೆಗ್ಗಳಿಕೆ ಅವರದು ಇವತ್ತಿಗೂ ಮೂರನೆಯ ರಾಷ್ಟ್ರಗಳಿಗೆ ಹಣಕಾಸು ನೆರವು ನೀಡಲು ‘ದೇವೇಗೌಡ ಫಾರ್ಮಲಾ’ವೇ ಅಲ್ಲಿದೆ. ರಾಜ್ ಕುಮಾರ್ ಅವರಿಗೆ ಫಾಲ್ಕೆ ಬರಲು ದೇವೇಗೌಡರು ಕಾರಣಕರ್ತರು, ದೆಹಲಿಯಲ್ಲಿ ಮೆಟ್ರೂ ಬರಲು ಅವರು ಕಾರಣರ್ತರು, ಜಮ್ಮು ಕಾಶ್ಮೀರದಲ್ಲಿ ಶಾಂತಿಯುತ ಚುನಾವಣೆ ನಡೆಸಿದ್ದು ಅವರ ಸಾಧನೆ. ಅವರ ಸಾಧನೆಗಳಿಗೆ ಸೂಕ್ತ ಪ್ರಚಾರ ಸಿಕ್ಕಲಿಲ್ಲ. ಇಂತಹ ಕೃತಿಗಳ ಮೂಲಕ ಅದು ಸಾಧ್ಯವಾಗಲಿ ಎಂದು ಆಶಿಸಿದರು. 

- Advertisement -

ಮಾಜಿ ಸಚಿವೆ ಶ್ರೀಮತಿ ಲೀಲಾದೇವಿ.ಆರ್.ಪ್ರಸಾದ್ ಅವರು ಮಾತನಾಡಿ ಮಹಿಳೆಯರಿಗೆ ಶೇ 33.3ರಷ್ಟು ಮೀಸಲಾತಿ ನೀಡುವುದು ದೇವೇಗೌಡರ ಕಲ್ಪನೆ. ಅದು ಈಗ ಸಾಕಾರಗೊಳುತ್ತಿದೆ. ನೀರಾವರಿ ವಿಷಯದಲ್ಲಿ ಅವರ ಪರಿಣಿತಿ ವಿಶೇಷವಾದದ್ದು ಹಿಪ್ಪರಗಿ ಬ್ಯಾರೇಜ್ ನೋಡುತ್ತಲೇ ಅದರ ಸಮಸ್ಯೆ ಗ್ರಹಿಸಿ ಪರಿಹಾರ ಕಂಡು ಕೊಂಡರು ಎಂದು ತಮ್ಮ ಅನುಭವವನ್ನು ಹಂಚಿ ಕೊಂಡರು. 

ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಟಿ.ಎ.ನಾರಾಯಣಗೌಡರು ಉತ್ತರಕ್ಕೆ ದೇವಿಲಾಲ್ ಇದ್ದಂತೆ ದಕ್ಷಿಣಕ್ಕೆ ದೇವೇಗೌಡರು. ಇಬ್ಬರೂ ಸಾಮಾನ್ಯ ಜನರ ಏಳಿಗೆಗೆ ಶ್ರಮಿಸಿದರು. ನಾಡು-ನುಡಿಗೆ ವಿಶೇಷ ಕೊಡುಗೆ ನೀಡಿದರು. ಈ ಕೃತಿ ರಚಿಸುವ ಮೂಲಕ ನೇ.ಭ.ರಾಮಲಿಂಗ ಶೆಟ್ಟರು ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದರು. 

ಕೃತಿಕಾರ ನೇ.ಭ.ರಾಮಲಿಂಗ ಶೆಟ್ಟರು ಕೃತಿ ರಚಿಸಲು ತಮಗೆ ನೆರವಾದ ಎಲ್ಲರಿಗೂ ವಂದನೆಗಳನ್ನು ಅರ್ಪಿಸಿದರು. 

ಕನ್ನಡ ಸಾಹಿತ್ಯ ಪರಿಷತ್ತಿನ ಕೋಶೋಧ್ಯಕ್ಷರಾದ ಬಿ.ಎಂ.ಪಟೇಲ್ ಪಾಂಡು ಅವರು ಕಾರ್ಯಕ್ರಮ ನಿರೂಪಣೆ ಮಾಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಡಾ.ಪದ್ಮಿನಿ ನಾಗರಾಜು, ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ, ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳು, ಕಾರ್ಯಕರ್ತರು, ಅಪಾರ ಸಂಖ್ಯೆಯ ಎಚ್.ಡಿ.ದೇವೇಗೌಡರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.


ಎನ್.ಎಸ್.ಶ್ರೀಧರ ಮೂರ್ತಿ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group