ಶ್ರೀ ಗುರು ಘಂಟಾಕರ್ಣ ಶಿವಯೋಗಿಗಳ 17 ನೇ ಜಾತ್ರಾ ಮಹೋತ್ಸವದ ನಿಮಿತ್ತ ಧರ್ಮ ಸಭೆ

0
515

ಸಿಂದಗಿ: ಸಮ ಸಮಾಜದ ನಿರ್ಮಾಣಕ್ಕಾಗಿ ಮಕ್ಕಳಲ್ಲಿ ಭಾವೈಕ್ಯತೆ ಬೆಳೆಸಬೇಕು ಎಂದು ಚಿಗರಳ್ಳಿಯ ಸಿದ್ಧಬಸವ ಕಬೀರ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಮುರಡಿ ಗ್ರಾಮದ ಶ್ರೀ ಗುರು ಘಂಟಾಕರ್ಣ ಶಿವಯೋಗಿಗಳ 17 ನೆಯ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಧರ್ಮ ಸಭೆಯ ಸಾನ್ನಿಧ್ಯವಹಿಸಿ ಅವರು ಮಾತನಾಡಿ, ದೇವರು ಮತ್ತು ಧರ್ಮ ಬೇರೆ ಆದರೂ ಸತ್ಯ ಒಂದೇ ಎಂಬ ತತ್ವದ ಅಡಿಯಲ್ಲಿ ಮಹಾತ್ಮ ಸಂತ ಶಿಶುನಾಳ ಶರೀಫರು ಸಮಾಜದಲ್ಲಿ ಭಾವೈಕ್ಯತೆಯನ್ನು ತರಲು ತತ್ವ ಪದಗಳ ಮೂಲಕ ಕಳೆದ ನಾಲ್ಕು ದಶಕಗಳಿಂದ ನಾಡಿನಾದ್ಯಂತ ಸಾಹಿತ್ಯ ವಾಚನ, ಪ್ರವಚನ, ಭಜನೆ ಮತ್ತು ಸಮಾಜಸೇವೆಯ ಮುಖಾಂತರ ಸರ್ವಮಹಾತ್ಮರ ಸಾಹಿತ್ಯವನ್ನು ಬಳಸಿ ಭಾವೈಕ್ಯತೆ ಸಂದೇಶವನ್ನು ತಮ್ಮ ನೂರಾರು ಕಾರ್ಯ ಕ್ರಮಗಳ ಮೂಲಕ ಹಿಂದು-ಮುಸ್ಲಿಂರಲ್ಲಿ ಭಾವೈಕ್ಯತೆ ಬೆಸೆಯುವ ಪವಿತ್ರ ಕಾಯಕದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡಿದ್ದರು.

ಜೀವನದುದ್ದಕ್ಕೂ ಭಾವೈಕ್ಯತೆಯ ಸಂದೇಶವನ್ನು ಸಾರುತ್ತ ಪ್ರತಿನಿತ್ಯ ಜೀವನದಲ್ಲಿ ನಡೆಯುವ ಘಟನೆಗಳು ಮಾನವರಿಗೆ ತಮ್ಮ ಜೀವದಲ್ಲಿ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯಲ್ಲಿ ಒಂದು ಸನ್ನಿವೇಶಕ್ಕೆ ಹೋಲಿಸಿ ಅವರು ಸಂತ ಶಿಶುನಾಳ ಶರೀಫ ಶಿವಯೋಗಿಗಳು ತತ್ವ ಪದಗಳ ಹಾಡಿನ ಮೂಲಕ ಅವರು ಶಿಸ್ತು ಬದ್ಧತೆ, ಪ್ರಾಮಾಣಿಕತೆ ಜೊತೆಗೆ ಸಹ ಬಾಳ್ವೆ ಮೂಲಕ ಗುರು ಹಿರಿಯರ ತೋರಿರುವ ಪರಂಪರೆಯ ತತ್ವಗಳನ್ನು ಜೀವನದಲ್ಲಿ ಪಾಲಿಸಬೇಕು ಎಂದರು.

ಕಡಕೋಳ ಶ್ರೀ ಮಠದ ಷ .ಬ್ರ .ಡಾ. ರುದ್ರಮುನಿ ಶಿವಾಚಾರ್ಯರು ಕಾರ್ಯಕ್ರಮದ ಪಾವನ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡುತ್ತ, ಸಂತ ಶಿಶುನಾಳ ಶರೀಫರ ತತ್ವಗಳನ್ನು ಅನುಷ್ಠಾನಕ್ಕೆ ತಂದರೆ ಜಗತ್ತಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಎಂಬುದನ್ನು ನಾವು ಅರಿತುಕೊಳ್ಳಬೇಕು.

ಅನುಯಾಯಿಗಳಿಗೆಲ್ಲರಿಗೂ ಆದರೆ ದುರ್ಬಲ ಮನಸ್ಸಿನವರಿಂದ ತತ್ವಾದರ್ಶಗಳ ಸಂಪತ್ತು ನೀಡಿದರೆ ಅಂತಹವರಿಗೆ ಸಂಸ್ಕಾರ ಎಂಬ ಸಂಪತ್ತು ನೀಡಿದಲ್ಲಿ ಅದರ ಸದುಪಯೋಗವಾಗುತ್ತದೆ, ಇಂತಹ ಸಂಸ್ಕಾರವನ್ನು ಪ್ರತಿಯೊಬ್ಬ ಮನುಷ್ಯ ಶ್ರದ್ಧೆ ನಿಷ್ಠೆಯಿಂದ ಜೀವನವನ್ನು ಸಾಗಿಸಬೇಕು.

ಮುರಡಿ ಮಠದಲ್ಲಿ ನಡೆಯುವ ಶ್ರೀಗುರು ಘಂಟಾಕರ್ಣ ಶಿವಯೋಗಿಗಳ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿ ತಾವು ಭಕ್ತಿಯಿಂದ ಜಾತ್ರೆಯು ಆಚರಣೆ ಮಾಡುವ ಮೂಲಕ ದಾನ ಧರ್ಮ ಪರೋಪಕಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಾನವೀಯ ಮೌಲ್ಯಗಳ ತಳದಿಯ ಮೇಲೆ ಸುಂದರ ಬದುಕು ಕಟ್ಟಿಕೊಂಡು ಸಾತ್ವಿಕ ಜೀವನ ನಡೆಸಬೇಕು ಎಂದರು.

ಬಸವಕಲ್ಯಾಣದ ಪ್ರವಚನಕಾರರಾದ ಮಾತೋಶ್ರೀ ನಾಗಮಣಿ ಅಮ್ಮನವರು ಸಂತ ಶಿಶುನಾಳ ಶರೀಫರ ಶಿವಯೋಗಿಗಳ ಪುರಾಣ ಪ್ರವಚನಕಾರರಾಗಿ ಮಾತನಾಡಿ, ಶರಣರ ಸಂತರ ಶಿವಯೋಗಿಗಳ ತತ್ವ ಆದರ್ಶಗಳನ್ನು ಜೀವನದಲ್ಲಿ ರೂಡಿಸಿಕೊಂಡು ಕುಟುಂಬದಲ್ಲಿ ಹೊಂದಾಣಿಕೆಯಿಂದ ಜೀವನ ನಡೆಸಬೇಕು. ಜೀವನದಲ್ಲಿ ನಡೆಯುವ ಘಟನೆಗಳು ಮಾನವರರಿಗೆ ತಮ್ಮ ಜೀವದಲ್ಲಿ ಮಾಡುವ ತಪ್ಪುಗಳನ್ನು, ಯೋಚಿಸುವ ರೀತಿಯನ್ನು ಯಾವುದೋ ಒಂದು ಸನ್ನಿವೇಶಕ್ಕೆ ಹೋಲಿಸಿ ಅವರು ಸಂತ ಶಿಶುನಾಳ ಶರೀಫರು ತತ್ವ ಪದಗಳು ಹಾಡಿನ ಮೂಲಕ ಅವರು ವಿವರಿಸುತ್ತಿದ್ದರು.

ಜಾತಿಯಲ್ಲಿ ಮುಸ್ಲಿಮರಾಗಿದ್ದರೂ ಅವರ ಗುರುಗಳು ಬ್ರಾಹ್ಮಣ ಸಮಾಜದ ಗೋವಿಂದ ಭಟ್ಟರು ಆಗಿದ್ದರು. ಅವರ ಗುರು-ಶಿಷ್ಯ ಸಂಬಂಧ ಉತ್ತರ ಕರ್ನಾಟಕದಲ್ಲಿ ಅವರ ವಿಚಾರಧಾರೆಗಳು ಮನೆಮಾತಾಗಿದ್ದವು.ಅವರ ತತ್ವಪದಗಳ ಕೊನೆಯಲ್ಲಿ ಸಾಮಾನ್ಯವಾಗಿ ಶಿಶುನಾಳಧೀಶ ಹಾಗೂ ಗುರು ಗೋವಿಂದರ ಉಲ್ಲೇಖವಿರುತ್ತದೆ. ನವಲಗುಂದದ ನಾಗಲಿಂಗ ಸ್ವಾಮಿಗಳು ಅವರ ತತ್ವ ಆದರ್ಶ ಜೀವನದಲ್ಲಿ ಅಳವಡಿಸಿ ಕಂಡು ಸಮಾಜದಲ್ಲಿ ಒಂದಾಗಿ ಬಾಳಬೇಕು ಎಂದರು.

ಕಾರ್ಯಕ್ರಮದಲ್ಲಿ ದೂರದರ್ಶನ ಕಲಾವಿದರಾದ ಸಂಗೀತ ಶಿಕ್ಷಕ ಬಸವರಾಜ ಭಂಟನೂರ ಸಂಗೀತ ಸೇವೆ ನೆರವೇರಿಸಿದರು.

ಚಂದ್ರಕಾಂತ ಹೂಗಾರ ಅವರು ತಬಲ ನುಡಿಸಿದರು.

ಈ ಕಾರ್ಯಕ್ರಮದ ಸಭೆಯ ಅಧ್ಯಕ್ಷ ಸ್ಥಾನವನ್ನು ನಿವೃತ ಶಿಕ್ಷಕ ಹಿರಿಯ ಸಾಹಿತಿ ಸಿದ್ರಾಮಯ್ಯ ಹಿರೇಮಠ ವಹಿಸಿದರು.

ಸಿಂದಗಿ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಘಟಕದ ನಿಕಟ ಪೂರ್ವ ಗೌರವ ಕಾರ್ಯದರ್ಶಿ ಶಿಕ್ಷಕ ಸಾಹಿತಿ ಬಸವರಾಜ ಅಗಸರ,ಶಿಕ್ಷಕ ಸಂಗೀತಗಾರ ಶಿವು ಹಡಗಲಿ,ಜಾನಪದ ಕಲಾವಿದ ಬಸವರಾಜ ವಿಶ್ವಕರ್ಮ ವೇದಿಕೆ ಮೇಲೆ ಇದ್ದರು. ಹಣಮಂತ್ರಾಯಗೌಡ ಪಾಟೀಲ, ಕೇಸುರಾಯ ಹಚ್ಚಡ,.ನಿಂಗಣ್ಣ ಜೇವರ್ಗಿ,ಮಾದೇವಪ್ಪ ಸಾಲೋಟಗಿ, ಎಸ್ ಎನ್ ಶಿತನೂರ,ಶಣ್ಮುಖಪ್ಪ ಪೂಜಾರಿ, ಗಣ್ಯ ಮಾನ್ಯರು ಮತ್ತು ಮುರಡಿ ಶ್ರೀ ಗುರುಗಳು ಸಕಲ ಸದ್ಭಕ್ತರು ಭಾಗವಹಿಸಿದ್ದರು.

ಶಿಕ್ಷಕ ಸಾಹಿತಿ ಶ್ರೀಶೈಲಗೌಡ ಹದಗಲ್ ಸ್ವಾಗತಿಸಿದರು.
ನಿಂಗಣ್ಣ ಜಂಬರಕಾಣಿ ನಿರೂಪಿಸಿದರು. ಸೂರ್ಯಕಾಂತ ಸಾಲೋಟಗಿ ವಂದಿಸಿದರು.

ವರದಿ: ಪಂಡಿತ್ ಯಂಪೂರೆ, ಸಿಂದಗಿ