spot_img
spot_img

ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ ಎ.ಬಿ ಶ್ಯಾಮಾಚಾರ್ ಆಯ್ಕೆ 

Must Read

   ಬರುವ ನವಂಬರ್ 9 ರಿಂದ 11ರವರೆಗೆ ಉಡುಪಿಯಲ್ಲಿ ವಿಜಯದಾಸರ ಆರಾಧನಾ ಅಂಗವಾಗಿ ಪರ್ಯಾಯ ಶ್ರೀ ಪುತ್ತಿಗೆ ಮಠದ ಸಹಯೋಗದಲ್ಲಿ  ನಡೆಯಲಿರುವ ಅಂತಾರಾಷ್ಟ್ರೀಯ ದಾಸ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಮಾಲೋಚನಾ  ಸಭೆಯನ್ನು ಬೆಂಗಳೂರು ಬಸವನಗುಡಿ ಪುತ್ತಿಗೆ  ಮಠ ಗೋವರ್ಧನ ಕ್ಷೇತ್ರದಲ್ಲಿ ಏರ್ಪಡಿಸಲಾಗಿತ್ತು.
 ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ ಬಿ ಗೋಪಾಲ್ ಆಚಾರ್ ರವರು ಉಡುಪಿಯಿಂದ ಆಗಮಿಸಿ ಕಾರ್ಯಕ್ರಮದ ರೂಪರೇಷೆ ಯನ್ನು ವಿವರಿಸುತ್ತಾ ರಾಜಾಂಗಣದಲ್ಲಿ  ಪರಮಪೂಜ್ಯ ಸುಗುಣೇಂದ್ರ ತೀರ್ಥ ಶ್ರೀಪಾದರಿಂದ ಉದ್ಘಾಟನೆ : ಬೇಲಿ ಮಠದ ಪೂಜ್ಯ ಶಿವಾನುಭವ ಶಿವಮೂರ್ತಿ ಮಹಾಸ್ವಾಮಿಗಳಿಂದ ದಿಕ್ಸೂಚಿ ಭಾಷಣ, ದೇಶದ ನಾನಾ ಭಾಗಗಳಿಂದ ಆಗಮಿಸುವ ವಿದ್ವಾಂಸರಿಂದ ವಿಜಯದಾಸರು ವರ್ಣಿಸಿದ ಉಡುಪಿಯ ಶ್ರೀ ಕೃಷ್ಣ ಎಂಬ ವಿಚಾರದ ಕುರಿತು ಪ್ರಬಂಧ ಮಂಡನೆ, ದಾಖಲೆಯ ವಿಜಯದಾಸರ ಕೀರ್ತನೆಗಳ ಸಹಸ್ರ ಕಂಠ ಗಾಯನ, ವೈಭವದ ಶ್ರೀನಿವಾಸ ಕಲ್ಯಾಣ ಮಹೋತ್ಸವವನ್ನು ರಾಜ್ಯದ ನಾನಾ ಭಾಗಗಳಲ್ಲಿರುವ ದಾಸ ಸಾಹಿತ್ಯ ಪ್ರಸರಣೆಯಲ್ಲಿ ತೊಡಗಿರುವ ಸಂಘಟನೆಗಳ ಸಹಯೋಗದಲ್ಲಿ  ಆಯೋಜಿಸಲಾಗಿದೆ ಎಂದು ತಿಳಿಸಿದರು.
 ಇದೇ ಸಂದರ್ಭದಲ್ಲಿ ಹರಿದಾಸ ವಾಹಿನಿ ಮಾಸಪತ್ರಿಕೆ ಸಂಪಾದಕ, ಖ್ಯಾತ ಹರಿದಾಸ ಸಂಶೋಧಕ ಮತ್ತು ದ್ವೈತ ವೇದಾoತ  ರಿಸರ್ಚ್ ಫೌಂಡೇಶನ್ ಗೌರವ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತ ಅನೇಕ ಗ್ರಂಥಗಳನ್ನು ರಚಿಸಿ ವಿದ್ವನ್ಮಾನ್ಯರಾಗಿರುವ ಡಾ. ಎ. ಬಿ. ಶಾಮಾಚಾರ್ಯರವರನ್ನು ಸಮ್ಮೇಳನದ  ಅಧ್ಯಕ್ಷರನ್ನಾಗಿ ಆಯ್ಕೆಯಾಗಿರುವ ವಿಷಯವನ್ನು ಘೋಷಿಸಿ ಅವರನ್ನು ಗೌರವಿಸಲಾಯಿತು.
 ಟಿ ವಾದಿರಾಜ, ಅಧ್ಯಕ್ಷರು, ಶ್ರೀನಿವಾಸ ಉತ್ಸವ ಬಳಗ, ಅಂತಾರಾಷ್ಟ್ರೀಯ ಹರಿದಾಸ ಸಾಹಿತ್ಯ ಸಮ್ಮೇಳನ ಕಾರ್ಯಕಾರಿ ಸಮಿತಿಯ ಕೆ.ಆರ್ ಗುರುರಾಜ ರಾವ್, ಭಾರತೀಯ ಹರಿದಾಸ ಸಾಹಿತ್ಯ ವಿದ್ಯಾಲಯದ ನಿರ್ದೇಶಕ ಡಾ.ಪರಶುರಾಮ ಬೆಟಗೇರಿ,ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಡಾ. ಗುರುರಾಜ ಪೋಶೆಟ್ಟಿಹಳ್ಳಿ,ವಿದುಷಿ ಡಾ ವಾರುಣಿ ಜಯತೀರ್ಥ, ಪತ್ರಕರ್ತ ನ ಶ್ರೀ ಸುಧೀಂದ್ರರಾವ್, ಮೊದಲಾದ ಗಣ್ಯರು  ಉಪಸ್ಥಿತರಿದ್ದರು

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಸಮುದ್ರ ವಿಹಾರ ತಂದಿತು ಜೀವಕ್ಕೆ ಕುತ್ತು; ನೋಡನೋಡುತ್ತಲೇ ಮುಳುಗಿದ ಬೋಟ್

ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ. ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ...
- Advertisement -

More Articles Like This

- Advertisement -
close
error: Content is protected !!
Join WhatsApp Group