ಸವದತ್ತಿ: ಲೂಸಿ ಸಾಲ್ಡಾನಾ 85ನೆ ಯ ದತ್ತಿ ನಿಧಿ ಚೆಕ್ ನ್ನು ಯರಗಟ್ಟಿ ಮಾದರಿ ಶಾಲೆಯ ಪ್ರಧಾನ ಗುರುಗಳಾದ ಶಿವಾನಂದ ಮಿಕಲಿಯವರಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಎ. ಎನ್. ಕಂಬೋಗಿ ವಿತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಇಒ ಎ ಎನ್ ಕಂಬೋಗಿ,”ಲೂಸಿ ಸಾಲ್ಡಾನ ಒಬ್ಬ ಶ್ರೇಷ್ಠ ಶಿಕ್ಷಕಿ ನಿವೃತ್ತಿಯಾಗಿ ಹನ್ನೆರಡು ವರ್ಷಗಳಾಗಿದ್ದರೂ ಕೂಡ ತನ್ನ ಪಿಂಚಣಿಯಲ್ಲಿ ಪ್ರತಿ ತಿಂಗಳು ಹಣ ಉಳಿಸಿ ಸರ್ಕಾರಿ ಶಾಲೆಗಳ ಮಕ್ಕಳ ಕಲಿಕೆಗೆ ಆಸರೆಯಾಗಲಿ ಎಂದು ದತ್ತಿ ನೀಡುತ್ತಿರುವುದು ಅತ್ಯಂತ ಶ್ರೇಷ್ಠ ಕಾಯಕವಾಗಿದೆ, ಲೂಸಿ ತಾಯಿ ಧಾರವಾಡದಲ್ಲಿ ವಾಸವಾಗಿದ್ದಾರೆ, ಅವರು ಸರಕಾರಿ ಶಾಲೆಯ ಮಕ್ಕಳ ಶೈಕ್ಷಣಿಕ ಚಟುವಟಿಕೆ ಗಳಿಗಾಗಿ ಸದುದ್ದೇಶದಿಂದ ಇಂದು ಯರಗಟ್ಟಿಯ ಸರ್ಕಾರಿ ಮಾದರಿ ಶಾಲೆಗೆ ದತ್ತಿ ನೀಡಿರುವುದು ನನಗೆ ತುಂಬಾ ಖುಷಿ ತಂದಿದೆ” ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ. ಬಿ. ಬಳಿಗಾರ.ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸವದತ್ತಿ ತಾಲೂಕು ಘಟಕದ ಅಧ್ಯಕ್ಷ ರಾದ ಎಚ್. ಆರ್. ಪೆಟ್ಲೂರ್.ಶಿಕ್ಷಣ ಸಂಯೋಜಕರಾದ ಎಂ. ಡಿ. ಹುದ್ದಾರ,ಗುರುನಾಥ ಕರಾಳೆ, ಬಿ.ಐ.ಇ.ಆರ್.ಟಿ. ವೈ.ಬಿ.ಕಡಕೋಳ ಉಪಸ್ಥಿತರಿದ್ದರು.