spot_img
spot_img

ಧರ್ಮಸ್ಥಳ ಗ್ರಾಮಭಿವೃದ್ಧಿ ಸಂಸ್ಥೆ ಮಹಿಳೆಯರಿಗೆ ವರ – ಶಾಸಕ ಭೀಮಣ್ಣ ನಾಯ್ಕ

Must Read

- Advertisement -

ಶಿರಸಿ: ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಪಾಲಿಗೆ ವರವಾಗಿದೆ ಎಂದು ಶಿರಸಿ ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ್ ಹೇಳಿದರು.

ಅಂಬೇಡ್ಕರ್ ಭವನದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲ್ಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಹಾಗೂ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಾ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಯಾವುದೇ ಕಳಂಕವಿಲ್ಲದೇ ಸಮಾಜದಲ್ಲಿರುವ ದುರ್ಬಲರಿಗೆ ಶಕ್ತಿ ತುಂಬುವ ಕಾರ್ಯವನ್ನು ನಿರ್ವಹಿಸುತ್ತಿದೆ. ಪೂಜ್ಯ ಹೆಗಡೆ ದಂಪತಿಯವರ ಮುಂದಾಲೋಚನಾ ಶಕ್ತಿ ಜಗ ಮೆಚ್ಚುವಂತಹದ್ದು ದಂಪತಿಗಳಿಗೆ ಶ್ರೀ ಮಂಜುನಾಥ ಸ್ವಾಮಿಯ ಆಶೀರ್ವಾದವಿದೆ. ಗ್ರಾಮಾಭಿವೃದ್ದಿ ಯೋಜನೆಯಿಂದ ರಾಜ್ಯದಲ್ಲಿ ಅನೇಕ ಕುಟುಂಬಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಿವೆ. ಮಹಿಳೆಯರು ಧಾರಾಳವಾಗಿ ವೇದಿಕೆಯಲ್ಲಿ ಮಾತನಾಡುವ ಶಕ್ತಿ, ಧೈರ್ಯವನ್ನು ಗ್ರಾಮಾಭಿವೃದ್ದಿ ಯೋಜನೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜೊತೆಯಲ್ಲಿ ಗ್ರಾಮಾಭಿವೃದ್ದಿ ಯೋಜನೆಯು ಅಭಿವೃದ್ಧಿ ಕಾರ್ಯಗಳಿಗೆ ಕೈಜೋಡಿಸಿ ಸದೃಡ ಸಮಾಜ ನಿರ್ಮಾಣದಲ್ಲಿ ಭಾಗಿಯಾಗಿದೆ. ಪ್ರತಿಯೊಬ್ಬ ಮಹಿಳೆಯು ಕ್ರಿಯಾಶೀಲತೆಯಿಂದ ಹೆಜ್ಜೆಯಿಡುತ್ತಿದ್ದೀರಿ ಮುಂದೆಯೂ ಗ್ರಾಮಾಭಿವೃದ್ದಿ ಯೋಜನೆಯ ಸದವಕಾಶವನ್ನು ಪಡೆದುಕೊಳ್ಳಿ ಎಂದರು.

ಸಹಾಯಕ ಆಯುಕ್ತೆ ಕೆ.ವಿ. ಕಾವ್ಯರಾಣಿ ಮಾತನಾಡಿ, ನಿಮ್ಮ ಕನಸು ನನಸು ಮಾಡುವ ಕಾರ್ಯವನ್ನು ಮಹಿಳಾ ಜ್ಞಾನ ವಿಕಾಸ ಕೇಂದ್ರ ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.

- Advertisement -

ಜಿಲ್ಲಾ ನಿರ್ದೇಶಕ ವಿ.ಬಾಬು ನಾಯ್ಕ್ ಅಧ್ಯಕ್ಷತೆವಹಿಸಿ ಮಾತನಾಡಿ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯು ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿ ಮಾಡಲು ಕೇವಲ ಸಾಲ ಸೌಲಭ್ಯ ನೀಡದೆ, ಸಮಾಜದ ಬಗ್ಗೆ ಕಾಳಜಿಯನ್ನು ಹೊಂದಿ ಕೃಷಿ ತರಬೇತಿ, ಪರಿಕರಗಳ ವಿತರಣೆ, ವಿದ್ಯಾರ್ಥಿ ವೇತನ, ಮದ್ಯವರ್ಜನ ಶಿಬಿರ, ಪರಿಸರ ಕಾಳಜಿ, ಬೀಜ ಬಿತ್ತನೆ, ಬಡವರು ವಾಹನ ಖರೀದಿಸಲು ಸಾಲ ಸೌಲಭ್ಯ, ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಹೀಗೇ ಹತ್ತು ಹಲವು ಜನಪರ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಗ್ರಾಮೀಣ ಪ್ರದೇಶದ ಜನರಿಗೆ
ಸಂಜೀವಿನಿಯಾಗಿದೆ ಎಂದರು.

ವಿಚಾರಗೋಷ್ಠಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶಿರಸಿ ನಿಸರ್ಗ ಮನೆ ಆರೋಗ್ಯ ಕೇಂದ್ರದ ಆಯುರ್ವೇದ ತಜ್ಞ ಡಾ.ವೆಂಕಟರಮಣ ಮಾತನಾಡಿ, ನಾವೆಲ್ಲರೂ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನವನ್ನು ನೀಡಬೇಕು. ಧನಾತ್ಮಕ ಚಿಂತನೆ ಮಾಡುವುದರಿಂದ ಆರೋಗ್ಯ ಕಾಪಾಡಬಹುದಾಗಿದೆ. ಪ್ರತಿನಿತ್ಯ ಹೆಚ್ಚಿನ ನೀರು ಕುಡಿಯಿರಿ. ಯೋಗ, ಪ್ರಾರ್ಥನೆ, ಉಪವಾಸವನ್ನು ಜೀವನ ಪದ್ದತಿಯಲ್ಲಿ ರೂಡಿಸಿಕೊಳ್ಳಿ ಆಗ ಮನಸ್ಸು ಪರಿಶುದ್ಧವಾಗಿ ಆರೋಗ್ಯಯುತ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು.

ಶಿರಸಿ ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯೆ ಸಂಧ್ಯಾ ಕುರ್ಡೇಕರ್ ವೇದಿಕೆಯಲ್ಲಿದ್ದರು.

- Advertisement -

ಈ ಸಂದರ್ಭದಲ್ಲಿ ಸಾಧಕ ಮಹಿಳೆಯರಾದ ಗೌರಿ ನಾಯ್ಕ್, ಚಂದ್ರಕಲಾ ಚಕ್ರಸಾಲಿ, ಶಿವಲೀಲಾ ಕಬ್ಬೂರ ಇವರನ್ನು ಗೌರವಿಸಲಾಯಿತು. ತಾಲೂಕಿನ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಂದ ಮನರಂಜನಾ ಕಾರ್ಯಕ್ರಮಗಳು ನಡೆಯಿತು.

ಕಾರ್ಯಕ್ರಮವನ್ನು ಅರ್ಚನಾ ನಿರೂಪಿಸಿದರು. ಯೋಜನಾಧಿಕಾರಿ ರಾಘವೇಂದ್ರ ನಾಯ್ಕ್ ಸ್ವಾಗತಿಸಿದರು. ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ವರದಿವಾಚಿಸಿ, ವಂದಿಸಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನಗಳು : ಶಶಿಕಾಂತ ಪಟ್ಟಣ

ನೀನು ನಾನು _________________ ನೀನು ನಾನು ನಾನು ನೀನು ದೈವ ಬೆಸೆದ ಜಾಲವು ಹೃದಯ ಭಾಷೆ ಅರಿವ ಮನಕೆ ಪ್ರೀತಿ ಬೆರಸಿದ ಭಾವವು ನೋವು ಮರೆತು ನಗುವ ಕಲೆಗೆ ಕಣ್ಣು ಬೆರೆತ ನೋಟವು ದೂರ ಗುರಿಯ ಹೆಜ್ಜೆ ಪಯಣದಿ ಕೂಡಿ ಹಾಡುವ ರಾಗವು ಕಷ್ಟ ಸುಖಕೆ ದಾರಿ ಹುಡುಕುವ ನಮ್ಮ ಬಾಳ ಬಟ್ಟೆಯು ಯಾರಿರದ ಹಾದಿಯಲಿ _____________________ ನಿನ್ನ ಮುಗುಳು...
- Advertisement -

More Articles Like This

- Advertisement -
close
error: Content is protected !!
Join WhatsApp Group