ದೇವುಡು ಕಥಾಲೋಕ ಗ್ರಂಥ ಲೋಕಾರ್ಪಣೆ ಡಾ.ಕೆ ಜಿ ಲಕ್ಷ್ಮಿ ನಾರಾಯಣಪ್ಪ ಅಭಿನಂದನೆ

Must Read
     ಸ್ವಪ್ನ ಬುಕ್ ಹೌಸ್ ಪ್ರಕಟಪಡಿಸಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ ಮಲ್ಲೇಪುರಂ ಜಿ ವೆಂಕಟೇಶ ಸಂಪಾದಿಸಿರುವ ‘ದೇವುಡು ಕಥಾಲೋಕ’ ಗ್ರಂಥ ಲೋಕಾರ್ಪಣೆ ಮತ್ತು ಅಮೆರಿಕೆಯ ಗೋಲ್ಡನ್ ಗೇಟ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದ ಡಾ ಕೆಜಿ ಲಕ್ಷ್ಮಿ ನಾರಾಯಣಪ್ಪ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು  ಜೆಸಿ ರಸ್ತೆ ಕನ್ನಡ ಭವನದ ನಯನ ಸಭಾಂಗಣದಲ್ಲಿ ಉದಯ ಪ್ರಕಾಶನ ದ ವತಿಯಿಂದ ಆಯೋಜಿಸಲಾಗಿತ್ತು.

ತುಮಕೂರು ವಿಶ್ವವಿದ್ಯಾಲಯ ವಿಶ್ರಾಂತಿ ಕುಲಪತಿ ಪ್ರೊವೈಎಸ್ ಸಿದ್ದೇಗೌಡ ಗ್ರಂಥ ಲೋಕಾರ್ಪಣೆ ಮತ್ತು ಅಭಿನಂದನೆಯನ್ನು ನಡೆಸಿಕೊಟ್ಟರು. ಹಿರಿಯ ವಿದ್ವಾಂಸ ಮತ್ತು ಸಂಸ್ಕೃತಿ ಚಿಂತಕ ಪ್ರೊ. ಕೆ. ಈ ರಾಧಾಕೃಷ್ಣ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟನಾ ವಿಭಾಗದ ಸಂಚಾಲಕ ಡಾ ಎನ್ ಎಸ್ ಶ್ರೀಧರ ಮೂರ್ತಿ ಗ್ರಂಥ ಕುರಿತು ಮಾತನಾಡಿದರು.

   ಅಮೆರಿಕೆಯ ಗೋಲ್ಡನ್ ಗೇಟ್ ಸ್ಯಾನ್ ಫ್ಯಾನ್ಸಿ ಸ್ಕೊ ವಿಶ್ವವಿದ್ಯಾಲಯದವರು ಹಿರಿಯ ಸಾಹಿತಿ ಮತ್ತು ಸಂಶೋಧಕ ಡಾ ಕೆ ಜಿ ಲಕ್ಷ್ಮಿನಾರಾಯಣಪ್ಪ ರವರು  ಹಿಸ್ಟರಿ ಅಂಡ್ ಕಲ್ಚರ್ ಆಫ್ ಟ್ರಡಿಷನಲ್ ವೀವರ್ಸ್ ಆಫ್ ಸೌತ್ ಇಂಡಿಯಾ ವಿಷಯದ ಕುರಿತು ಸಲ್ಲಿಸಿದ ಪ್ರೌಢ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಪದ್ಮಶಾಲಿ ಜನಾಂಗದ ಇತಿಹಾಸ ಸಂಸ್ಕೃತಿ ದರ್ಶನದ ಕುರಿತು ಆಳವಾದ ಅಧ್ಯಯನ ನಡೆಸಿರುವ ಶ್ರೀಯುತರು ವೃತ್ತಿ ಯಿಂದ ಕೇಂದ್ರ ಸುಂಕ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಪ್ರವೃತ್ತಿಯಲ್ಲಿ ಸಂಶೋಧಕರಾಗಿ ಅನೇಕ ಕೃತಿಗಳನ್ನು ರಚಿಸಿರುವ ಸಾಹಿತ್ಯಾಸಕ್ತರು, ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕ್ರಿಯಾಶೀಲರು ಎಂದು ಅಭಿಪ್ರಾಯ ಪಟ್ಟರು.

    ನಾಡಿನ ಸಾಮಾಜಿಕ, ಶೈಕ್ಷಣಿಕ,ಸಾಂಸ್ಕೃತಿಕ ಲೋಕದ ಅನೇಕ ಗಣ್ಯರು ವಿಶೇಷ ಆಹ್ವಾನಿತರಾಗಿ, ಕಾರ್ಯಕ್ರಮದ ಆಯೋಜಕರಾದ ಸ್ವಪ್ನ ಬುಕ್ ಹೌಸ್ ವ್ಯವಸ್ಥಾಪಕ ದೊಡ್ಡೇಗೌಡ ಮತ್ತು ಉದಯ ಪ್ರಕಾಶನದ ಪ್ರಕಾಶಕಿ ಎಂ.ಡಿ ಶೈಲಜಾ ಉಪಿಸ್ಥಿತ ರಿದ್ದರು.

Latest News

ಜೀವದಾತ ರಕ್ತದಾನವೇ ಮಹಾದಾನ: ಫಾ.ಡಾ.ಅಗಸ್ಟೀನ್ ಜಾರ್ಜ್

ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರ“ಪ್ರಪಂಚದಲ್ಲಿ ಜೀವಜೀವಗಳನ್ನು ಉಳಿಸುವ ರಕ್ತದ ಪಾತ್ರವು ಮಹತ್ತರವಾದುದು. ಜೀವದಾತ ರಕ್ತದಾನವು ಮಹಾದಾನವಾಗಿದೆ” ಎಂದು ಎಂದು ಕ್ರಿಸ್ತು ಜಯಂತಿ ವಿಶ್ವವಿದ್ಯಾಲಯದ...

More Articles Like This

error: Content is protected !!
Join WhatsApp Group