- Advertisement -
ಬೀದರ: ಬಿಜೆಪಿ ಪಕ್ಷದಿಂದ ನಮಗೆ ದೋಖಾ ಆಗಿದೆ ಎಂಬುದಾಗಿ ಭಾಲ್ಕಿ ಬಿಜೆಪಿ ಅಭ್ಯರ್ಥಿ ಪ್ರಕಾಶ್ ಖಂಡ್ರೆ ಫೋನ್ ನಲ್ಲಿ ಮಾತನಾಡುತ್ತಿದ್ದ ವಿಡಿಯೋ ಬಹಿರಂಗವಾಗಿದೆ.
ನಮಗೆ ಬಿಜೆಪಿ ಟಿಕೆಟ್ ಬೇಡ ಅಂದರೂ ಕೇಳದೆ ಬಿಜೆಪಿ ಪಕ್ಷ ಟಿಕೆಟ್ ಕೊಟ್ಟಿದೆ ಆದರೆ ಬಿಜೆಪಿ ಪಕ್ಷದ ಮುಖಂಡರು ನಮಗೆ ದೋಖಾ ಮಾಡಿದ್ದಾರೆ ಎಂದು ಖಂಡ್ರೆ ತಮ್ಮ ಆಪ್ತ ಸ್ನೇಹಿತನ ಜೊತೆ ಫೋನ್ ನಲ್ಲಿ ಮಾತಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಚುನಾವಣೆಯ ಫಲಿತಾಂಶ ಇನ್ನೂ ಹೊರಬರಬೇಕಿದ್ದು ಈಗಲೇ ಬಿಜೆಪಿ ಅಭ್ಯರ್ಥಿ ಅಸಮಾಧಾನ ವ್ಯಕ್ತ ಮಾಡಿದ್ದು ಹಲವು ಕುತೂಹಲಗಳಿಗೆ ಎಡೆ ಮಾಡಿಕೊಟ್ಟಿದೆ.
- Advertisement -
ವರದಿ: ನಂದಕುಮಾರ ಕರಂಜೆ, ಬೀದರ