ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಭಕ್ತ ಕನಕದಾಸರು -ಸಂಸದ ಈರಣ್ಣ ಕಡಾಡಿ

Must Read

ಮೂಡಲಗಿ: ಭಕ್ತ ಕನಕದಾಸರು ದಾಸ ಸಾಹಿತ್ಯದ ಸುವರ್ಣಯುಗದ ಪ್ರವರ್ತಕರು, ಕನಕದಾಸರು ಯಾವ ಮತಕ್ಕೂ ಅಂಟಿಕೊಳ್ಳದೇ ಸಕಲ ಜೀವಾತ್ಮರೂ ಒಂದೇ ಎಂದು ಸಾರಿದ ಅವರು ಆಧ್ಯಾತ್ಮಿಕ ತತ್ವಗಳನ್ನು ಸರಳವಾಗಿ ಉಪದೇಶಿಸಿ ಸಮಾನತೆ, ಭಕ್ತಿಭಾವ, ಸಮಾಜಮುಖಿ ಅಧ್ಯಾತ್ಮ ಬೋಧನೆಗಳ ಮೂಲಕ ಬದುಕುವ ಮಾರ್ಗವನ್ನು ತಿಳಿಸಿಕೊಟ್ಟ ದಾರ್ಶನಿಕ, ಕವಿ, ದಾಸಶ್ರೇಷ್ಠ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ಸೋಮವಾರ ನ.22 ರಂದು ಕಲ್ಲೋಳಿ ಪಟ್ಟಣದ ಶ್ರೀ ಮಹಾಲಕ್ಷ್ಮೀ ಸೌಹಾರ್ದ ಸಹಕಾರಿಯ ಸಭಾ ಭವನದಲ್ಲಿ ಕನಕದಾಸರ 527 ನೇ ಜಯಂತಿ ಪ್ರಯುಕ್ತ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ, ನಮಿಸಿ ಮಾತನಾಡಿದ ಅವರು ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಕನ್ನಡ ನಾಡಿನ ಹಳ್ಳಿ ಹಳ್ಳಿಗಳಲ್ಲಿ ಜನರ ಮನವನ್ನು ಮುಟ್ಟಿದರು. ಅವರ ಹೃದಯಾಳದಲ್ಲಿ ಭಕ್ತಿಯ ಬೀಜವನ್ನು ನೆಟ್ಟರು. ಕುಲದಿಂದ ಕುರುಬರಾದರೂ ಗುಣದಿಂದ ಜ್ಞಾನಿಗಳಾದರು ಎಂದರು.

ಈ ಸಂದರ್ಭದಲ್ಲಿ ಎಂ. ಆರ್. ಬೋವಿ, ಅಡಿವೆಪ್ಪ ದಳವಾಯಿ, ಶಿವಾನಂದ ಲೋಕನ್ನವರ, ಸಹಕಾರಿಯ ನಿರ್ದೆಶಕರಾದ ಶ್ರೀಶೈಲ ತುಪ್ಪದ, ಮಲ್ಲಿಕಾರ್ಜುನ ಹುಲೆನ್ನವರ, ಸೋಮನಿಂಗ ಹಡಗಿನಾಳ, ಸಿದ್ದಪ್ಪ ಹೆಬ್ಬಾಳ, ತುಕಾರಾಮ ಪಾಲ್ಕಿ, ಪ್ರಭು ಕಡಾಡಿ, ಹಣಮಂತ ಸಂಗಟಿ, ಕೃಷ್ಣಾ ಮುಂಡಿಗನಾಳ, ಈರಣ್ಣ ಮುನ್ನೋಳಿಮಠ, ಮಲ್ಲಪ್ಪ ಹೆಬ್ಬಾಳ, ಪ್ರಧಾನ ವ್ಯವಸ್ಥಾಪಕ ಹಣಮಂತ ಕಲಕುಟ್ರಿ, ಶಾಖಾ ವ್ಯವಸ್ಥಾಪಕ ಪರಪ್ಪ ಗಿರೆಣ್ಣವರ ಸೇರಿದಂತೆ ಆಡಳಿತ ಮಂಡಳಿ ಸದಸ್ಯರು, ಸಹಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group