ಗಡಾದ ಅವರು ಅಧಿಕಾರಿಗಳ ಬ್ಲಾಕ್ ಮೇಲ್ ಮಾಡುತ್ತಾರೆಯೇ?

Must Read

ದಸಂಸ ಜಿಲ್ಲಾಧ್ಯಕ್ಷ ರಮೇಶ ಮಾದರ ಆರೋಪ

ಮೂಡಲಗಿ: ಮಾಹಿತಿ ಹಕ್ಕು ಕಾರ್ಯಕರ್ತ, ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಭೀಮಪ್ಪ ಗಡಾದ ಅವರು ಸರ್ಕಾರಿ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡಿ ಸಂಪಾದನೆ ಮಾಡಿದ್ದಾರೆ. ಎಂದು ದಲಿತ ಸಂಘರ್ಷ ಸಮಿತಿ ಬೆಳಗಾವಿ ಜಿಲ್ಲಾ ಅಧ್ಯಕ್ಷ ರಮೇಶ ಮಾದರ ಗಂಭೀರ ಆರೋಪ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರುವ ವಿಡಿಯೋ ಒಂದನ್ನು ಬಿಡುಗಡೆ ಮಾಡಿರುವ ಅವರು, ಬಾಲಚಂದ್ರ ಜಾರಕಿಹೊಳಿಯವರ ಜೊತೆ ಪಂಚಮಸಾಲಿ, ಲಿಂಗಾಯತ, ದಲಿತ, ಮುಸಲ್ಮಾನ….ಹೀಗೆ ಎಲ್ಲಾ ಸಮುದಾಯದ ಜನರು ಇದ್ದಾರೆ ಆದರೆ ಗಡಾದ ಅವರು ಮಾತನಾಡುವಾಗ ಜಾರಕಿಹೊಳಿಯವರ ಜೊತೆ ಅಕ್ಕಿ ಮಾರುವವರು, ಹಂದಿ ಮಾರುವವರು ಇದ್ದಾರೆ ಎಂದು ಕೀಳಾಗಿ ಮಾತನಾಡಿದ್ದಾರೆ. ಬಾಲಚಂದ್ರ ಜಾರಕಿಹೊಳಿಯವರ ಜೊತೆ ಶೇ. ೮೦ ರಷ್ಟು ಜನರಿದ್ದಾರೆ ಆದರೆ ಗಡಾದ ಅವರ ಜೊತೆ ಇರುವ ಶೇ. ೧೦ ರಷ್ಟು ಜನ ಸತ್ಯ ಹರಿಶ್ಚಂದ್ರರೆಂದು ತಿಳಿದುಕೊಂಡಿರಬೇಕು. ಯಾಕೆಂದರೆ, ಗಡಾದ ಅವರೇ ನೀವು ಮಾಹಿತಿ ಹಕ್ಕಿನ ಹೆಸರಿನಲ್ಲಿ ಅಡ್ಡಾಡುತ್ತೀರಿ. ನಿಮಗೆ ಎಲ್ಲಿಂದ ಇಷ್ಟೊಂದು ದುಡ್ಡು ಬಂದಿದೆ ಎಂಬುದನ್ನು ಹೇಳಬೇಕು ಎಂದರು.

ಗಡಾದ ಅವರು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿರುವುದು ನಮಗೂ ಗೊತ್ತಿದೆ ಅದನ್ನೆಲ್ಲ ನಾವು ಬಹಿರಂಗ ಮಾಡಬೇಕಾಗುತ್ತದೆ ಎಂದು ತಿಳಿಸಿದ ಅವರು, ಎಲ್ಲಾ ಸಮುದಾಯದವರಿಗೆ ಹಂದಿ ಮಾರುವವರು, ಅಕ್ಕಿ ಮಾರುವವರು ಎಂದು ಹೇಳಿ ಅವಮಾನ ಮಾಡಿರುವ ಭೀಮಪ್ಪ ಗಡಾದ ಅವರು ತಕ್ಷಣವೇ ಕ್ಷಮೆ ಕೇಳಬೇಕು ಇಲ್ಲದಿದ್ದರೆ ಅವರು ಹೋದಲ್ಲೆಲ್ಲ ದಲಿತ ಸಂಘರ್ಷ ಸಮಿತಿಯಿಂದ ಕಪ್ಪು ಬಾವುಟ ಪ್ರದರ್ಶನ ಮಾಡಿ ಪ್ರತಿಭಟನೆ ಮಾಡುವುದಾಗಿ ರಮೇಶ ಮಾದರ ಅವರು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರ ವಿರೋಧಿ ಹೋರಾಟ ಮಾಡುವುದಾಗಿ ಮಾಹಿತಿ ಹಕ್ಕಿನ ಅಡಿಯಲ್ಲಿ ಅಡ್ಡಾಡುತ್ತಿರುವ ಭೀಮಪ್ಪ ಗಡಾದ ಅವರು ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂಬುದು ಸ್ಫೋಟಕ ಮಾಹಿತಿ. ಇದು ನಿಜವೇ ಆಗಿದ್ದರೆ ಗಡಾದ ಅವರ ಭ್ರಷ್ಟ ಬೆಂಬಲಿಗನೊಬ್ಬ ಸಂಸ್ಥೆಯ ಹೆಸರಿನಲ್ಲಿ ಮಾಡಿರುವ ಅವ್ಯವಹಾರಕ್ಕೆ ಗಡಾದ ಅವರ ಸಂಪೂರ್ಣ ಬೆಂಬಲ ಇದೆಯೆಂದು ತಿಳಿಯಬೇಕಾಗುತ್ತದೆ.

ಇದಕ್ಕೆ ಗಡಾದ ಅವರು ಸ್ಪಷ್ಟೀಕರಣ ನೀಡಬೇಕು ಎಂದು Times of ಕರ್ನಾಟಕ ಬಯಸುತ್ತದೆ. ಈಗಾಗಲೇ ಈ ವಿಷಯಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದ್ದು ನಾಳೆ ನಡೆಯುವ ಚುನಾವಣೆಯಲ್ಲಿ ಅರಭಾವಿ ಮತದಾರರು ಗಡಾದ ಅವರನ್ನು ಬೆಂಬಲಿಸುತ್ತಾರೋ ಅಥವಾ ಮಾದರ ಅವರು ಹೇಳಿದಂತೆ ಮಾಹಿತಿ ಹಕ್ಕಿನ ಹೆಸರಿನಲ್ಲಿ ಬ್ಲಾಕ್ ಮಾಡುತ್ತಿರುವ ಗಡಾದ ಅವರನ್ನು ತಿರಸ್ಕರಿಸುತ್ತಾರೋ ಎಂಬುದು ಮೇ ೧೩ ರಂದು ತಿಳಿಯುತ್ತದೆ.


ವರದಿ: ಉಮೇಶ ಬೆಳಕೂಡ, ಮೂಡಲಗಿ

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group