ಸಿಂದಗಿ: ಸರಕಾರದ ಸಹಭಾಗಿತ್ವದಲ್ಲಿ ನಡೆಯುವ ಜಿಲ್ಲಾ ಸಮ್ಮೇಳನವು ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ಹಬ್ಬದ ಸಂಭ್ರಮವಾಗಬೇಕಾದರೆ ಸಂಘ-ಸಂಸ್ಥೆಗಳ, ಕನ್ನಡಪರ ಸಂಘಟನೆಗಳ ಸಹಕಾರ ಅತ್ಯಗತ್ಯವಾಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಹೇಳಿದರು.
ಪಟ್ಟಣದ ಡಾ. ಅಂಬೇಡ್ಕರ ಭವನದ ಆವರಣದಲ್ಲಿ 18ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಮೂರನೇ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಸಮ್ಮೇಳನವು ಮಾರ್ಚ 2ನೇ ವಾರದಲ್ಲಿ 2 ದಿನಗಳ ಕಾಲ ನಡೆಯುವುದರಿಂದ ರಾಜ್ಯ ಹಾಗೂ ಜಿಲ್ಲೆಯ ಎಲ್ಲ ಸಾಹಿತ್ಯಗಳು, ಕವಿಗಳು, ಮಹಿಳಾಗೋಷ್ಠಿಗಳು, ಜನಪದ ಸಾಹಿತ್ಯದ ಗೊಷ್ಠಿಗಳು, ಜಿಲ್ಲೆಯ ಇತಿಹಾಸ ಬಿಂಬಿತ ಗೋಡೆ ಬರಹ, ಸ್ಥಬ್ದ ಚಿತ್ರಗಳು, ಕಲಾ ತಂಡಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ಮತ್ತು ಸರ್ವಾಧ್ಯಕ್ಷರ ಆಯ್ಕೆ ಮಾಡುವಲ್ಲಿ ಜಿಲ್ಲೆಯ ಕಾರ್ಯಕಾರಿಣಿ ಸದಸ್ಯರ ಸಮಕ್ಷಮದಲ್ಲಿ ಚರ್ಚಿಸಿ ತೀರ್ಮಾನ ಕೈಕೊಳ್ಳಲಾಗುವುದು ಎಂದರು.
ನಿಕಟಪೂರ್ವ ಅಧ್ಯಕ್ಷ ಸಿದ್ದಲಿಂಗ ಚೌಧರಿ ಮಾತನಾಡಿ, ಇಲ್ಲಿ ನಡೆಯುವ 18ನೇ ಸಾಹಿತ್ಯ ಸಮ್ಮೇಳನಕ್ಕೆ ಈ ತಾಲೂಕಿನ ಸಾಹಿತಿಗಳನ್ನು ಗುರುತಿಸಿ ಸರ್ವಾಧ್ಯಕ್ಷರ ಆಯ್ಕೆಯಾಗಬೇಕು ಮತ್ತು ಕನ್ನಡ ಭುವನೇಶ್ವರಿಯ ಜಾತ್ರೆಯಲ್ಲಿ ಕಸಾಪ ಸಮಿತಿಯವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿದ್ದಾಗ ಮಾತ್ರ ಸಮ್ಮೇಳನ ಯಶಸ್ವಿಯಾಗುತ್ತದೆ ಎಂದು ತಿಳಿಸಿದರು.
ದಸಂಸ ಜಿಲ್ಲಾಧ್ಯಕ್ಷ ಚಂದ್ರಕಾಂತ ಸಿಂಗೆ ಮಾತನಾಡಿ, ಈ ಹಿಂದೆ ನಡೆದ ಜಿಲ್ಲಾ ಹಾಗೂ ತಾಲೂಕು ಸಮ್ಮೇಳನಗಳಲ್ಲಿ ದಲಿತ ಸಾಹಿತಿಗಳನ್ನು ಗುರುತಿಸಿ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಿಲ್ಲ ಈ ಸಮ್ಮೇಳನದಲ್ಲಿ ದಲಿತ ಸಾಹಿತಿಗಳನ್ನು ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಎಂದು ಆಗ್ರಹಿಸಿದರು.
ಕಸಾಪ ತಾಲೂಕು ಅಧ್ಯಕ್ಷ ರಾಜಶೇಖರ ಕೂಚಬಾಳ, ಶಿಕ್ಷಕ ಎಸ್.ಎಸ್ ಸಾತಿಹಾಳ, ಶಿಕ್ಷಕಿ ಜಯಶ್ರೀ ಕುಲಕರ್ಣಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಸಾಪ ಗೌರಾವಾಧ್ಯಕ್ಷ ಮಹಾಂತೇಶ ಪಟ್ಟಣಶೆಟ್ಟಿ, ರಾಜಕೀಯ ದುರೀಣ ಗೊಲ್ಲಾಳಪ್ಪಗೌಡ ಪಾಟೀಲ, ಗೌರವ ಸಲಹೆಗಾರರಾದ ಅಶೋಕ ಗಾಯಕವಾಡ ವಕೀಲರು, ಸರಕಾರಿ ನೌಕರರ ಸಂಘದ ಅಧ್ಯಕ್ಷ ಅಶೋಕ ತೆಲ್ಲೂರ, ಕಾಂಗ್ರೇಸ ಮಹಿಳಾ ಘಟಕಾಧ್ಯಕ್ಷೆ ಶಾರದಾ ಬೇಟಗೇರಿ, ದಸಂಸ ಉತ್ತರ ವಲಯ ಸಂಚಾಲಕ ಅಶೋಕ ಸುಲ್ಪಿ, ಜಿಲ್ಲಾದ್ಯಕ್ಷ ಚಂದ್ರಕಾಂತ ಸಿಂಗೆ, ಎಂ.ಎ.ಖತೀಬ, ಕಾನಿಪ ಧ್ವನಿ ಸಂಘದ ಅದ್ಯಕ್ಷ ಪಂಡಿತ ಯಂಪೂರೆ, ಕಾನಿಪ ಸಂಘದ ಅಧ್ಯಕ್ಷ ಆನಂದ ಶಾಬಾದಿ ವೇದಿಕೆ ಮೇಲಿದ್ದರು.
ಭೀಮಣ್ಣ ಹೆರೂರ ಸ್ವಾಗತಿಸಿದರು. ಸಾಯಬಣ್ಣ ಪುರದಾಳ ನಿರೂಪಿಸಿ ವಂದಿಸಿದರು.