spot_img
spot_img

ವಿದ್ಯಾ ಚೇತನ ಪ್ರಕಾಶನಕ್ಕೆ ಬೆಳ್ಳಿ ಹಬ್ಬದ ಸಂಭ್ರಮ

Must Read

- Advertisement -

ಸಿಂದಗಿ: ಜಿಲ್ಲೆಯಲ್ಲಿ ಕಳೆದ 25 ವರ್ಷಗಳಿಂದ ಮಕ್ಕಳ ಮನೋಲ್ಲಾಸಕ್ಕಾಗಿ ತನ್ಮೂಲಕ ಅವರ ವ್ಯಕ್ತಿತ್ವವಿಕಸನಕ್ಕಾಗಿ ಮಕ್ಕಳ ಸಾಹಿತ್ಯ ಪ್ರಕಟಣೆ ಮತ್ತು ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವ ದಿಸೆಯಿಂದ ಕಾರ್ಯಚಟುವಟಿಕೆಗಳನ್ನು ವಿದ್ಯಾಚೇತನ ಪ್ರಕಾಶನ ಆಯೋಜಿಸುತ್ತ ಬಂದಿದೆ. ಈಗ ಪ್ರಕಾಶನವು ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ ಎಂದು ಮಕ್ಕಳ ಸಾಹಿತಿ, ಪ್ರಕಾಶಕ ಹ.ಮ. ಪೂಜಾರ ಹೇಳಿದ್ದಾರೆ.

ಶನಿವಾರ ಪತ್ರಿಕಾ ಹೇಳಿಕೆ ನೀಡಿದ ಅವರು, ಪ್ರಕಾಶನವು ಸ್ಥಳೀಯ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದ ಸಹಯೋಗದೊಂದಿಗೆ ಶಿಕ್ಷಣ ಮಹಾವಿದ್ಯಾಲಯದ ಸಭಾಭವನದಲ್ಲಿ ಎ.10 ರಂದು ಮಧ್ಯಾಹ್ನ 3:30 ಗಂಟೆಗೆ ಸಮಾರಂಭ ಆಯೋಜಿಸಲಾಗಿದೆ. ಸಾರಂಗಮಠ-ಗಚ್ಚಿನಮಠದ ಗುರುಕುಲ ಭಾಸ್ಕರ್ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಾನ್ನಿಧ್ಯ ವಹಿಸುವರು. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಾರ್ಯಕ್ರಮ ಉದ್ಘಾಟಿಸುವ ಜೊತೆಗೆ ಸಂಸ್ಮರಣ ಗ್ರಂಥಗಳಾದ ವಿದ್ಯಾಚೇತನ, ಬೆಳ್ಳಕ್ಕಿ ಕೃತಿಗಳನ್ನು ಲೋಕಾರ್ಪಣೆ ಮಾಡುವರು. ಶಾಸಕ ರಮೇಶ ಭೂಸನೂರ ಅವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಅರುಣ ಶಹಾಪೂರ, ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಆಗಮಿಸುವರು. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸವ ಜೋಗೂರ ಉಪಸ್ಥಿತರಿರುವರು.

ಈ ಸಂದರ್ಭದಲ್ಲಿ ಗಣ್ಯರನ್ನು, ಗ್ರಂಥದಾನಿಗಳನ್ನು ಹಾಗೂ ಗ್ರಂಥ ಸಂಪಾದಕರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ಹೇಳಿದರು.

- Advertisement -

1996ರಲ್ಲಿ ಅಂದಿನ ಶಿಕ್ಷಣ ಮಂತ್ರಿ ಎಚ್.ಜಿ. ಗೋವಿಂದೇಗೌಡರು ಚಾಲನೆ ಮಾಡಿದ ವಿದ್ಯಾಚೇತನ ಪ್ರಕಾಶನವು ಇಂದಿನವರೆಗೂ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಡುವ ಉದ್ದೇಶದಿಂದ ಮೌಲ್ಯಾಧಾರಿತ ಕೃತಿಗಳನ್ನು ಪ್ರಕಾಶನವು ಪ್ರಕಟಿಸಿದೆ. ಮಕ್ಕಳು ತಾವು ಓದಿದ ಕೃತಿಗಳ ಬಗ್ಗೆ ಅನಿಸಿಕೆಗಳನ್ನು ಹೇಳಲು ಓದಿಕಲಿ ಹಾಡಿನಲಿ ಎಂಬ ವೇದಿಕೆ ನೀಡಿದೆ. ಪಠ್ಯೇತರ ಮೌಲ್ಯಾಧಾರಿತ ಕೃತಿಗಳ ಓದುವ ಹವ್ಯಾಸ ಬೆಳೆಸಲು ಪುಸ್ತಕ ಸಂಸ್ಕೃತಿ ಎಂಬ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. 2015 ರಿಂದ ಪ್ರತಿ ವರ್ಷ “ಹವ್ಯಾಸಿ ಓದುಗ” ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.

ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಶಿಕ್ಷಕರಿಗಾಗಿ ಮತ್ತು ಪ್ರಶಿಕ್ಷಣಾರ್ಥಿಗಳಿಗಾಗಿ ಶೈಕ್ಷಣಿಕ ಉಪನ್ಯಾಸಮಾಲೆ ಮತ್ತು ಶೈಕ್ಷಣಿಕ ವಿಚಾರ ಸಂಕಿರಣ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. ಈ ಯೋಜನೆ ಅಡಿ ಶಿಕ್ಷಕರಿಗಾಗಿ ಕ್ರಿಯಾ ಸಂಶೋಧನಾ ಪ್ರಶಸ್ತಿಯನ್ನು ಕೊಡಲಾಗಿದೆ. 2010 ಮತ್ತು 2014ರಲ್ಲಿ ಸಾರಂಗಮಠ-ಗಚ್ಚಿನಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರ ಗ್ರಂಥ ತುಲಾಭಾರ ಮಾಡಿ ಆಯ್ದ ಕೆಲವು ಶಾಲೆಗಳಿಗೆ ಉಚಿತವಾಗಿ ವಿತರಿಸಲಾಗಿದೆ. ಪ್ರಕಾಶನದ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಶಾಲಾ ಪತ್ರಿಕೆ ಪ್ರಕಟಿಸುವ ಶಾಲೆಗಳಲ್ಲಿ ಆಯ್ಕೆಯಾಗುವ ಪತ್ರಿಕೆಗೆ ಪ್ರಶಸ್ತಿ ಕೊಡುವುದನ್ನು ಪ್ರಸಕ್ತ ವರ್ಷದಿಂದ ಪ್ರಾರಂಭಸಿದೆ. ಹೀಗೆ ಪ್ರಕಾಶನವು ಹತ್ತುಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕಾಗಿ, ಶೈಕ್ಷಣಿಕ ಗುಣಮಟ್ಟ ಕಾಯ್ದುಕೊಳ್ಳಬೇಂಬ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದೆ. ಪ್ರಕಾಶನದಿಂದ 15 ಕೃತಿಗಳು, 5 ಸಂಪಾದನೆ ಕೃತಿಗಳು ಪ್ರಕಟಿಸಲಾಗಿದೆ ಎಂದು ಹೇಳಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group