spot_img
spot_img

ವಿಷ್ಣು ಸಹಸ್ರನಾಮ ಪಠಣದಿಂದ ಸತ್ಯದರ್ಶನ ಲಾಭ

Must Read

- Advertisement -

ಶ್ರೀ ವಿಷ್ಣು ಸಹಸ್ರನಾಮ ಮಹಾವಿಷ್ಣುವಿನ 1,000 ಹೆಸರುಗಳನ್ನು ಒಟ್ಟುಗೂಡಿಸಿದ್ದು ಶ್ರೀ ವ್ಯಾಸ ಮಹಾಮುನಿಗಳು ಇದರಲ್ಲಿನ ಎಲ್ಲಾ 108 ಶ್ಲೋಕ ಗಳನ್ನು ಬರೆದಿದ್ದಾರೆ. ಪ್ರತಿಯೊಂದು ಹೆಸರುಗಳಿಗೂ ಒಂದೊಂದು ಅರ್ಥವಿದ್ದು ನಾಮ, ನಾಮಾವಳಿಗಳನ್ನು ಹೇಳುವ ಸಮಯದಲ್ಲಿ ಏರ್ಪಡುವ ಧ್ವನಿ ತಂತುಗಳು ಹೇಗೆ ಹೇಳುವ ಮತ್ತು ಕೇಳುವ ವ್ಯಕ್ತಿಯ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಹಲವಾರು ನುರಿತ ವಿದ್ವಾಂಸರುಗಳು ತಮ್ಮ ಗ್ರಂಥ ದಲ್ಲಿ ತಿಳಿಸಿದ್ದಾರೆ.

ಈ 108 ಶ್ಲೋಕಗಳ ಪಠಣ ಮತ್ತು ಶ್ರವಣ ವ್ಯಕ್ತಿಯ ಆತ್ಮೋದ್ಧಾರಕ್ಕೆ ಸಹಾಯಕವಾಗಿದೆ.ಇದರಿಂದಾಗಿ ಮೆದುಳಿನ ನರಗಳಲ್ಲಿ ಅಲೆಗಳು ಉತ್ಪತ್ತಿಯಾಗಿ ದೇಹದಲ್ಲಿನ ಜೈವಿಕ ಶಕ್ತಿಯ ಬೆಳವಣಿಗೆಗೆ ಹಾಗು ಒಬ್ಬ ವ್ಯಕ್ತಿಯ ಭಾವನೆಗಳು ಮತ್ತು ಆತನ ಯೋಚನಾಮಟ್ಟವನ್ನು ನಿಯಂತ್ರಿಸುವುದರಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ. ವಿಷ್ಣು ಸಹಸ್ರನಾಮ ಪಠಣೆ ಹಿಂದೂಗಳ ಮನೆಮನೆಯಲ್ಲಿ ನಡೆಯುತ್ತದೆ. ಇದನ್ನು ಸರಿಯಾದ ಮಾರ್ಗದರ್ಶನದಲ್ಲಿ, ತಿಳಿವಳಿಕೆಯಿಂದ ಸ್ಪಷ್ಟವಾಗಿ ಶುದ್ಧವಾಗಿ ಭಕ್ತಿಯಿಂದ ಶ್ರದ್ಧೆಯಿಂದ ಮಾನವರು ಬಳಸಿದಾಗ ಅಷ್ಟೇ ಅಧ್ಯಾತ್ಮದ ಸಾಧನೆಯ ಕಡೆಗೂ ನಡೆಯುವ ಶಕ್ತಿ ಲಭಿಸುತ್ತದೆ. ಪ್ರತಿಯೊಂದು ಶ್ಲೋಕ ಮಾನವನ ಸಮಸ್ಯೆಗೆ ಪರಿಹಾರ ಕೊಡುತ್ತದೆನ್ನಬಹುದು.

ಉದಾಹರಣೆಗೆ, ಇದರ14 ನೇ ಶ್ಲೋಕ

- Advertisement -

“ಸರ್ವಗಸ್ಸರ್ವವಿದ್ಭಾನು: ವಿಷ್ವಕ್ಸೇನೋ ಜನಾರ್ದನ:|
ವೇದೋ ವೇದವಿದವ್ಯಂಗೋ ವೇದಾಂಗೋ ವೇದವಿತ್ ಕವಿ:|”

ಇದನ್ನು ಮಕ್ಕಳಿಗೆ,ವಿದ್ಯಾರ್ಥಿಗಳಿಗೆ ಒಳ್ಳೆಯ ಬುದ್ದಿ, ವಿದ್ಯೆ, ಗುರುಹಿರಿಯರಲ್ಲಿ ಗೌರವ, ನೆನಪಿನಶಕ್ತಿ ಹೆಚ್ಚಾಗಲು,ಉನ್ನತ ಸ್ತರದಲ್ಲಿ ಸ್ಥಾನ,ಯಶಸ್ಸು, ಕೀರ್ತಿ ಪಡೆಯಲು ದಿನವೂ ಹೇಳಿಕೊಳ್ಳಲು ತಿಳಿಸಲಾಗಿದೆ.

ಹೀಗೇ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ಮಂತ್ರಶಕ್ತಿಯನ್ನು ಬಳಸಿಕೊಂಡು ಬಂದಿರುವ ನಮ್ಮ ಹಿಂದೂ ಧರ್ಮದ ಬಗ್ಗೆ ತಿಳಿಯುವುದು ಬಹಳಷ್ಟಿದೆ.

- Advertisement -

ತತ್ವಜ್ಞಾನವನ್ನು ತಂತ್ರಜ್ಞಾನದಿಂದ ಅಳೆಯಲಾಗೋದಿಲ್ಲವೆನ್ನಬಹುದಲ್ಲವೆ? ತತ್ವಜ್ಞಾನದಿಂದ ಆರೋಗ್ಯಾಭಿವೃದ್ದಿಯಾಗುತ್ತದೆ. ತತ್ವ ಬಿಟ್ಟು ತಂತ್ರ ಮುಂದೆ ನಡೆದಂತೆಲ್ಲಾ ಜೀವ ಅತಂತ್ರಸ್ಥಿತಿಗೆ ತಲುಪುತ್ತದೆ ಎನ್ನುತ್ತಾರೆ ಮಹಾತ್ಮರುಗಳು. ಮಂತ್ರ ತಂತ್ರ ಯಂತ್ರಗಳನ್ನು ಸದ್ಬಳಕೆ ಮಾಡಿಕೊಂಡಾಗಲೆ ಸ್ವತಂತ್ರ ಜ್ಞಾನ. ಭೂಮಿಯ ಮೇಲೆ ಎಲ್ಲಾ ಇದೆ. ಭೂಮಿಯಿಲ್ಲದೆ ಮನುಕುಲವಿಲ್ಲ.ಜ್ಞಾನದಿಂದ ಮಾತ್ರ ಆತ್ಮೋದ್ಧಾರ.

ಜಗತ್ತಿನ 12 ನೇ ಜ್ಞಾನಿಯೆಂದು ಕರೆಸಿಕೊಂಡಿದ್ದ ಭೀಷ್ಮರು ತಮ್ಮ ಇಚ್ಛೆಯಂತೆ ದೇಹವನ್ನು ತ್ಯಜಿಸಲು ಸಿದ್ಧರಾದ ಸಮಯದಲ್ಲಿ ಧರ್ಮರಾಯನು ಧರ್ಮ ಮತ್ತು ಕರ್ಮಗಳ ಬಗ್ಗೆ ಸಂಶಯ ಪರಿಹರಿಸಿಕೊಳ್ಳಲು ಶ್ರೀ ಕೃಷ್ಣ ನ ಆಣತಿಯಂತೆ ಭೀಷ್ಮರ ಭೇಟಿ ಮಾಡಿ ಕೆಲವು ಪ್ರಶ್ನೆಗಳನ್ನು ಕೇಳಿದಾಗ, ಅದಕ್ಕೆ ಉತ್ತರವಾಗಿ ಭೀಷ್ಮರು

“ಜಗತ್ತಿಗೆ ಪ್ರಭುವೂ,ದೇವ ದೇವನೂ,ಪುರುಷೋತ್ತಮನೂ ಆದ ವಿಷ್ಣುವಿನ ಸಾವಿರನಾಮಗಳನ್ನು ಹೇಳುವುದರಿಂದ ಸ್ತುತಿಸುವುದರಿಂದ, ಕೇಳುವುದರಿಂದ, ಅರ್ಚನೆಯ ಮುಖಾಂತರ ಬೇಡಿಕೊಳ್ಳುವುದರಿಂದ ಮಾನವನು ಈ ಸಂಸಾರದಿಂದ ಮುಕ್ತಿಯನ್ನು ಹೊಂದುತ್ತಾನೆಂದಿದ್ದಾರೆ.

ಹಾಗಾಗಿ ವಿಷ್ಣು ಸಹಸ್ರನಾಮ ಮಂತ್ರವೂ ಅಲ್ಲ ತಂತ್ರವೂ ಅಲ್ಲ ಯಂತ್ರವೂ ಅಲ್ಲ.ಇದು ಸ್ವತಂತ್ರವಾಗಿ ಮನುಕುಲಕ್ಕೆ ಸಿಕ್ಕಿರುವ ಮಹಾಪ್ರಸಾದ. ಪ್ರಸಾದವನ್ನು ಉತ್ತಮವಾಗಿ ಆರೋಗ್ಯಕರವಾಗಿ ಬಳಸಿದರೆ ಆರೋಗ್ಯ ಹೆಚ್ಚುತ್ತದಲ್ಲವೆ. ಯಾವುದೇ ಪ್ರಸಾದವಾಗಲಿ ಭಕ್ತಿಯಿಂದ ಶ್ರದ್ದೆ, ನಂಬಿಕೆಯಿಂದ ಇತಿಮಿತಿಯಲ್ಲಿ ಶುದ್ಧವಾಗಿ ಸೇವಿಸಿದರೆ ಮಾತ್ರ ಆರೋಗ್ಯ ಹೆಚ್ಚುತ್ತದೆ. ಸಿಕ್ಕಸಿಕ್ಕ ಕಡೆಗೆ ಹೋಗಿ ಬೇಕಾಬಿಟ್ಟಿ ತಿಂದು ಹೊಟ್ಟೆ ತುಂಬಿಸಿಕೊಂಡರೆ ಅಲ್ಲಿ ಸತ್ವವೂ ಇರದೆ ಸತ್ಯವೂ ತಿಳಿಯದೆ ಸತ್ತು ಹೋಗುವವರೆ ಹೆಚ್ಚಾಗುತ್ತಾರೆ. ದೇವರನ್ನು ನಾಮಜಪದಿಂದಲೇ ಕಂಡುಕೊಂಡ ನಮ್ಮ ಹಿಂದಿನ ಮಹಾತ್ಮರುಗಳು ಉಪವಾಸ, ಉಪಕಾರ, ಉಪಚಾರ, ಉದ್ಯೋಗ ತಮ್ಮ ಜೀವನದ ಅಂಗವಾಗಿಸಿಕೊಂಡು ಕಾಯಕದಲ್ಲಿ ಕೈಲಾಸ ಕಂಡಿದ್ದರು. ಕಲಿಗಾಲದಲ್ಲಿ ಮಾನವನಿಗೆ ಆಯಸ್ಸು ಕಡಿಮೆ ಋಣ ಹೆಚ್ಚು. ಋಣ. ತೀರಿಸಲು ಕಾಯಕದಲ್ಲಿಯೇ ಪರಮಾತ್ಮನ ಕಾಣಬೇಕು.ಪರಮಾತ್ಮ ಒಲಿಯೋದು ಜ್ಞಾನಕ್ಕೆ. ಜ್ಞಾನ ಸಿಗೋದು ಅನುಭವದಿಂದ, ಅನುಭವಿಸಬೇಕೆಂದರೆ ಸತ್ಯದ ಹಿಂದೆ ಧರ್ಮದ ಪ್ರಕಾರ ನಡೆದು ಸತ್ಕರ್ಮದಿಂದ ಜೀವನ ನಡೆಸಬೇಕು.

ಇದನ್ನು ಈಗ ಯಾರು ಮಾಡಬಹುದು? ಮಾಡಿದವರನ್ನು ಬಡವರೆಂದು ಪರಿಗಣಿಸಿ ಸರ್ಕಾರದ ಸಾಲದ ಹೊರೆ ಏರಿಸಿದರೆ ಇನ್ನಷ್ಟು ಸಾಲಭಾಧೆಗೆ ಆತ್ಮಹತ್ಯೆ ನಡೆದರೆ ಜೀವಕ್ಕೆ ಪರಮಾತ್ಮ ಕಾಣದು. ಹೀಗಾಗಿ ಇಂದು ಜನಸಂಖ್ಯೆ ಬೆಳೆದರೂ ಜ್ಞಾನಿಗಳ ಸಂಖ್ಯೆ ಬೆಳೆಯದೆ ಅಜ್ಞಾನ ಮಿತಿಮೀರಿ ಪರಕೀಯರ ಹಿಂದೆ ಇದ್ದರೂ ನಾವು ಸ್ವತಂತ್ರ ರು ಎನ್ನುವ ನಂಬಿಕೆಯಲ್ಲಿ ದೇಶದ ಒಳಗಿದ್ದರೂ ವಿದೇಶಿಗಳ ಪರವಿದ್ದು ದೇಶದ ವಿರುದ್ದ ದ್ವನಿ ಎತ್ತಿದರೂ ನನಗೇನೂ ಹೇಳಿಲ್ಲವಲ್ಲ ಎನ್ನುವಂತೆ ಪ್ರಜೆಗಳೆ ಸಹಕರಿಸಿದರೆ ಇದನ್ನು ಮಕ್ಕಳೇ ಮಾಡುವಾಗ ಯಾರೂ ಏನೂ ಮಾತನಾಡಲಾಗದು ಮಾಡೋ ಶಕ್ತಿಯೂ ಇರದು.

ಮಂತ್ರ, ತಂತ್ರ, ಯಂತ್ರಗಳಿಲ್ಲದೆ ಜಗತ್ತಿಲ್ಲ. ಆದರೆ ಅದರ ಬಳಕೆ ಮಾಡೋದಕ್ಕೆ ನಮ್ಮಲ್ಲಿ ಸ್ವತಂತ್ರ ಜ್ಞಾನವಿರಬೇಕು. ಎಲ್ಲಾ ಒಂದೇ ಸರಿ. ಆದರೆ ಎಲ್ಲಾ ಒಂದಾಗೋದಿಲ್ಲವಲ್ಲ. ಕೊನೆಪಕ್ಷ ನಮ್ಮ ಮನೆ,ಸುತ್ತಮುತ್ತಲಿನವರನ್ನು ಒಗ್ಗಟ್ಟಿನಿಂದ ಸೇರಿಸೋ ಕೆಲಸವಾದರೆ ಶಾಂತಿ ಸಿಗಬಹುದು. ದೇಶಕ್ಕಾಗಿ ನಾವೇನೂ ಮಾಡಲಾಗದಿದ್ದರೂ ದೇಶ ಒಡೆಯೋ ಕೆಲಸ ಮಾಡಬಾರದಷ್ಟೆ.

ಹಾಗೆ ದೇವರಿಗೆ ನಾನೇನು ಕೊಡಲು ಸಾಧ್ಯ? ನಾನು ಕೊಟ್ಟಿದ್ದರಲ್ಲಿ ಭ್ರಷ್ಟಾಚಾರದ ಹಣವಾಗಲಿ, ರಾಜಕೀಯವಾಗಲಿ ಇಲ್ಲದಿದ್ದರೆ ಅದೇ ಪುಣ್ಯ. ಇದೀಗ ನಡೆಯುತ್ತಿರುವ ಆಚರಣೆಗಳಲ್ಲಿ ಇದರ ಬಗ್ಗೆ ಸ್ವಲ್ಪ ಗಮನಿಸಿದರೆ ದೇವತಾರಾಧನೆಯ ಉದ್ದೇಶ ಉತ್ತಮವಾಗಿದ್ದರೂ ಅದರ ಫಲ ಯಾರಿಗೆ ಸೇರುತ್ತಿದೆ? ಇದನ್ನು ಅರ್ಥ ಮಾಡಿಕೊಂಡರೆ ದೇವರೇಕೆ ಕಣ್ಣುಮುಚ್ಚಿ ಕುಳಿತಿದ್ದಾನೆಂಬುದರ ಪ್ರಶ್ನೆಗೆ ಉತ್ತರ ಸಿಗುತ್ತದೆ. ನಾವೇನು ಕೊಟ್ಟೆವೂ ಅದೇ ತಿರುಗಿ ಪಡೆಯೋದಷ್ಟೆ.

ಒಟ್ಟಿನಲ್ಲಿ ನಾವೆಲ್ಲ ಕಾರಣಕರ್ತರಷ್ಟೆ. ನಡೆಸೋ ಶಕ್ತಿ ಬೇರೆಯಿದೆ. ಅದನ್ನು ಒಳಗೆ ಕಂಡುಕೊಂಡರೆ ಸಹಸ್ರನಾಮದಲ್ಲಿನ ವಿಷ್ಣುವಿನ ಮಹಿಮೆ ಒಂದೊಂದು ಅಕ್ಷರ,ಪದ,ವಾಕ್ಯ..ಹೀಗೇ ಅಧ್ಯಾತ್ಮ ದ ಒಳಗಿನ ಸತ್ಯದರ್ಶನ ಸ್ವಲ್ಪಮಟ್ಟಿಗೆ ಅಲ್ಪಾಯುಷ್ಯದಲ್ಲಿಯೇ ತಿಳಿಯಬಹುದು. ದುರ್ಬಳಕೆ ಮಾಡಿಕೊಂಡರೆ ಇರುವ ಆರೋಗ್ಯವೂ ನಷ್ಟವಾಗುತ್ತದೆನ್ನುತ್ತಾರೆ.

ಆರೋಗ್ಯವೆ ಭಾಗ್ಯ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಇದು ಇಂದಿನ ಹಾಸ್ಟೆಲ್ ಹುಡುಗ ಹುಡುಗಿಯರಿಗೆ ನಾವೆಲ್ಲ ಹೇಳಬೇಕಾದ ಖಾಸ್ ಬಾತ್

ಸರ್... ಓ ಸರ್...ಕಾಂಬಳೆ ಸರ್  ... ಸರ್ ನಮಸ್ಕಾರ್ರಿ ಆರಾಮ ಅದೀರಿ?? ನಾ ಯಾರ್ ಹೇಳ್ರಿ ಅನ್ನುತ್ತಿದ್ದಂತೆಯೇ ನಿವೃತ್ತಿ ಹೊಂದಿ ಐದಾರು ವರ್ಷ ಆಗಿದ್ದ ಬಿಸಿಎಮ್...
- Advertisement -

More Articles Like This

- Advertisement -
close
error: Content is protected !!
Join WhatsApp Group