ಯಾದವಾಡದಲ್ಲಿ ಕಾರ್ತಿಕೋತ್ಸವದ ನಿಮಿತ್ತ ಜ.6 ರಂದು ಶಿರಕೋಳ ಶಿವಾಚಾರ್ಯರಿಂದ ಪ್ರವಚನ

Must Read

ಮೂಡಲಗಿ: ತಾಲೂಕಿನ ಯಾದವಾಡ  ಗ್ರಾಮದ ಪೇಟೆ ಓಣಿಯ ಶ್ರೀ ಹನುಮಾನ ಮಂದಿರದಲ್ಲಿ     ಕಾರ್ತಿಕೋತ್ಸವದ ಅಂಗವಾಗಿ ಜನವರಿ 6 ರಂದು ಬೆಳಿಗ್ಗೆ 11 ಗಂಟೆಗೆ ಆಧ್ಯಾತ್ಮಿಕ ಪ್ರವಚನ ಆಯೋಜಿಸಲಾಗಿದೆ ಎಂದು ಸಂಘಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಧ್ಯಾತ್ಮಿಕ ಪ್ರವಚನವನ್ನು ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಹಿರೇಮಠದ ಪಟ್ಟಾಧ್ಯಕ್ಷರಾದ ಷ.ಬ್ರ. ಗುರುಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಗಳು ನೀಡಲಿದ್ದಾರೆ.

ಶ್ರೀ ಕಾಶಿ ಕ್ಷೇತ್ರದಲ್ಲಿ ಶಾಸ್ತ್ರ, ವೇದಾಧ್ಯಯನ ಮಾಡಿರುವ ಶ್ರೀಗಳು ಧಾರ್ಮಿಕ ಪ್ರವಚನಗಳಲ್ಲಿ ಪ್ರಸಿದ್ದರು. ಯಾದವಾಡ ಪಟ್ಟಣದ ಪ್ರಸಿದ್ದ ಶ್ರೀ ಆಂಜನೇಯ ದೇವರ ಕಾರ್ತಿಕೋತ್ಸವದ ನಿಮಿತ್ತ ಶಿರಕೋಳ ಶಿವಾಚಾರ್ಯರಿಂದ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಪುನೀತರಾಗಬೇಕೆಂದು ಶ್ರೀ ಆಂಜನೇಯ ದೇವಸ್ಥಾನದ ಟ್ರಸ್ಟ್ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

Latest News

ಸೈಡ್ ನೀಡಲಿಲ್ಲ ಎಂಬ ಕಾರಣಕ್ಕೆ ಬಸ್ ಚಾಲಕನನ್ನು ಥಳಿಸಿದ ಬೈಕ್ ಸವಾರ

ಬೀದರ - ಸರ್ಕಾರಿ ಬಸ್ ಚಾಲಕ ಸೈಡ್ ಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಬಸ್ ಚಾಲಕನನ್ನು ಬಸ್ ನಿಂದ ಕೆಳಗೆ ಇಳಿಸಿ ಬೈಕ್ ಸವಾರ ಹಲ್ಲೆ...

More Articles Like This

error: Content is protected !!
Join WhatsApp Group