Homeಸುದ್ದಿಗಳುಗಣಿಹಾರ ಶಾಲೆಗೆ ಮಹಿಳಾ ಸಂಘಟನೆಯವರಿಂದ ಗ್ಲಾಸ್ ಕಾಣಿಕೆ

ಗಣಿಹಾರ ಶಾಲೆಗೆ ಮಹಿಳಾ ಸಂಘಟನೆಯವರಿಂದ ಗ್ಲಾಸ್ ಕಾಣಿಕೆ

ಸಿಂದಗಿ: ತಾಲೂಕಿನ  ಗಣಿಹಾರ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಮಹಿಳಾ ಸಂಘಟನೆಯವರು ವಿದ್ಯಾರ್ಥಿಗಳಿಗೆ ಪ್ರತಿ ದಿನವು ಹಾಲು ಕುಡಿಯಲು 300 ಗ್ಲಾಸ್ ಕಾಣಿಕೆ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸಾರ್ವಜನಿಕ  ಶಿಕ್ಷಣ ಇಲಾಖೆ ವಿಜಯಪುರ,  ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಸಿಂದಗಿ ಹಾಗೂ ಗಣಿಹಾರ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡ ಮಹಿಳಾ ಪಾಲಕರ ಸಭೆಯಲ್ಲಿ ಗ್ರಾಮದ ಮಹಿಳಾ ಸಂಘಟನೆಯವರು  3೦೦ ಗ್ಲಾಸ್ ಸಹಾಯ ನೀಡಿದರು.      

ಕಾಣಿಕೆ ಸ್ವೀಕರಿಸಿದ ಶಾಲೆಯ ಮುಖ್ಯಗುರು ಡಿ.ಎಂ.ಮಾವೂರ ಮಾತನಾಡಿ, ಸರಕಾರ ವಿದ್ಯಾರ್ಥಿಗಳಿಗೆ ಹಾಲು ವಿತರಣೆ ಮಾಡುತ್ತಿದೆ ಆದರೆ ವಿದ್ಯಾರ್ಥಿಗಳು ಮನೆಯಿಂದ ಗ್ಲಾಸ್ ಗಳನ್ನು ತರಬೇಕಾದ ಸಂದರ್ಭದಲ್ಲಿ ಮಹಿಳಾ ಸಂಘದ ಸದಸ್ಯರು ನೀಡಿದ  ಗ್ಲಾಸಗಳು ತುಂಬಾ  ಸಹಕಾರಿಯಾಗಿವೆ ಎಂದರು.

ಈ ಕಾರ್ಯ ಮಾದರಿಯಾಗಿದು ಪ್ರತಿ ಪಾಲಕರು ಶಿಕ್ಷಣ ಪ್ರೇಮಿಗಳು ಸದಾ ಇಂತಹ ಕಳಕಳಿ ಕಾರ್ಯದಲ್ಲಿ ತೊಡಗಲಿ 

 ಶಾಲೆ ನಮ್ಮ ಭವಿಷ್ಯ ರೂಪಿಸಿ ಬದುಕು ಕಟ್ಟಿಕೊಟ್ಟಿದೆ ನಮ್ಮ ಮಕ್ಕಳಿಗೆ ಕಲಿತ ಶಾಲೆ ಕಳಿಸಿದ ಗುರುಗಳಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದ್ದು ಅಳಿಲು ಸೇವೆ ಮಾಡುವ ಅವಕಾಶ ನಮ್ಮದಾಗಿದೆ  ಎಂದು ಗ್ರಾಮದ ಮಹಿಳೆಯರು ನಾವು ಹೆಸರಿಗಾಗಿ ನಾವು ಕಾಣಿಕೆ ನೀಡಲಾರೆವು ಮಕ್ಕಳಿಗೆ ಹಾಲು ಕುಡಿಯುವಾಗ ತಾಯಿಯ ರೂಪದಲ್ಲಿ ಕಾಣುತ್ತಾರೆ ಎಂದು ಬಾವಿಸಿ ಶಾಲಾ ಮುಖ್ಯಗುರುಗಳಿಗೆ ತಿಳಿಸಿ ತಮ್ಮ ಹೆಸರು ಬರೆಯ ಬೇಡಾ ಎಂದು ವಿನಂತಿ ಮಾಡಿ ಕೊಂಡಿರುವ ದೊಡ್ಡ ಗುಣ ಎಂದು ಶಾಲಾ ಶಿಕ್ಷಕರು ಅಭಿನಂದಿಸಿದರು.

ಶ್ರೀದೇವಿ ಕೊರಿ, ಶ್ರೀಮತಿ ಎಸ್ ಮುಲ್ಲಾ ಶ್ರೀಮತಿ ರುಬಿನಾ ನದಾಫ,  ಬಾಬಾಪಟೇಲ ಬಿರಾದಾರ ಸೇರಿದಂತೆ ಗ್ರಾಮದ ಅಪಾರ ಮಹಿಳೆಯರು ಪಾಲಕರು ಮತ್ತು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ಗಣಿಹಾರ ಗ್ರಾಮದ ಮಹಿಳೆಯರು ವಿದ್ಯಾರ್ಥಿಗಳಿಗೆ ಹಾಲು ಕುಡಿಯಲು ಗ್ಲಾಸ ಕಾಣಿಕೆ ನೀಡುವದು ಸಂತೋಷದ ವಿಷಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ ಬಿರಾದಾರ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿ ಆಯ್ ಎಸ್ ಟಕ್ಕೆ ಅಭಿನಂದಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group