spot_img
spot_img

ರಾಂಪುರ ಗ್ರಾಮ ಪಂಚಾಯತಿಯಲ್ಲಿ ಜನ ಸಂಪರ್ಕ ಸಭೆ

Must Read

- Advertisement -

ಸಿಂದಗಿ: ತಾಲೂಕಿನ ಗಣಿಹಾರ ಗ್ರಾಮದಲ್ಲಿ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ಧಿ ಕೇಂದ್ರ ಸಿಂದಗಿ  ಹಾಗೂ  ಗ್ರಾಮ ಪಂಚಾಯತ್ ರಾಂಪುರ  ಇವರ ಸಂಯುಕ್ತ ಆಶ್ರಯದಲ್ಲಿ ಜನ ಸಂಪರ್ಕ ಸಭೆ ಹಮ್ಮಿಕೊಳ್ಳಲಾಯಿತು.

ಮನ್‍ರೇಗ ಅನುಷ್ಠಾನ ಅಭಿಯಾನದ ಗುಂಪಿನ ಸದಸ್ಯರು ಹಾಗೂ ಸ್ವ ಸಹಾಯ ಸಂಘದ ಸದಸ್ಯರು  ತಮ್ಮ ಹಳ್ಳಿಯಲ್ಲಿ  ಇರುವಂತಹ ಕುಂದು ಕೊರತೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು. ಚರಂಡಿ ವ್ಯವಸ್ಥೆ, ಸಿ ಸಿ ರಸ್ತೆ, ಉದ್ಯೋಗ ಖಾತ್ರಿ ಅಡಿಯಲ್ಲಿ ಜಾಬ್ ಕಾರ್ಡ್ ಹೊಂದಿದ ಪ್ರತಿ ಕುಟುಂಬಕ್ಕೆ 100 ದಿನ ಮಾನವ ಕೂಲಿ ಕೆಲಸ, ಬೀದಿ ದೀಪಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಅಂಗನವಾಡಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ರಾಂಪುರ ತಾಂಡದಲ್ಲಿ 9.15 ಎಕರೆ ಸರಕಾರಿ ಜಾಗದಲ್ಲಿ ಉದ್ಯೋಗ ಖಾತ್ರಿಯಡಿಯಲ್ಲಿ ಮ.ಅ.ಅ ಗುಂಪುಗಳಿಗೆ ಕೆಲಸ ಕೊಟ್ಟು ಸಸಿ  ನೆಡಲು ಅನುಮತಿ ಕೊಡಲು ಮನವಿಯನ್ನು ಸಲ್ಲಿಸಲಾಯಿತು.

ಗ್ರಾಮ ಪಂಚಾಯತಿಯ ಅಧ್ಯಕ್ಷ ನಿಂಗಣ್ಣ ಬಿಸನಾಳ  ಜನ ಸಂಪರ್ಕ  ಸಭೆಯನ್ನು ಉದ್ದೇಶಿಸಿ ಮಾತನಾಡಿ,  ಎಲ್ಲಾ ಸಮಸ್ಯೆಗಳಿಗೆ ಒಂದು ತಿಂಗಳೊಳಗಾಗಿ ಪರಿಹಾರ ನೀಡಲಾಗುವುದು ಆದರೆ ಸಿ.ಸಿ ರಸ್ತೆಗಳನ್ನು ಮಾತ್ರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಉದ್ಯೋಗ ಖಾತ್ರಿಯಡಿಯಲ್ಲಿ ಈಗಾಗಲೇ ಕ್ರಿಯಾ ಯೋಜನೆ ಮಾಡಿ ಮಂಜೂರು ಮಾಡಿಸಲಾಗಿದೆ ಆದ್ದರಿಂದ ಮ.ಅ.ಅ ಗುಂಪುಗಳು ಕೆಲಸ ಕೋರಿ ಅರ್ಜಿಗಳನ್ನು ಸಲ್ಲಿಸಿ ಕೆಲಸ ಪಡೆದುಕೊಳ್ಳಬಹುದು ಎಂದರು.

- Advertisement -

ಗ್ರಾಮ ಪಂಚಾಯತಿಯ ಗ್ರೆಡ್ 1 ಕಾರ್ಯದರ್ಶಿ ಬಸವರಾಜ ಪಟ್ಟಣಶೆಟ್ಟಿ ಮಾತನಾಡಿ ಉದ್ಯೋಗ ಖಾತ್ರಿ ಕೆಲಸಕ್ಕೆ 17 ಲಕ್ಷ ರೂ ಮಂಜೂರು ಮಾಡಲಾಗಿದೆ  ಎಂದು ಹೇಳಿ, 100 ದಿನ ಮಾನವ ಕೂಲಿ ಕೆಲಸ ಕೊಡುವದಾಗಿ ಭರವಸೆ ನೀಡಿದರು

ಸಭೆಯಲ್ಲಿ ಸಂಗಮ ಸಂಸ್ಥೆ ಕಾರ್ಯಕರ್ತರಾದ ಮಲಕಪ್ಪ ಎಸ್ ಹಲಗಿ  ನಿರೂಪಣೆ ಮಾಡಿದರು  ತೇಜಸ್ವಿನಿ ರಮೇಶ ಹಳ್ಳದಕೇರಿ ಸ್ವಾಗತಿಸಿದರು ಹಾಗೂ  ಶ್ರೀದರ ಕಡಕೂಳ  ವಂದಿಸಿದರು. ಸಂಗಮ ಸಂಸ್ಥೆಯ ಬ್ರದರ್ ನೋಯಲ್,  ಗಣಿಹಾರ, ಗಣಿಹಾರ ತಾಂಡ, ರಾಂಪುರ ಮತ್ತು ರಾಂಪುರ ತಾಂಡದ ಮ.ಅ.ಅ ಗುಂಪಿನ ಸದಸ್ಯರು ಹಾಗೂ ಸ್ವ ಸಹಾಯ ಸಂಘದ  ಸದಸ್ಯರು  ಹಾಜರಿದ್ದರು.

- Advertisement -
- Advertisement -

Latest News

ಸ್ವಾಮಿ ವಿವೇಕಾನಂದರ ಬೆಳಗಾವಿ ಭೇಟಿಯ ಸ್ಮಾರಕ ಭವನ

ಬೆಳಗಾವಿ- ಭಾರತದ ಶೂರ ಸನ್ಯಾಸಿ ಸ್ವಾಮಿ ವಿವೇಕಾನಂದ ಅವರು ಸನ್ ೧೮೯೨ ರಲ್ಲಿ ಕರ್ನಾಟಕದ ಬೆಳಗಾವಿಗೆ ಭೇಟಿ ಕೊಟ್ಟು ಅಕ್ಟೋಬರ್ ೧೬ ರಿಂದ ೨೭ ರ...
- Advertisement -

More Articles Like This

- Advertisement -
close
error: Content is protected !!
Join WhatsApp Group