ಮೂಡಲಗಿ – ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾದ ಎಲ್ಲರಿಗೂ ಅಭಿನಂದನೆಗಳು ಹಾಗೂ ಸಾಧಕರಿಗೆ ಶುಭೋದಯ ಸ್ವಾಭಿಮಾನಿ ಸಂಘದ ವತಿಯಿಂದ ಅಭಿನಂದನೆಗಳು ಎಂದು ಶುಭೋದಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಸುಭಾಸ ಕಡಾಡಿ ಹೇಳಿದರು.
ಶುಭೋದಯ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯು ೧೦ ನೇ ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಏರ್ಪಡಿಸಲಾದ ರಂಗೋಲಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಬಗ್ಗೆ ಮಾಹಿತಿ ನೀಡಿದ ಕಡಾಡಿಯವರು, ಈ ಸ್ಪರ್ಧೆಯಲ್ಲಿ ಎರಡು ವಿಭಾಗಗಳನ್ನು ಮಾಡಲಾಗಿತ್ತು. ಚುಕ್ಕೆ ಹಾಗೂ ಚುಕ್ಕೆ ರಹಿತ ರಂಗೋಲಿ ಸ್ಪರ್ಧೆಯಲ್ಲಿ ಒಟ್ಟು ೨೦ ಸ್ಪರ್ಧಾಳುಗಳು ಭಾಗಿಯಾಗಿದ್ದರು.
ಫಲಿತಾಂಶ:
ಚುಕ್ಕೆ ರಂಗೋಲಿಯಲ್ಲಿ ಪ್ರಥಮ ಜ್ಯೋತಿ ಮುಗಳಖೋಡ, ದ್ವಿತೀಯ ಜಯಶ್ರೀ ಬಡಿಗೇರ, ತೃತೀಯ ಮಹಾದೇವಿ ಕಂಬಾರ ಮತ್ತು ಸಮಾಧಾನಕರ ಮಹಾದೇವಿ ಸುಳ್ಳನ್ನವರ ಪಡೆದುಕೊಂಡರು.
ಚುಕ್ಕೆ ರಹಿತ ರಂಗೋಲಿಯಲ್ಲಿ ಪ್ರಥಮ ಬಿ.ಎ.ಬಿರಾದಾರ, ದ್ವಿತೀಯ ಸರಸ್ವತಿ ಕಂಬಾರ, ತೃತೀಯ ಕಾವ್ಯ ಮಿರ್ಜಿ ಹಾಗೂ ಸಮಾಧಾನಕರ ಬಹುಮಾನ ಸಂಗೀತಾ ಹಳ್ಳೂರ ಪಡೆದುಕೊಂಡರು.
ರಾಜ್ಯದಲ್ಲಿಯೇ ಮೊದಲ ಬಾರಿಗೆ “ಸ್ವಾಭಿಮಾನ ಕಲಾವಿದ-೨೦೨೨” ಎಂದು ಒಂಬತ್ತು ಜನ ಕುಂಚ ಕಲಾವಿದರನ್ನು ಹಾಗೂ ಇಬ್ಬರ ಸಾಧಕರನ್ನು ಈ ಸಮಾರಂಭದಲ್ಲಿ ಸತ್ಕರಿಸಲಾಯಿತು. ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಅವರು ಹೇಳಿದರು.
ಬಹುಮಾನ ವಿತರಣಾ ಕಾರ್ಯಕ್ರಮವನ್ನು ಮೂಡಲಗಿಯ ಮಂಜುನಾಥ ಸೈನಿಕ ತರಬೇತಿ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.