ಕತ್ತಲಲ್ಲೇ ಕ್ರೀಡಾಳುಗಳಿಗೆ ಪ್ರಶಸ್ತಿ ವಿತರಣೆ !

Must Read

ಬೀದರ – ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಗ್ಗತ್ತಲಲ್ಲೇ ಪ್ರಶಸ್ತಿ ನೀಡಿದ ಘಟನೆ ಜಿಲ್ಲೆಯ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ.

ಜಿಲ್ಲಾ ಮಟ್ಟದ ಕ್ರೀಡಾ ಕೂಟವನ್ನು ನಗರದ ನೆಹರೂ ಕ್ರೀಡಾಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು ಇದೇ ಕ್ರೀಡಾಂಗಣದಲ್ಲಿ ಕ್ರೀಡಾ ಪಟುಗಳಿಗೆ ಪ್ರಶಸ್ತಿ ನೀಡುವ ಕಾರ್ಯಕ್ರಮವಿತ್ತು ಆದರೆ ಪ್ರಶಸ್ತಿಗಳನ್ನು ಕತ್ತಲಲ್ಲೇ ನೀಡಲಾಯಿತು.

ಕನಿಷ್ಠ ವಿದ್ಯುತ್ ಸೌಲಭ್ಯ ಒದಗಿಸಲಾಗದೆ ಕ್ರೀಡಾ ಇಲಾಖೆ ದಿವ್ಯ ನಿರ್ಲಕ್ಷ್ಯ ತಾಳಿ ಕತ್ತಲಲ್ಲೇ ಪ್ರಶಸ್ತಿ ನೀಡಿದ್ದು ಎಲ್ಲ ಕಡೆಯಿಂದ ಟೀಕೆಗೆ ಒಳಗಾಗಿದೆ.

ಕ್ರೀಡಾ ಮತ್ತು ಸಮಾಜ ಕಲ್ಯಾಣ ಸಚಿವರು ನೋಡಲೇಬೇಕಾದ ಸ್ಟೋರಿ ಇದು. ಮಕ್ಕಳಿಗೆ ಕ್ರೀಡಾ ಸ್ಪೂರ್ತಿ ನೀಡುವ ರೀತಿ ಇದೇನಾ ಎಂದ ಕೇಳುವಂತಾಗಿದೆ. ಆದರೂ ಕತ್ತಲಲ್ಲಿಯೇ ಕ್ರೀಡಾಳುಗಳು ಪ್ರಶಸ್ತಿ ಸ್ವೀಕರಿಸಿದರು. ಈ ಅವ್ಯವಸ್ಥೆಗೆ ಜಿಲ್ಲಾಡಳಿತ ಹೊಣೆಯೋ, ಸಮಾಜ ಕಲ್ಯಾಣ ಇಲಾಖೆಯೋ ಅಥವಾ ಕ್ರೀಡಾ ಇಲಾಖೆಯೋ ಎಂದು ಪ್ರಶ್ನಿಸುವಂತಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group