Kittur Rani Chennamma Information in Kannada-ವೀರ ಮಹಿಳೆ ಚೆನ್ನಮ್ಮರಾಣಿ

Must Read

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...

ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ಮುಖಂಡರ ಮತಯಾಚನೆ

ಸಿಂದಗಿ: ವಿಜಯಪುರ-ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಯ ಅಭ್ಯರ್ಥಿ ಸುನಿಲಗೌಡ ಪಾಟೀಲ್ ಅವರ ಪರವಾಗಿ ಕಾಂಗ್ರೆಸ್ ನಾಯಕರು ಯರಗಲ್, ಗಬಸಾವಳಗಿ, ಮೋರಟಗಿ, ಬಗಲೂರ ಗ್ರಾಮ...

ರಾಜಕೀಯ ದ್ವೇಷ; ಮಾಜಿ ಪಟ್ಟಣ ಪಂಚಾಯಿತಿಯ ಸದಸ್ಯನ ಭೀಕರ ಹತ್ಯೆ

ಸಿಂದಗಿ: ನೂತನ ತಾಲೂಕು ಆಲಮೇಲ ಪಟ್ಟಣದ ಗಣೇಶ ನಗರದಲ್ಲಿರುವ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹತ್ತಿರ ರಾತ್ರಿ 1.30 ಗಂಟೆಯ ಸುಮಾರಿಗೆ ಮಾಜಿ ಪಟ್ಟಣ ಪಂಚಾಯತಿ...

ಕರ್ನಾಟಕವು ವೀರ ಮಹಿಳೆ ಹಾಗೂ ವೀರ ಯೋಧರಿಗೆ ಜನ್ಮ ಕೊಟ್ಟು ಅವರ ರೋಮಾಂಚನ ಕೃತಿಗಳಿಂದ ಹೆಸರು ವಾಸಿಯಾಗಿದೆ. ಅಂಥವರಲ್ಲಿ ಜನ್ಮ ಭೂಮಿಯ ರಕ್ಷಣೆಗಾಗಿ ಪ್ರಾಣವನ್ನೇ ಮುಡಿಪಾಗಿಟ್ಟು ತನ್ನ ಮತ್ತು ತನ್ನ ನಾಡಿನ ಕೀರ್ತಿಯನ್ನು ಅಮರವಾಗಿರಿಸಿದ ವೀರ ಮಹಿಳೆ ಕಿತ್ತೂರ ಚೆನ್ನಮ್ಮಳೂ ಒಬ್ಬಳು.

ವೀರ ವೀರಪ್ಪ ಕಿತ್ತೂರ ದೊರೆ ಮಲ್ಲಸರ್ಜನ ತಂದೆ 1749 ರಿಂದ 1782 ರವರೆಗೆ 33 ವರ್ಷ ಕಿತ್ತೂರು ಸಂಸ್ಥಾನದ ಅಧಿಪತಿಯಾಗಿದ್ದನು ಶೌರ್ಯ ಸಾಹಸಗಳಿಗೆ ಖ್ಯಾತಿ ಪಡೆದಿದ್ದನು. ಇವರ ಮರಣ ನಂತರ ದೊರೆ ಮಲ್ಲಸರ್ಜ ಕ್ರಿ.ಶ. 1782ರಿಂದ 1816 ರ ವರೆಗೆ ರಾಜ್ಯವಾಳಿದರು.

ಇವನು ವೀರಪ್ಪ ದೇಸಾಯಿಯ ಮಗನು ಇವನ ಆಳ್ವಿಕೆಯು ಬಹು ಭಾಗವೆಲ್ಲ ಕಾಳಗಗಳನ್ನು ಮಾಡುವುದರಲ್ಲಿ ಕಳೆದಿದೆ. ಪೇಶ್ವೆಯೂ ಮಲ್ಲಸರ್ಜನ ಸಾಹಸವನ್ನು ಕಂಡು ಪ್ರತಾಪರಾವ ಎಂಬ ಬಿರುದನ್ನು ಕೊಟ್ಟನು. 1816 ರಲ್ಲಿ ಮಲ್ಲಸರ್ಜ ಮರಣ ಹೊಂದಿದನು.

ಅವನ ಮಗ ಶಿವಲಿಂಗ ರುದ್ರಸರ್ಜನು ದೊರೆ ಮಲ್ಲಸರ್ಜನ ಅಧಿಪತಿಯಾದನು ಇವನು ಲಿಂಗಪೂಜಾ ನಿಷ್ಠನಾಗಿದ್ದನು. ಇವನು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯವನ್ನು ಗಳಿಸಿದ್ದನು ಶಿವಲಿಂಗರುದ್ರ ಸರ್ಜನ ಹೆಂಡತಿ ವೀರಮ್ಮ ರಾಣಿಯು ಹೈದರಾಬಾದದ ಸಮೀಪ ಶಮಶೇದಾಬಾದದ ಸಣ್ಣ ಸಂಸ್ಥಾನಿಕರ ಮಗಳು.

ಈಗಿನ ಕನ್ನಡ ನಾಡಿನ ಗಡಿ ಭಾಗದ ಜಿಲ್ಲೆಯ ಬೆಳಗಾವಿ ಬೈಲಹೊಂಗಲ (ಸಂಪಗಾಂವ) ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಉತ್ತರದ ಬೆಳಗಾವಿಯಿಂದ 45 ಕಿ.ಮೀ ಗೆ ಧಾರವಾಡದ ದಾರಿಯ ಮಧ್ಯದಲ್ಲಿ ಬರುವ ಕಿತ್ತೂರು ವೀರ ವನಿತೆ ಕಿತ್ತೂರ ಚೆನ್ನಮಾಜಿಯ ಸಂಸ್ಥಾನ ನೋಡಲು ಸಿಗುತ್ತದೆ.

ಮಲ್ಲಸರ್ಜನಿಗೆ ರುದ್ರಮ್ಮ, ಚೆನ್ನಮ್ಮ ಹೀಗೆ ಇಬ್ಬರು ರಾಣಿಯರಿದ್ದರ. ಹಿರಿಯ ರಾಣಿ ರುದ್ರಮ್ಮ ತಲ್ಲೂರ ದೇಸಾಯಿಯವರ ಮಗಳು ಇವರ ವಂಶದವರು ಶೂರರು ಸಾಹಸಿಯಾಗಿ ಹೆಸರು ಪಡೆದಿದ್ದಾರೆ. ಇವಳು ಸಹ ಕತ್ತಿವರಸೆ ಹಾಗೂ ಯುದ್ದ ಕಲೆಗಳಲ್ಲಿ ನಿಪುಣಳಾಗಿದ್ದಳು. ಪರ್ಶಿಯನ್ ಹಾಗೂ ಉರ್ದು ಭಾಷೆಗಳನ್ನು ಬಲ್ಲವಳಾಗಿದ್ದಳು. ಹಾಗೂ ಗುಣವತಿಯಾಗಿದ್ದಳು ಎಲ್ಲ ರೀತಿಯಿಂದಲೂ ಪ್ರೀತಿ ಸ್ನೇಹಗಳಿಂದ ತವರು ಮನೆಯಾದ ತಲ್ಲೂರಿಗೂ ಹಾಗೂ ಕಿತ್ತೂರ ಮಹಾರಾಣಿಯಾಗಿ ಗೌರವ ತರುವಂತಹ ಕಾರ್ಯಗಳನ್ನು ರುದ್ರಮ್ಮ ಮಾಡಿದಳು.

ಕಿರಿಯ ರಾಣಿ ಚೆನ್ನಮ್ಮ ಕಾಕತಿಯ ದೇಸಾಯಿ ತಂದೆ ಧೂಳಪ್ಪ ಗೌಡ ತಾಯಿ ಪದ್ಮಾವತಿಯವರ ಮಗಳು 1778 ರಲ್ಲಿ ಜನಿಸಿದಳು. ಚೆನ್ನಮ್ಮ ಪ್ರಕೃತಿಯ ಎಲ್ಲ ಸೌಂದರ್ಯ ಸೊಬಗನ್ನು ತನ್ನೊಟ್ಟಿಗೆ ಪಡೆದುಕೊಂಡೆ ಜನಿಸಿದಳು. ಸೌಂದರ್ಯವತಿಯೂ ಸಾಹಸಿಯಾಗಿಯೇ ಬೆಳೆದವಳು ರಾಜನೀತಿಯ ಜೊತೆಗೆ ಬಿಲ್ಲುವಿದ್ಯೆ ಕುದುರೆ ಸವಾರಿ, ಕತ್ತಿವರಸೆ ದಷ್ಟ ಪುಷ್ಟ ದೇಹ ಸಾಮರ್ಥ್ಯ ಹೊಂದಿದವಳಾಗಿದ್ದಳು.

ಇಬ್ಬರು ರಾಣಿಯರು ಪರಸ್ಪರ ರಾಜ್ಯದ ಪ್ರಗತಿಗೆ ಸಹಕರಿಸಿ ಮಲ್ಲಸರ್ಜನ ಬಂಧನವಾದಾಗ ರಾಜ್ಯಭಾರ ಮಾಡಿ ತೋರಿಸಿಕೊಟ್ಟಿದ್ದಾರೆ. ಮಲ್ಲಸರ್ಜ ದೊರೆ ಪ್ರಜಾಹಿತದ ಅನೇಕ ಕಾರ್ಯಗಳನ್ನು ಮಾಡಿ ಜನರ ಪ್ರೀತಿಗೆ ಪಾತ್ರನಾಗಿದ್ದನು. ವಿದ್ವಾಂಸರಿಗೂ ಹಾಗೂ ಕಲೆಗಾರರಿಗೂ ಬಹಳ ಗೌರವ ಕೊಟ್ಟಿದ್ದನು.

ರಾಜ್ಯದ ತುಂಬಾ ಶಾಂತಿ ನೆಲೆಸಿದ್ದು ಪ್ರಜೆಗಳು ಕಿತ್ತೂರಿನಲ್ಲಿ ಸುಖದಿಂದ ಜೀವನ ಸಾಗಿಸುತ್ತಿದ್ದರು. ಮಲ್ಲಸರ್ಜನ ನಂತರ ಚೆನ್ನಮ್ಮ ಬುದ್ದಿವಂತಿಕೆಯಿಂದ ಧೈರ್ಯದಿಂದ ರಾಜಕೀಯ ಸೂತ್ರ ವಹಿಸಿಕೊಂಡಳು ಅಲ್ಲದೇ ರುದ್ರಮ್ಮನ ಪುತ್ರನಾದ ಶಿವಲಿಂಗಸರ್ಜನಿಗೆ ಪಟ್ಟಗಟ್ಟಿದಳು ಅವನಾದರೂ ಪ್ರಜಾಪ್ರೇಮಿಯೂ ವೀರನು ಆಗಿದ್ದನು ಆದರೆ ದುರ್ದೈವದಿಂದ ಕೆಲವೇ ದಿನಗಳಲ್ಲಿ ಅವನು ಸ್ವರ್ಗಸ್ಥನಾದನು ಅದಕ್ಕಾಗಿ ಚೆನ್ನಮ್ಮ ತಮ್ಮ ಸಂಬಂಧಿಕರಲೊಬ್ಬ ಮಾಸ್ತಮರಡಿ ಬಾಳಪ್ಪಗೌಡರ ಮಗ ಶಿವಲಿಂಗಪ್ಪನನ್ನು ದತ್ತಕ ತೆಗೆದುಕೊಂಡು ಪಟ್ಟಗಟ್ಟಿದಳು.

ಪಾರತಂತ್ರ್ಯದ ಆಗಿನ ಪರಿಸ್ಥಿತಿಯಲ್ಲಿ ಭಾರತೀಯರು ಬ್ರಿಟಿಷರನ್ನು ಕೇಳದೇ ಏನೂ ಮಾಡುವಂತಿರಲಿಲ್ಲ ಚೆನ್ನಮ್ಮ ದತ್ತಕ ತೆಗೆದುಕೊಂಡ ಈ ಕೃತಿಯು ಧಾರವಾಡದಲ್ಲಿ ಇಂಗ್ಲೀಷರ ಕಲೆಕ್ಟರ ಥ್ಯಾಕರೆಯ ಮನಸ್ಸಿಗೆ ಬರಲಿಲ್ಲ. ಅಲ್ಲದೇ ಸಕಲ ಸಂಪತ್ತಿನಿಂದ ತುಂಬಿದ ಕಿತ್ತೂರನ್ನು ಕಂಪನಿ ಸರಕಾರದಲ್ಲಿ ಕೂಡಿಸಿಕೊಳ್ಳುವ ಆಶೆಯುಳ್ಳವನಾಗಿದ್ದನು.

ಥ್ಯಾಕರೆಯು ದೊಡ್ಡ ಸೈನ್ಯದೊಂದಿಗೆ ಕಿತ್ತೂರ ಮೇಲೆ ಆಕ್ರಮಿಸಿದ ರಾಣಿ ಚೆನ್ನಮ್ಮಾ ಧೈರ್ಯಗೆಡದೆ ರಾಜ್ಯದ ಸ್ವಾತಂತ್ರ್ಯಕ್ಕಾಗಿ ಸ್ವತ: ಹೋರಾಡಲು ಸಿದ್ದಳಾದಳು. 1824 ಅಕ್ಟೋಬರ 23ರಂದು ಮಹಾನವಮಿ ದಿನದಂದು ರಾಣಿ ಚೆನ್ನಮ್ಮಾ ಕಿತ್ತೂರ ವೀರ ಯೋಧರೆ ನಾವು ನಮ್ಮ ಜನ್ಮ ಭೂಮಿಯ ರಕ್ಷಣೆಗಾಗಿ ಪ್ರಾಣ ಇರುವವರೆಗೂ ಹೋರಾಡುವಾ ಆದರೆ ವೈರಿಗಳಿಗೆ ಹೆದರಿ ಪ್ರಾಣ ರಕ್ಷಣೆಗಳಿಗಾಗಿ ಸೋತೆವೆಂದು ಶರಣಾಗತರಾಗುವುದು ಬೇಡ ಎಂದು ಸಿಂಹದಂತೆ ಚೆನ್ನಮ್ಮ ಘರ್ಜನೆ ಮಾಡಿ ಕೈಯಲ್ಲಿ ಖಡ್ಗವನ್ನು ಹಿಡಿದು ತನ್ನ ಸೈನಿಕರಲ್ಲಿ ಉತ್ಸಾಹದ ಬುಗ್ಗೆ ಚಿಮ್ಮುವಂತೆ ಘೋಷಣೆ ಮಾಡಿದಳು.

ಕಿತ್ತೂರಿನ ಸೈನಿಕರು ಚೆನ್ನಮ್ಮನ ಮುಖಂಡತ್ವದಲ್ಲಿ ಜೀವದ ಹಂಗು ತೊರೆದು ಮಾತೃಭೂಮಿಯ ರಕ್ಷಣೆಗಾಗಿ ಥ್ಯಾಕರೆಯೊಂದಿಗೆ ಹೋರಾಡಿದರು. ರಾಣಿ ಚೆನ್ನಮ್ಮ ರಣಚಂಡಿಯಂತೆ ತನ್ನ ಖಡ್ಗದಿಂದ ವೈರಿಗಳ ರುಂಡಗಳನ್ನು ಉರುಳಿಸಿದಳು. ರಾಣಿ ಚೆನ್ನಮ್ಮಾಜಿಯುತ್ತ ಬಂದೂಕಿನ ಗುರಿಯನ್ನಿಟ್ಟು ಕುದುರೆ ಏರಿ ಕುಳಿತಿದ್ದ ಥ್ಯಾಕರೆಯನ್ನು ನೋಡಿದ ಚೆನ್ನಮ್ಮಾಜಿಯ ಬಲಗೈ ಬಂಟ ಅಮಟೂರು ಬಾಳಪ್ಪ ಥ್ಯಾಕರೆಯ ಕುದುರೆಯ ಕಾಲಿಗೆ ಹೊಡೆದಾಗ ಕುದುರೆ ನೆಲಕ್ಕುರುಳಿತು.

ಕುದುರೆ ಮೇಲೆ ಕುಳಿತು ಥ್ಯಾಕರೆ ನೆಲಕ್ಕೆ ಬಿದ್ದನು. ಅವಮಾನಿತನಾದ ಥ್ಯಾಕರೆ ಚೆನ್ನಮ್ಮನತ್ತ ಗುರಿ ಇಡುತ್ತಿದ್ದಂತೆ ಬಾಳಪ್ಪನು ಥ್ಯಾಕರೆಗೆ ಗುಂಡು ಹಾರಿಸಿದಾಗ ಥ್ಯಾಕರೆ ಮರಣ ಹೊಂದಿದನು ಅವನ ಕೆಳಗಿನ ಅಧಿಕಾರಿಗಳಾದ ಮಿಸ್ಟರ ಸ್ಟೀವನವಸ್ ಮತ್ತು ಮಿಸ್ಟರ್ ಇಲಿಯಟ ಎಂಬುವವರನ್ನು ಸೆರೆಹಿಡಿದಳು. ಈ ಸುದ್ದಿಯಿಂದ ಬ್ರಿಟಿಷರ ಸೈನಿಕರ ಜಂಬಾಬಲವೇ ಉಡುಗಿ ದಿಕ್ಕೆಟ್ಟು ಪರಾರಿಯಾದರು.

ಅಂದು ಸನ್ 1824 ಅಕ್ಟೋಬರ 23 ರಂದು ದೀಪ ಬೆಳಗಿಸಿ ವಿಜಯೋತ್ಸವವನ್ನಾಚರಿಸಿದರು. ಚೆನ್ನಮ್ಮ ರಾಣಿಯು ಸನ್ 1824 ರಲ್ಲಿಯೇ ಬ್ರಿಟಿಷರನ್ನು ಹಿಂದೂಸ್ತಾನದಿಂದ ಹೊರಗೆ ಹಾಕಲು ಹೋರಾಡಿದ ಭಾರತದ ಪ್ರಥಮ ಮಹಿಳೆ ಥ್ಯಾಕರೆಯ ಮರಣದ ನಂತರ ಥ್ಯಾಕರೆಯ ಮಕ್ಕಳನ್ನು ಜಕಾತಿ ಬಸಲಿಂಗಪ್ಪನ ಹಿರಿತನದಲ್ಲಿ ಜೋಪಾನ ಮಾಡಿದ್ದು ಸಹ ತಿಳಿದುಬರುತ್ತದೆ.

ಕಿತ್ತೂರಿನ ಮೇಲೆ ವಕ್ರದೃಷ್ಟಿ ಇಟ್ಟುಕೊಂಡು ಇಂಗ್ಲೀಷರು ಎರಡನೆಯ ಸಲ ಸಾಕಷ್ಟು ಮದ್ದು ಗುಂಡುಗಳ ಸಂಗ್ರಹದೊಂದಿಗೆ ಕಿತ್ತೂರಿನ ಮೇಲೆ ಆಕ್ರಮಣ ಮಾಡಿದರು. ಎರಡನೆಯ ಸಲವೂ ಕಿತ್ತೂರಿನ ವೀರ ಯೋಧರು ಜೀವ ಹಂಗು ತೊರೆದು ಹೋರಾಡಿದರು. ಆದರೆ ರಾಷ್ಟ್ರದ್ರೋಹಿಗಳ ಕುತಂತ್ರದಿಂದ ಕಿತ್ತೂರು ಇಂಗ್ಲೀಷರ ಕೈವಶವಾಯಿತು.

ಎರಡನೆಯ ಯುದ್ದದಲ್ಲಿ ತಿಪ್ಪನೆಂಬ ಕರ್ನಲ್ ಡೀಕವ್ ಹಾಗೂ ದಕ್ಷಿಣ ಭಾಗದ ಕಮೀಶನರರಾದ ಚಾಪ್ಲಿನ್ ಸಾಹೇಬನು ಈ ಯುದ್ದದ ಮೇಲ್ಚಿಚಾರಣೆಯ ಅಧಿಕಾರಿಯಾಗಿದ್ದನು.

ಚೆನ್ನಮ್ಮಳನನ್ನು ಬಂಧಿಸಿ ಬೈಲಹೊಂಗಲ ಸೆರೆಮನೆಯಲ್ಲಿ ಇಡಲಾಯಿತು. ಅಲ್ಲಿ ಅವಳು ಪೂಜೆ ಪುನಸ್ಕಾರದಿಂದ ಕೊನೆಗಾಲ ಮುಗಿಸಬೇಕಾಗುವುದು ಹಾಗೂ ಇವಳ ಜೊತೆ ವೀರಮ್ಮ ಜಾನಕಿಬಾಯಿ ಇಬ್ಬರೂ ಸೊಸೆಯಂದಿರನ್ನು ಬೈಲಹೊಂಗಲಕ್ಕೆ ಒಯ್ದರು ಜಾನಕಿಬಾಯಿ ಚೆನ್ನಮ್ಮನ ಸೊಸೆ ಶೇಗುಣಸಿ ಗೌಡರ ಮಗಳು ಚೆನ್ನಮ್ಮ ಜಾನಕಿಬಾಯಿ ಬೈಲಹೊಂಗಲದಲ್ಲಿ ತೀರಿಕೊಂಡರೆ ವೀರಮ್ಮ ಧಾರವಾಡದಲ್ಲಿ ತೀರಿಕೊಂಡಳು.

ನಂತರ ಸಂಗೋಳ್ಳಿ ರಾಯಣ್ಣನನ್ನು ಗಲ್ಲಿಗೇರಿಸಿದ ಸುದ್ದಿ ಕೇಳಿ ಚೆನ್ನಮ್ಮ 5 ವರ್ಷ ಬಂಧಿಯಾಗಿ ಫೆಬ್ರುವರಿ 2, 1829 ರಂದು ಮರಣ ಹೊಂದಿದಳು.

ಕೊನೆಯ ಉಸಿರು ಇರುವವರೆಗೂ ರಾಷ್ಟ್ರಕ್ಕಾಗಿ ಹೋರಾಡಿ ರಾಷ್ಟ್ರಕ್ಕಾಗಿಯೇ ಪ್ರಾಣಕೊಟ್ಟು ವೀರಸ್ವರ್ಗವನ್ನೇರಿದ ವೀರ ಮಹಿಳೆ ಚೆನ್ನಮ್ಮಳ ಹೆಸರು ಅಜರಾಮರವಾಗಿದೆ. ಅವಳ ಹೆಸರನ್ನು ಭಾರತದ ಇತಿಹಾಸದಲ್ಲಿ ಸುವರ್ಣಾಕ್ಷರದಿಂದ ಬರೆದಿಡುವಂತಹದಾಗಿದೆ.


ಎಮ್ ವಾಯ್ ಮೆಣಸಿನಕಾಯಿ

- Advertisement -

1 COMMENT

Comments are closed.

- Advertisement -

Latest News

ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಯೇ ನನ್ನ ಪರಮ ಗುರಿ : ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ

ನಿಪ್ಪಾಣಿಯಲ್ಲಿ ಎಲ್ಲ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ಧೇಶಿಸಿ ಪ್ರಚಾರ ಮಾಡಿದ ಲಖನ್ ನಿಪ್ಪಾಣಿ: ಜಿಲ್ಲೆಯ ಸರ್ವತೋಮುಖ ಏಳ್ಗೆಗಾಗಿ ಹಾಗೂ ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಲು ಪ್ರಥಮ ಪ್ರಾಶಸ್ತ್ಯದ...
- Advertisement -

More Articles Like This

- Advertisement -
close
error: Content is protected !!