ಡಾ. ಕೃಷ್ಣ ಕೊಲಾರ ಕುಲಕರ್ಣಿಯವರಿಗೆ ಸತ್ಕಾರ

0
154

ಬಾಗಲಕೋಟೆ :  ವಿಜಯಪುರದ ಹಿರಿಯ ಸಾಹಿತಿ ಡಾ. ಕೃಷ್ಣ ಕೋಲ್ಹಾರ ಕುಲಕರ್ಣಿ ಅಭಿನಂದನಾ ಗ್ರಂಥ *ಕೃಷ್ಣ ಅಧ್ಯಯನ” ಲೋಕಾರ್ಪಣೆ ಸಮಾರಂಭದಲ್ಲಿ ಭಾಗವಹಿಸಿದ್ದ ವಿಜಯಪುರ ಹಾಗೂ ಬಾಗಲಕೋಟೆ ವಿಧಾನ ಪರಿಷತ್ ಸದಸ್ಯ ಪಿ ಎಚ್ ಪೂಜಾರ ಅವರು ಕುಲಕರ್ಣಿ ಅವರನ್ನು ಅಭಿನಂದಿಸಿ ಸನ್ಮಾನಿಸಿದರು.

ಈ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿ  ಬಸವರಾಜ ಬೊಮ್ಮಾಯಿ, ಪ್ರಸ್ತುತ ರಾಜ್ಯ ಸರ್ಕಾರದ ಸಚಿವರುಗಳಾದ  ಹೆಚ್. ಕೆ. ಪಾಟೀಲ್, ಎಮ್. ಬಿ. ಪಾಟೀಲ್ ಅವರು ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.