ಮುನವಳ್ಳಿಃ “ಕನಕದಾಸರು ನೀಡಿದ ಕೀರ್ತನೆಗಳ ಮೂಲಕ ಜೀವನ ಮೌಲ್ಯಗಳು ಸದಾಕಾಲ ಪ್ರಸ್ತುತ. ಕುಲ ಕುಲ ಕುಲವೆಂದು ಹೊಡೆದಾಡದಿರಿ ಎಂಬ ಕೀರ್ತನೆಯನ್ನು ನಾವು ಇಂದಿಗೂ ಕೂಡ ಅದರಲ್ಲಿನ ಮೌಲ್ಯವನ್ನು ಮರೆಯುವಂತಿಲ್ಲ. ಜೊತೆಗೆ ಅವರು ದೈವಭಕ್ತಿಯ ಮೂಲಕ ನಮಗೆ ಬದುಕಿನಲ್ಲಿ ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ತೋರಿಸಿಕೊಟ್ಟವರು.ಇಂತಹ ದಾರ್ಶನಿಕರ ಸಂದೇಶಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.” ಎಂದು ಸರಕಾರಿ ಪ್ರೌಢಶಾಲೆ ಸಿಂದೋಗಿಯ ಮುಖ್ಯೋಪಾಧ್ಯಾಯರಾದ ಬಿ.ಪಿ.ಅಂಗಡಿ ಕರೆ ನೀಡಿದರು.
ಅವರು ಸಿಂದೋಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನಕ ಜಯಂತಿ ಅಂಗವಾಗಿ ಅಧ್ಯಕ್ಷೀಯ ನುಡಿಗಳನ್ನು ಹೇಳಿದರು. ಕನಕ ಜಯಂತಿಯ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿಕಲಚೇತನ ಶಿಕ್ಷಣ ಸಂಪನ್ಮೂಲ ಶಿಕ್ಷಕ ವೈ.ಬಿ.ಕಡಕೋಳ ಮಾತನಾಡಿ “ ಕನಕದಾಸರು ಭಕ್ತಿಯ ಶಕ್ತಿಯನ್ನು ತೋರಿಸಿಕೊಟ್ಟವರು.ಸಮಾಜದ ಹಲವು ದೋಷ ಲೋಪಗಳನ್ನು ನಿವಾರಿಸಿ ಮಾನವೀಯತೆಗೆ ಮಹಾಬೆಳಕು ಹರಿಸಿದ ದಾರ್ಶನಿಕರು.ಅವರ ಕೀರ್ತನೆಗಳಲ್ಲಿನ ಮೌಲ್ಯಗಳನ್ನು ನಾವು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು”ಎಂದು ಅವರ ಬದುಕಿನ ಮೌಲ್ಯಗಳನ್ನು ಕುರಿತು ತಿಳಿಸಿದರು.
ಕನ್ನಡ ವಿಷಯದ ಉಪಾಧ್ಯಾಯರಾದ ವೈ.ಕೆ.ನೆಲಗುಡ್ಡಿ “ಕನಕದಾಸರ ಜೀವನ.ಮತ್ತು ಮೌಲ್ಯಗಳ”ಕುರಿತು ಮಾತನಾಡಿದರು. ವಿದ್ಯಾರ್ಥಿನಿ ಅಪ್ಪೋಜಿ ಕನಕದಾಸರ ಜೀವನ ಕುರಿತು ಭಾಷಣ ಮಾಡಿದಳು. ಇದೇ ಸಂದರ್ಭದಲ್ಲಿ ಕ್ಯಾಮನ್ನವರ ಎಂಬ ವಿದ್ಯಾರ್ಥಿ ರಚಿಸಿದ ಕನಕದಾಸರ ಚಿತ್ರವನ್ನು ಮುಖ್ಯೋಪಾಧ್ಯಾಯರಾದ ಬಸವರಾಜ ಅಂಗಡಿ ಅನಾವರಣಗೊಳಿಸಿದರು.ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರಾದ ಎನ್.ಎಂ.ವಾಶಪ್ಪನವರ,ಎಸ್.ಎ.ಕಮತಿ,
ಎಸ್.ಎಂ.ಕೇಸರಿ,ವೈ.ಬಿ.ನೆಲಗುಡ್ಡ,ಬಿ.ಸಿ.ನೆಲಮಾಳಿಗೆ,ವ್ಹಿ.ಬಿ.ದೇವರಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯರಿಂದ ಕನಕದಾಸರ ಕೀರ್ತನೆ ಜರುಗಿತು.ಆರಂಭದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ವೈ.ಕೆ.ನೆಲಗುಡ್ಡ ಸ್ವಾಗತಿಸಿದರು. ವ್ಹಿ.ಬಿ.ದೇವರಡ್ಡಿ ನಿರೂಪಿಸಿದರು. ಬಿ.ಸಿ.ನೆಲಮಾಳಿಗೆ ವಂದಿಸಿದರು.