spot_img
spot_img

ಬಿಜೆಪಿ ರೈತ ಮೋರ್ಚಾದಿಂದ ಉಚಿತ ಆಯುಷ್ಮಾನ್ ಹಾಗೂ ಇ-ಶ್ರಮ ಕಾರ್ಡ ವಿತರಣೆ

Must Read

spot_img
- Advertisement -

ಮೂಡಲಗಿ : ಕೇಂದ್ರದ ಭಾಜಪಾ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲೊಂದಾದ ಆಯುಷ್ಮಾನ್ ಕಾರ್ಡ ಯೋಜನೆ ಬಡ ಹಾಗೂ ಸಾಮಾನ್ಯ ವರ್ಗದ ಜನರಿಗೆ ಆಪತ್ಭಾಂಧವನಂತೆ ಸಹಕಾರಿಯಾಗಿದೆ ಎಂದು ಗೋವಿಂದ ಕೊಪ್ಪದ ಅಭಿಪ್ರಾಯ ಪಟ್ಟರು.

ಗುರುವಾರದಂದು ತಾಲೂಕಿನ ಕುಲಗೋಡ ಗ್ರಾಮದ ಶ್ರೀ ಬಲಭೀಮ ದೇವಸ್ಥಾನದಲ್ಲಿ , ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ, ಬಿಜೆಪಿ ಅರಭಾವಿ ಮಂಡಲ ರೈತ ಮೋರ್ಚಾ ವತಿಯಿಂದ  ಹಮ್ಮಿಕೊಳ್ಳಲಾಗಿದ್ದ, ಅಮೃತ ಸರೋವರ ಸ್ವಚ್ಛತೆ, ಫಲಾನುಭವಿಗಳಿಗೆ ಆಯುಷ್ಮಾನ್ ಹಾಗೂ ಇ- ಶ್ರಮ ಕಾರ್ಡಗಳನ್ನು ಉಚಿತವಾಗಿ ಮಾಡಿಕೊಡುವ ಕಾರ್ಯಕ್ರಮದ ಉದ್ಘಾಟಕರಾಗಿ ಭಾಗವಹಿಸಿ ಮಾತನಾಡಿದ ಅವರು, ಆಯುಷ್ಮಾನ ಕಾರ್ಡ್ ಹೊಂದಿದ ಬಡ ಜನರು ಕೂಡ ದುಬಾರಿ ವೈದ್ಯಕೀಯ ಚಿಕಿತ್ಸೆಯನ್ನು, ಅತ್ಯಂತ  ಕಡಿಮೆ ವೆಚ್ಚದಲ್ಲಿ ಪಡೆದು ಗುಣಮುಖರಾಗಬಹುದು ಎಂದರು.

ಬಿಜೆಪಿ ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಮಾತನಾಡಿ, ನಮ್ಮ ಅರಭಾವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಮಾರ್ಗದರ್ಶನದಲ್ಲಿ ಸೇವಾ ಪಾಕ್ಷಿಕ ಅಭಿಯಾನದಡಿ ಫಲಾನುಭವಿಗಳಿಗೆ  ಆಯುಷ್ಮಾನ ಕಾರ್ಡ ಜೊತೆಗೆ ಕಾರ್ಮಿಕರಿಗೆ ಇ-ಶ್ರಮ ಕಾರ್ಡಗಳನ್ನು ಕೂಡ ಉಚಿತವಾಗಿ ಮಾಡಿ ಕೊಡಲಾಗುತ್ತಿದೆ ಗ್ರಾಮಸ್ಥರು ಇದರ ಪ್ರಯೋಜನ ಪಡೆಯಬೇಕು ಎಂದರು.

- Advertisement -

ಕಾರ್ಯಕ್ರಮದಲ್ಲಿ ನೂರಾರು ಜನ ಫಲಾನುಭವಿಗಳು ಉಚಿತವಾಗಿ ಆಯುಷ್ಮಾನ ಹಾಗೂ ಇ-ಶ್ರಮ ಕಾರ್ಡಗಳನ್ನು ಮಾಡಿಸಿಕೊಂಡರು ಜೊತೆಗೆ ಅಮೃತ ಸರೋವರ ಸ್ವಚ್ಛತಾ ಅಭಿಯಾನದಡಿ ಗ್ರಾಮದ ಪುರಾತನ ಬಾವಿಯನ್ನು ಸ್ವಚ್ಛಗೊಳಿಸಿ ಜನರು ಬಳಸಲು ಯೋಗ್ಯ ಮಾಡಲಾಯಿತು.

ಈ ಸಂದರ್ಭದಲ್ಲಿ ಪ್ರಕಾಶ ಮಾದರ, ತಮ್ಮಣ್ಣಾ ದೇವರ, ಬಸನಗೌಡ ಪಾಟೀಲ್, ಸುಭಾಸ ವಂಟಗೋಡಿ, ಶ್ರೀಕಾಂತ ಕೌಜಲಗಿ, ವಿಜಯ ಜಡ್ಲಿ, ಬಸವರಾಜ ಯರಗಟ್ಟಿ, ಅಶೋಕ ಶಿವಾಪೂರ, ಬಸವರಾಜ ಗಾಡವಿ, ಕೇದಾರಿ ಭಸ್ಮೆ, ಮಹಾಂತೇಶ್ ಕುಡಚಿ, ರವಿ ಮಹಾಲಿಂಗಪೂರ, ಈರಪ್ಪ ಢವಳೇಶ್ವರ, ಚಂದ್ರಶೇಖರ್ ಪತ್ತಾರ ಸೇರಿದಂತೆ ಬಿಜೆಪಿಯ ಅನೇಕ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಜೀವನದಲ್ಲಿ ಶಿಕ್ಷಣದಂತೆ ಸಂಸ್ಕಾರ ಕೂಡಾ ಅಷ್ಟೇ ಅವಶ್ಯಕವಾಗಿದೆ -ಮುಕುಂದ ಮಹಾರಾಜರು

ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು. ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group