spot_img
spot_img

ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ ಕಲ್ಲೋಳಿಯ ಪೂಜಾ ಪ್ರಥಮ

Must Read

- Advertisement -

ಮೂಡಲಗಿ: ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟಗೊಂಡಿದ್ದು, ಮೂಡಲಗಿ ಶೈಕ್ಷಣಿಕ ವಲಯದ 7175 ವಿದ್ಯಾರ್ಥಿಗಳ ಪೈಕಿ 6916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ. 96.39 ಫಲಿತಾಂಶದೊಂದಿಗೆ ಶೈಕ್ಷಣಿಕ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಪ್ರಥಮ ಸ್ಥಾನ ಹಾಗೂ ಎಮ್.ಡಿ.ಆರ್.ಎಸ್ ಕಲ್ಲೋಳ್ಳಿ ವಸತಿ ಶಾಲೆಯ ಪೂಜಾ ಗಂಗನ್ನವರ 622 ಅಂಕಗಳನ್ನು ಪಡೆಯುವ ಮೂಲಕ ಶೈಕ್ಷಣಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೋಮವಾರ ಪ್ರಕಟಗೊಂಡ ಎಸ್.ಎಸ್.ಎಲ್.ಸಿ ಪಲಿತಾಂಶದಲ್ಲಿ ಮೂಡಲಗಿ ಶೈಕ್ಷಣಿಕ ವಲಯವು ಉತ್ತಮ ಫಲಿತಾಂಶವನ್ನು ಹೊಂದುವ ಮೂಲಕ ಸಾಧನೆ ಮಾಡಿದ್ದಾರೆ. ಚಿಕ್ಕೋಡಿ ಜಿಲ್ಲೆಗೆ ವಲಯಕ್ಕೆ ಪ್ರಥಮ ಸ್ಥಾನವನ್ನು ಪೂಜಾ ಗಂಗನ್ನವರ 622 (99.52%), ದ್ವಿತೀಯ ಸ್ಥಾನದಲ್ಲಿ ಚೇತನ ಕುಳ್ಳೂರ 620 (99.2%), ವಿಶ್ವನಾಥ ಜಗ್ಗಿನವರ 620 (99.2%), ಲಕ್ಷ್ಮೀ ಕಂಬಳಿ 620 (99.2%), ತೃತೀಯ ಲಕ್ಷ್ಮೀ ಕುದರಿ 619 (99.04%), ಮೇಘಾ ಮುರಗೋಡ, ನಿರ್ಮಲಾ ಕಂಕಣವಾಡಿ 619 (99.04%), ರೂಪಾ ಹುಲಕುಂದ 619 (99.04%), ಪ್ರವೀಣ ಬಾಯಪ್ಪಗೋಳ 619 (99.04%) ಪಡೆದುಕೊಂಡಿದ್ದಾರೆ.

- Advertisement -

ಶೈಕ್ಷಣಿಕ ವಲಯದಲ್ಲಿ ಎ+ ಶ್ರೇಣಿಯಲ್ಲಿ 1530, ಎ ಶ್ರೇಣಿಯಲ್ಲಿ 2278, ಬಿ+ ಶ್ರೇಣಿಯಲ್ಲಿ 1662, ಬಿ ಶ್ರೇಣಿಯಲ್ಲಿ 968, ಸಿ+ ಶ್ರೇಣಿಯಲ್ಲಿ 437, ಸಿ ಶ್ರೇಣಿಯಲ್ಲಿ 42 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೈಕ್ಷಣಿಕ ವಲಯದ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಗುಣಮಟ್ಟದ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆಂದು  ಬಿಇಒ ಅಜಿತ ಮನ್ನಿಕೇರಿ ತಿಳಿಸಿದ್ದಾರೆ.

- Advertisement -
- Advertisement -

Latest News

ಜಲ ಜೀವನ ಮಿಷನ್ ಅಡಿಯಲ್ಲಿ ಕಲ್ಯಾಣಿ ಪುನಶ್ಚೇತನ

ಮೂಡಲಗಿ: ಜಿಲ್ಲಾ ಪಂಚಾಯತ್ ಬೆಳಗಾವಿ,ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಚಿಕ್ಕೋಡಿ, ತಾಲೂಕು ಪಂಚಾಯತ್ ಮೂಡಲಗಿ, ಗ್ರಾಮ ಪಂಚಾಯತ್ ಯಾದವಾಡ ಹಾಗೂ ಅನುಷ್ಠಾನ ಬೆಂಬಲ...
- Advertisement -

More Articles Like This

- Advertisement -
close
error: Content is protected !!
Join WhatsApp Group