spot_img
spot_img

ಮಕ್ಕಳು ಭವಿಷ್ಯದ ಬುನಾದಿಗಳು – ಪ್ರಾ. ಎ. ಆರ್. ಹೆಗ್ಗನದೊಡ್ಡಿ

Must Read

spot_img
- Advertisement -

ಸಿಂದಗಿ: ಭಾರತ ದೇಶದ ಭವಿಷ್ಯ ರೂಪಿಸುವವರು ಯುವ ಜನತೆ, ಯುವ ಜನತೆಯ ಭವಿಷ್ಯ ರೂಪಿಸುವವರು ಶಾಲಾ ಕೊಠಡಿಯಲ್ಲಿ ಶಿಕ್ಷಕರು.. ವಿದ್ಯಾರ್ಥಿಗಳು ಸ್ವ -ಹಿತಾಸಕ್ತಿಯಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಎಚ್. ಜಿ. ಪ. ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಎ. ಆರ್. ಹೆಗ್ಗನದೊಡ್ಡಿ ಹೇಳಿದರು.

ತಾಲೂಕಿನ ಕನ್ನೊಳ್ಳಿ ಗ್ರಾಮದಲ್ಲಿ  ಶ್ರೀ ಲಕ್ಷ್ಮಿ ವಿದ್ಯಾವರ್ಧಕ ಸಂಸ್ಥೆಯ ಪ್ರೌಢ ಶಾಲೆ ಹಾಗೂ ಶ್ರೀ ಡಿ. ಎಸ್. ಪಾಟೀಲ್ ಪ. ಪೂ. ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್. ಎಸ್. ಎಲ್. ಸಿ. ಹಾಗೂ ದ್ವಿತೀಯ ಪಿ. ಯು. ಸಿ ವಿದ್ಯಾರ್ಥಿಗಳಿಗೆ ಶುಭ ಕೋರುವ ಸಮಾರಂಭದಲ್ಲಿ ಮಾತನಾಡಿ, ತಂದೆ- ತಾಯಿಯ ಕನಸು, ಶಿಕ್ಷಕರ ಮಾರ್ಗದರ್ಶನ ಮೈಗೂಡಿಸಿಕೊಂಡು ಮುನ್ನುಗ್ಗಿ ಬೆಟ್ಟದಂಥ ಕಷ್ಟ, ಮೇಣದಬತ್ತಿಯಂತೆ ಕರಗಿ ಹೋಗುತ್ತದೆ.. ನಿಮ್ಮ ಜೀವನದ ಯಶಸ್ಸು ತಾನಾಗಿಯೇ ಒದಗಿ ಬರುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಕುರಿ ಕಾಯುವ ಕುರಿಗಾಹಿ ತೇನಸಿಂಗ್ ಮೌಂಟ್ ಎವರೆಸ್ಟ್ ಶಿಖರವನ್ನು ಮೊದಲ ಬಾರಿಗೆ ಏರಿ ಸಾಧನೆಗೈದ ಸಾಧನೆಯನ್ನು ಇಲ್ಲಿ ಸ್ಮರಿಸಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಪ್ರತಿಭೆ ಎನ್ನುವುದು ಬಡವನ ಗುಡಿಸಲಿನಲ್ಲಿ ಹುಟ್ಟಿದರೂ ಅರಮನೆಯಲ್ಲಿ ಬದುಕು ಕಟ್ಟಿಕೊಳ್ಳಬೇಕು ಎನ್ನುವುದು ಎಲ್ಲರ ಮಹದಾಶೆಯಾಗಬೇಕು. ಪ್ರತಿ ವ್ಯಕ್ತಿ ತನ್ನ ಭವಿಷ್ಯದ ಶಿಲ್ಪಿ ತಾನೇ ಆಗಬೇಕು ಎಂದು ಮಾರ್ಗದರ್ಶನ ನೀಡಿ ಶುಭ ಕೋರಿ ಶಾಲಾ ಆಡಳಿತ ಮಂಡಳಿಯ ಪರವಾಗಿ ಸನ್ಮಾನ ಸ್ವೀಕರಿಸಿದರು.

- Advertisement -

ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಬಲಭೀಮ ಹೀರೊಳ್ಳಿ, ಸದಸ್ಯರಾದ ಸಿದ್ದಯ್ಯ ಸ್ಥಾವರಮಠ ಡಿ. ಎಸ್. ಪಾಟೀಲ್ ಪ. ಪೂ. ಮಹಾವಿದ್ಯಾಲಯ
ಐ. ಡಿ. ಪಡಶೆಟ್ಟಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ರಮೇಶ ಬಿರಾದಾರ, ರಾಜಶೇಖರ್ ಕೊಲ್ಲೂರ್, ಕಾಲೇಜ್ ವಿದ್ಯಾರ್ಥಿ ಪ್ರತಿನಿಧಿ ಕುಮಾರಿ ವರ್ಷಾ ನಂದ್ಯಾಳ, ಹೈಸ್ಕೂಲ್ ಪ್ರತಿನಿಧಿ ಲಕ್ಷ್ಮಿ ಚೌದರಿ, ವೇದಿಕೆ ಮೇಲೆ ಉಪಸ್ಥಿತರಿದ್ದರು.

ಇದೆ ಸಂದರ್ಭದಲ್ಲಿ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಸತ್ಕರಿಸಲಾಯಿತು.
ಶಾಲಾ – ಕಾಲೇಜಿನ ಸಿಬ್ಬಂದಿ ವರ್ಗ ಮಂದಾಳತ್ವ ವಹಿಸಿಕೊಂಡಿದ್ದರು, ಉಪನ್ಯಾಸಕರಾದ ಮಂಜುನಾಥ ಬಡಿಗೇರ ನಿರೂಪಿಸಿ ವಂದಿಸಿದರು

- Advertisement -
- Advertisement -

Latest News

ಅಗತ್ಯ ದಾಖಲಾತಿಗಳನ್ನು ನೀಡಿ ಇ- ಆಸ್ತಿ ದಾಖಲಿಸಿಕೊಳ್ಳಿ-ತುಕಾರಾಮ ಮಾದರ

ಮೂಡಲಗಿ - ಪಟ್ಟಣದ ಪುರಸಭೆ ವ್ಯಾಪ್ತಿಯೊಳಗೆ ಬರುವ ಎಲ್ಲಾ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆಯನ್ನು ೨೦೨೪-೨೫ ನೇ ಸಾಲಿನ ಅಂತ್ಯದವರೆಗೆ ಪೂರ್ಣ ಪ್ರಮಾಣದಲ್ಲಿ ಪಾವತಿಸಿಕೊಂಡು...
- Advertisement -

More Articles Like This

- Advertisement -
close
error: Content is protected !!
Join WhatsApp Group