spot_img
spot_img

ಬಸವಕಲ್ಯಾಣದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ – ಮುಖ್ಯಮಂತ್ರಿ ಬೊಮ್ಮಾಯಿ

Must Read

- Advertisement -

ಬೀದರ – ಬಸವಕಲ್ಯಾಣದಲ್ಲಿ ಶರಣರ ವೈಚಾರಿಕ ಪರ್ವದೊಂದಿಗೆ ಅಭಿವೃದ್ಧಿ ಪರ್ವ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವಕಲ್ಯಾಣದ ಥೇರು ಮೈದಾನದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಮಾತನಾಡಿದ ಅವರು, ಮೇ ಮೊದಲ ವಾರದಲ್ಲಿ ಮಹತ್ವಕಾಂಕ್ಷಿ ಯೋಜನೆಯಾದ ಅನುಭವ ಮಂಟಪದ ನಿರ್ಮಾಣ ಕಾರ್ಯ ಆರಂಭವಾಗಲಿದ್ದು ಜಗತ್ತಿನ ಮೊದಲ‌ ಸಂಸತ್ ಭವನ ಸ್ಥಾಪನೆಯಾಗುವ ಮೂಲಕ 12 ನೇ ಶತಮಾನದ ಗತ ವೈಭವ ಪುನರ್ ಸ್ಥಾಪನೆಯಾಗಲಿದೆ ಅಲ್ಲದೆ ಮುಂದಿನ ದಿನಗಳಲ್ಲಿ ನಾವೆಲ್ಲ ಸೌಹಾರ್ದತೆ, ಶಾಂತಿಯಿಂದ ಬಾಳುವಂಥ ಚಿಂತನೆ ಈ ಅನುಭವ ಮಂಟಪದಿಂದ ಆರಂಭವಾಗಬೇಕು ಎಂದು ಸಿಎಂ ಹೇಳಿದರು.

ಬಸವಣ್ಣನವರ ಕರ್ಮ ಭೂಮಿ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ಒಂದು ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು ಎಂದು ಹೇಳಬಹುದು.

- Advertisement -

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಸವಕಲ್ಯಾಣದಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಜಿಲ್ಲೆಗೊಂದು ಹೊಸ ಕಳೆ ತಂದುಕೊಟ್ಟರು.

ಬೆಳಿಗ್ಗೆ ಬೀದರ್ ಏರ್ ಬೇಸ್ ಗೆ ಮುಖ್ಯಮಂತ್ರಿ ಆಗಮಿಸುತ್ತಿದ್ದಂತೆಯೇ ಕಾಂಗ್ರೆಸ್ ಪಕ್ಷದ ಬ್ಲಾಕ್ ಸಮಿತಿಯಿಂದ ಪ್ರತಿಭಟನೆ ಪ್ರಾರಂಭವಾಯಿತು. ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಅಗತ್ಯ ವಸ್ತುಗಳ ಬೆಲೆಯೇರಿಕೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯ ಮಂತ್ರಿ ವಿರುದ್ಧ ಘೋಷಣೆ ಕೂಗಿದರು.

- Advertisement -

ಇನ್ನೊಂದು ಕಡೆ ಏರ್ ಬೇಸ್ ನಿಂದ ಬಸವಣ್ಣನವರು ನಡೆದಾಡಿದ ಬಸವಕಲ್ಯಾಣಕ್ಕೆ ಮುಖ್ಯ ಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ಪ್ರಯಾಣ ಬೆಳೆಸಿದರು.ಬಸವಕಲ್ಯಾಣಕ್ಕೆ ಆಗಮಿಸಿದಾಗ ಮೊದಲು ಸಭೆ ನಡೆಸಿದ ಮುಖ್ಯ ಮಂತ್ರಿ ಬಸವಕಲ್ಯಾಣ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಿದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ರಾಜ್ಯ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮತ್ತು ಹುಮನಾಬಾದ ಶಾಸಕ ರಾಜಶೇಖರ ಪಾಟೀಲ ಹಾಗು ಜೆಡಿಎಸ್ ಪಕ್ಷದ ಶಾಸಕ ಬಂಡೆಪ್ಪ ಖಾಶೆಂಪೂರ ಸಭೆಯಲ್ಲಿ ಭಾಗವಹಿಸಿದ್ದರು.

ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿ ಬಾಷಣ ಮಾಡಿ, ಬಸವಕಲ್ಯಾಣ ಅಭಿವೃದ್ಧಿ ನಮ್ಮ ನಾಯಕ ಯಡಿಯೂರಪ್ಪ ನವರ ಕನಸು ಕಂಡಿದ್ದ ನಾಡು ಎಂದು ಹೇಳಿ ಬಾಷಣ ಆರಂಭಿಸಿದರು. ನಂತರ ಬಸವಕಲ್ಯಾಣ ನಗರವನ್ನು ಮುಂದಿನ 5 ವರ್ಷಗಳಲ್ಲಿ ವಿವಿಧ ಅಭಿವೃದ್ಧಿ ಯೊಜನೆಗಳ ಅನಾವರಣ ಕಾರ್ಯಕ್ರಮಕ್ಕೆ ಸಿಎಂ ಬಸವರಾಜ ಬೊಮ್ಮಾಯಿ‌ ಅವರು ಚಾಲನೆ ನೀಡಿದರು.

ಈ ವೇಳೆಯಲ್ಲಿ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ, ಕೇಂದ್ರ ಸಚಿವ ಭಗವಂತ ಖೂಬಾ, ಸಚಿವರಾದ ಪ್ರಭು ಚವ್ಹಾಣ, ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಅನೇಕ ಸ್ವಾಮೀಜಿಗಳು ಇದ್ದರು.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group