Homeಸುದ್ದಿಗಳುಜಿಲ್ಲಾ ಲೇಖಕಿಯರ ಸಂಘದ ವತಿಯಿಂದ 'ದತ್ತಿ ಕಾರ್ಯಕ್ರಮ

ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ ‘ದತ್ತಿ ಕಾರ್ಯಕ್ರಮ

ದಿ 23 ರಂದು ಮ. 3. ಗಂಟೆಗೆ ಬೆಳಗಾವಿ ಜಿಲ್ಲಾ ಲೇಖಕಿಯರ ಸಂಘದ ವತಿಯಿಂದ’ ದಿ. ಸಾವಿತ್ರಿ ಬಾಬುರಾವ ಶಿವಪೂಜಿ ‘ಅವರ ಸ್ಮರಣಾರ್ಥ ‘ದತ್ತಿ ಕಾರ್ಯಕ್ರಮ’ ನಡೆಯಲಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ಹೇಮಾವತಿ ಸೋನೋಳ್ಳಿ ವಹಿಸಲಿದ್ದು ಅತಿಥಿಗಳಾಗಿ ಸಾಹಿತಿ ನೀಲಗಂಗಾ ಚರಂತಿಮಠ, ದೀಪಿಕಾ ಚಾಟೆ ಆಗಮಿಸಲಿದ್ದು ಇದೇ ಸಂದರ್ಭದಲ್ಲಿ ಲೇಖಕಿಯರ ಸಂಘದ ಸದಸ್ಯರಿಂದ ಸ್ವರಚಿತ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಲಿದೆ.

ದತ್ತಿ ದಾನಿಗಳಾದ ಸಂಗೀತಾ ಶಿವಪೂಜಿ, ಪತ್ರಕರ್ತರಾದ ಮುರುಗೇಶ ಶಿವಪೂಜಿ ಸೇರಿದಂತೆ ಸಾಹಿತ್ಯಾಸಕ್ತರು ಸಂಘದ ಸದಸ್ಯೆಯರು ಉಪಸ್ಥಿತರಿರುವರು ಎಂದು ಕಾರ್ಯದರ್ಶಿ ರಾಜನಂದಾ ಘಾರ್ಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group