ವಿದ್ಯಾರ್ಥಿಗಳ ಜ್ಞಾನದ ಹಸಿವನ್ನು ನೀಗಿಸಿದ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆ : ಆರಗಿ

Must Read

ಮೂಡಲಗಿ:-ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಅಡಿಯಲ್ಲಿ ವಿದ್ಯಾನಿಧಿ, ಶಿಕ್ಷಣದೀಪ, ಜ್ಞಾನವಿಕಾಸ,ಶಾಲೆಗೆ ಬೆಂಚು ಕೊಡಿಸುವ ಯೋಜನೆ, ಸ್ವಾಸ್ಥ್ಯ ಯೋಜನೆ ಸೇರಿದಂತೆ ಬಹಳಷ್ಟು ಯೋಜನೆಗಳು ಸಂಘದ ವತಿಯಿಂದ ಇದ್ದು, ಅವೆಲ್ಲವನ್ನೂ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಸದುಪಯೋಗ ಪಡೆದುಕೊಂಡಿದ್ದೇ ಆದರೆ ಜೀವನ ಸುಂದರವಾಗಿರುತ್ತದೆ ಎಂದು ಮುಖ್ಯೋಪಾಧ್ಯಾಯ ಶಿವಲಿಂಗ ಆರಗಿ ಹೇಳಿದರು.

ಶಿವಾಪೂರ. (ಹ) ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಶ್ರೀ ಕ್ಷೇತ್ರ ಧರ್ಮಸ್ಥಳ ಜ್ಞಾನ ವಿಕಾಸ ಯೋಜನೆಯಡಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಆಂಗ್ಲ ಭಾಷಾ ಟೂಷನ್ ಕ್ಲಾಸ್ ನ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಧರ್ಮಸ್ಥಳ ಸಂಘದ ಮೂಡಲಗಿ ತಾಲೂಕು ಯೋಜನಾಧಿಕಾರಿ ರಾಜು ನಾಯಕ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ಕೊಡುವ ಉದ್ದೇಶದಿಂದ ಶಾಲೆಯಲ್ಲಿ ವಿದ್ಯಾರ್ಥಿಗಳು ಜಾಸ್ತಿ ಇದ್ದು ಶಿಕ್ಷಕರ ಕೊರತೆ ಇದ್ದರೆ ಸಂಘದ ವತಿಯಿಂದ ಉಚಿತವಾಗಿ ಶಿಕ್ಷಕರನ್ನು ನೇಮಿಸಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ ಹಾಗೂ ಪ್ರತಿವರ್ಷ ಮೂಡಲಗಿ ತಾಲ್ಲೂಕಿನಲ್ಲಿ 300 ಕ್ಕೂ ಅಧಿಕ ವೃತ್ತಿಪರ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಸುಜ್ಞಾನನಿಧಿ ಶಿಷ್ಯವೇತನ ನೀಡುತ್ತಿರುವ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಮುರಿಗೆಪ್ಪ ಮಾಲಗಾರ,ಹಾಗೂ ವಿದ್ಯಾರ್ಥಿಗಳು ಶಿಕ್ಷಕರ ಕೊರತೆ ನೀಗಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಸಂಘದ ಮೂಡಲಗಿ ತಾಲೂಕು ರೂರಲ್ ಮೇಲ್ವಿಚಾರಕರಾದ ರೇಣುಕಾ ತಿಳುವಳಿ,ಸೇವಾ ಪ್ರತಿನಿಧಿಗಳಾದ ಕಸ್ತೂರಿ ಸೌದಿ, ಮಾದೇವಿ ಕುಳಬಾಳೆ ,ಶಿಕ್ಷಕರರಾದ ಕೆ.ಎಚ್ ಪಾಟೀಲ,ರೇವಣ್ಣ ಪಾಟೀಲ ಸೇರಿದಂತೆ ಎಲ್ಲ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ನಿರೂಪಣೆಯನ್ನು ಪ್ರಭಾವತಿ ಢವಳೇಶ್ವರ, ವಂದನಾರ್ಪನೆಯನ್ನು ಶ್ರುತಿ ತುಕ್ಕನವರ ಮಾಡಿದರು.

Latest News

ಮುಷ್ಕರದಲ್ಲಿ ಸಂಸದರ ಎದುರೆ ಆತ್ಮಹತ್ಯೆಗೆ ಯತ್ನಸಿದ ರೈತ

ಮೂಡಲಗಿ:-ತಾಲೂಕಿನ ಗುರ್ಲಾಪೂರ ಕ್ರಾಸದಲ್ಲಿ ಗುರುವಾರದಿಂದ ಪ್ರಾರಂಭವಾಗಿದ್ದ ರೈತರ ಪ್ರತಿಭಟನೆ ಸೋಮವಾರ ಐದನೆಯ ದಿನಕ್ಕೆ ಬೃಹತ್ ಹೋರಾಟಕ್ಜೆ ಕಾಲಿಟ್ಟಿದ್ದು ಮುಷ್ಕರ ನಿರತ ರೈತನೊಬ್ಬ ವಿಷ ಸೇವಿಸಿದ ಘಟನೆ...

More Articles Like This

error: Content is protected !!
Join WhatsApp Group