- ವಿಶ್ವ ಜಲ ದಿನಾಚರಣೆಯಂದು GROHE ನಿಂದ ಪ್ರತಿ ಹನಿಯೂ ಅಮೂಲ್ಯ ಅಭಿಯಾನಕ್ಕೆ ಚಾಲನೆ
- ಖ್ಯಾತ ಜಲತಜ್ಞ ಆಬಿಡ್ ಸುರ್ತಿ ಅವರೊಂದಿಗೆ GROHE ಸಹಭಾಗಿತ್ವ
ಬೆಂಗಳೂರು– ಒಂದು ಹನಿ ನೀರೂ ವ್ಯರ್ಥವಾಗದಂತೆ ಮುತುವರ್ಜಿವಹಿಸಿ, ಮುಂದಿನ ಪೀಳಿಗೆಗೆ ಶುದ್ದ ಜಲ ದೊರೆಯುವುದನ್ನ ಖಾತರಿಪಡಿಸಿಕೊಳ್ಳುವಂತೆ ವಿಶ್ವವಿಖ್ಯಾತ ಜಲ ತಜ್ಞ ಹಾಗೂ ವಾಟರ್ ವಾರಿಯರ್ ಆಬಿಡ್ ಸುರ್ತಿ ಕರೆ ನೀಡಿದ್ದಾರೆ.
ಇಂದು ಬೆಂಗಳೂರಿನಲ್ಲಿ ವಿಶ್ವ ಜಲ ದಿನಾಚರಣೆಯ ಅಂಗವಾಗಿ ವಿಶ್ವದ ಹೆಸರಾಂತ ಬಾತ್ ರೂಂ ಮತ್ತು ಕಿಚನ್ ಫಿಟ್ಟಿಂಗ್ಸ್ ಕಂಪನಿಯಾಗಿರುವ GROHE ನೀರು ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ GROHE ಪ್ರತಿ ಹನಿಯೂ ಅಮೂಲ್ಯ ಎಂಬ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಒನ್ ಮ್ಯಾನ್ ಎನ್‌ಜಿಓ ಆಗಿ ನಾನು ಕಳೆದೊಂದು ದಶಕದಲ್ಲಿ ಸುಮಾರು 20 ದಶಲಕ್ಷ ಲೀಟರ್ ನೀರು ಪೋಲಾಗುವುದನ್ನ ತಪ್ಪಿಸಿದ್ದೇನೆ. ದೇಶದಲ್ಲಿ ಹಸಿರು ಕಟ್ಟಡ ಮಾರ್ಗಸೂಚಿಗಳು, ನೀರು ಮರುಬಳಕೆ, ಮಳೆ ನೀರು ಕೊಯ್ಲು ಮತ್ತು ಇತರೆ ದೊಡ್ಡ ಮಟ್ಟದ ಯೋಜನೆಗಳು ನಡೆಯುತ್ತಿರುವ ಈ ಸಂದರ್ಭದಲ್ಲಿ ನಾಗರಿಕರಾದ ನಾವು ಅನಗತ್ಯವಾಗಿ ನೀರು ವ್ಯರ್ಥವಾಗುವುದನ್ನು ತಡೆಯುವುದಕ್ಕೆ ಏನು ಮಾಡಬೇಕು? ಅಧ್ಯಯನಗಳ ಪ್ರಕಾರ, ಪ್ರತಿ ಸೆಕೆಂಡಿಗೆ ಒಂದು ಹನಿ ನೀರು ಸೋರಿಕೆಯಾದರೆ ವರ್ಷಕ್ಕೆ 7800 ಲೀಟರ್ ಗಿಂತ ಅಧಿಕ ನೀರು ವ್ಯರ್ಥವಾಗುತ್ತದೆ! ವಿಶೇಷವಾಗಿ ದೇಶದಲ್ಲಿ ಹೆಚ್ಚು ಭಾಗಗಳಲ್ಲಿ ನೀರು ಸಮರ್ಪಕವಾಗಿ ದೊರೆಯದೇ ಇರುವ ಸಂದರ್ಭದಲ್ಲಿ ಇದೊಂದು ದೊಡ್ಡ ನಷ್ಟವಾದಂತೆ ಎಂದು ಹೇಳಿದರು.
ಮಿಲಿಯನ್ ಗಟ್ಟಲೆ ಮನೆಗಳಲ್ಲಿ ನೀರು ಸೋರಿಕೆಯಿಂದ ವರ್ಷಕ್ಕೆ ಬಿಲಿಯನ್ ಲೀಟರ್ ಗಟ್ಟಲೆ ನೀರು ವ್ಯರ್ಥವಾಗುತ್ತಿದೆ. ಇದು ಪರಿಹರಿಸಬಹುದಾದ ಸರಳ ಸಮಸ್ಯೆಯಾಗಿದೆ. ಆದಾಗ್ಯೂ, ಅರಿವಿನ ಕೊರತೆಯಿಂದಾಗಿ ಜನರು ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗುತ್ತಿಲ್ಲ ಅಥವಾ ಆಸಕ್ತಿಯನ್ನು ತೋರಿಸುತ್ತಿಲ್ಲ. ನಾವೆಲ್ಲರೂ ಗಮನಹರಿಸಿ ಕ್ರಮ ಕೈಗೊಂಡರೆ ನಾವು ಪ್ರತಿ ವರ್ಷ ಎಷ್ಟು ನೀರನ್ನು ಉಳಿಸಬಹುದು ಎಂಬುದನ್ನು ಊಹಿಸಿ. ಈ ಹಿನ್ನಲೆಯಲ್ಲಿ ಒಂದು ಹನಿಯೂ ವ್ಯರ್ಥವಾಗಿ ಪೋಲಾಗದಂತೆ ತಡೆಗಟ್ಟಲು ಕ್ರಮ ಕೈಗೊಳ್ಳಿ ಎಂದು ಕರೆ ನೀಡಿದರು.
ಜಾಗೃತಿ ಅಭಿಯಾನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಎಲ್ ಡಬ್ಲ್ಯೂಟಿ ಮತ್ತು ಸಬ್ಕಾನ್ (GROHE & American Standard)ನ ನಾಯಕ ಬಾಬಿ ಜೋಸೆಫ್ ಅವರು, GROHE ನಲ್ಲಿ ನೀರು ಅತ್ಯಮೂಲ್ಯ ಸಂಪನ್ಮೂಲ ಎಂಬುದರಲ್ಲಿ ನಂಬಿಕೆ ಇಟ್ಟಿದ್ದೇವೆ. ಇದನ್ನು ನಾವು ಅನುಭವಿಸಬೇಕೇ ಹೊರತು ವ್ಯರ್ಥ ಮಾಡಬಾರದು ಎಂಬುದನ್ನು ನಾವು ಪಾಲಿಸುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಶ್ವ ಜಲ ದಿನದ ಅಂಗವಾಗಿ ನೀರಿನ ವ್ಯರ್ಥದಿಂದ ಆಗುವ ಪರಿಣಾಮಗಳು ಮತ್ತು ಎಲ್ಲೇ ಸೋರಿಕೆಯಾದರೂ ಅದನ್ನು ಸರಿಪಡಿಸಿ ನೀರು ವ್ಯರ್ಥವಾಗುವುದನ್ನು ತಡೆಗಟ್ಟಲು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ನಾವು ನಾಗರಿಕರಲ್ಲಿ ಜಾಗೃತಿ ಮೂಡಿಸಲು ಅಭಿಯಾನವನ್ನು ಆಯೋಜಿಸಿದ್ದೇವೆ. ಈ ಒಂದು ಉತ್ತಮ ಕಾರ್ಯದಲ್ಲಿ ನಮ್ಮೊಂದಿಗೆ ಕೈಜೋಡಿಸುವಂತೆ ಸಮಾಜದ ಎಲ್ಲಾ ನಾಗರಿಕರಿಗೂ ನಾವು ಮನವಿ ಮಾಡುತ್ತಿದ್ದೇವೆ. ಏಕೆಂದರೆ ನೀರನ್ನು ಉಳಿಸುವ ಈ ಮಹತ್ಕಾರ್ಯಕ್ಕೆ ಎಲ್ಲರ ಬೆಂಬಲ ಬೇಕಾಗುತ್ತದೆ. ನಮ್ಮ ಪರಿಸರದ ಭವಿಷ್ಯಕ್ಕಾಗಿ ನಾವು ಈಗಲೇ ಕಾರ್ಯಪ್ರವೃತ್ತರಾಗಿ ಪ್ರತಿ ಹನಿ ನೀರನ್ನು ಉಳಿಸಬೇಕಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಸೇರಿ ಪ್ರತಿಜ್ಞೆ ಮಾಡೋಣ ಎಂದು ಕರೆ ನೀಡಿದರು.
ಈ ಅಭಿಯಾನದ ಮೂಲಕ ನಾವು ಕನಿಷ್ಠ 1 ಲಕ್ಷ ಜನರು ನೀರು ಸೋರಿಕೆ ತಡೆಯಲು ಮತ್ತು ನೀರನ್ನು ಉಳಿಸುವ ಪ್ರತಿಜ್ಞೆ ಮಾಡಲು ಸ್ಫೂರ್ತಿ ತುಂಬುವ ಉದ್ದೇಶವನ್ನು ಹೊಂದಲಾಗಿದೆ. ನಾವು ಈ ಒಂದು ಮಹತ್ವದ ಕಾರ್ಯಕ್ಕೆ ಬದ್ಧತೆಯನ್ನು ತೋರಿದರೆ ಕೇವಲ ಒಂದು ವರ್ಷದಲ್ಲಿ ಮಿಲಿಯನ್ ಗಟ್ಟಲೆ ನೀರನ್ನು ಉಳಿಸಬಹುದಾಗಿದೆ! ದೆಹಲಿ, ಮುಂಬೈ ಮತ್ತು ಬೆಂಗಳೂರಿನಲ್ಲಿ ನೀರು ಸೋರಿಕೆಯನ್ನು ಸರಿಪಡಿಸುವ ಸೊಸೈಟಿಗಳನ್ನು ಆಯ್ಕೆ ಮಾಡಲು ನಾವು ಪ್ಲಂಬರ್ ಗಳ ಬೆಂಬಲವನ್ನು ಪಡೆಯಲಾಗುತ್ತಿದೆ.