spot_img
spot_img

ಸಮಾನತೆಯ ಸಹಕಾರಿ ಸರದಾರ ಮಹಾಬಳೇಶ್ವರ ಶಿವಪ್ಪ ಪುರದಗುಡಿ

Must Read

- Advertisement -

ಸವದತ್ತಿಯಲ್ಲಿ ಪುರದಗುಡಿ ಮನೆತನ ತನ್ನದೇ ಆದ ರಾಜಕೀಯ ಸಾಮಾಜಿಕ ಬದುಕಿನೊಂದಿಗೆ ಇಂದಿಗೂ ಹೆಸರುವಾಸಿಯಾಗಿದೆ. ಆ ಮನೆತನದಲ್ಲಿ ಸಾಮಾಜಿಕ ಬದುಕಿನೊಂದಿಗೆ ಕೃಷಿಕ ಕುಟುಂಬದಿಂದ ಬಂದ ಪುರದಗುಡಿ ಮನೆತನವು ಇಂದು ತಾಲೂಕಿನಲ್ಲಿ ಗುರುತಿಸಿಕೊಂಡ ಒಂದು ಉತ್ತಮ ಕುಟುಂಬವಾಗಿ ಹೊರ ಹೊಮ್ಮಿದೆ. ಈ ಕುಟುಂಬದ ಮಹಾಬಳೇಶ್ವರ ಪುರದಗುಡಿ ಇಂದು ಸಹಕಾರಿ ರಂಗದಲ್ಲಿ ತಮ್ಮದೇ ಆದ ಹೆಸರನ್ನು ಉಳಿಸಿಕೊಂಡು ಜ್ಯೋತಿ ಅರ್ಬನ್ ಕೋ-ಆಪ್ ಸೊಸಾಯಿಟಿ ಮೂಲಕ ಕಾರ್ಯಗೈಯುತ್ತಿರುವರು.

ಇಂದು ಅವರಿಗೆ ೫೭ನೇ ಹುಟ್ಟುಹಬ್ಬ. 

ಗಾಣಿಗ ಸಮಾಜದ ಇವರು ಕೃಷಿಯನ್ನೇ ಅವಲಂಬಿಸಿದ ಶರಣ ದಂಪತಿಗಳಾದ  ಶಿವಪ್ಪ ಪುರದಗುಡಿ ಹಾಗೂ ಶ್ರೀಮತಿ ಬಸಮ್ಮಾ ದಂಪತಿಗಳಿಗೆ ೬ ನೇ ಸುಪುತ್ರನಾಗಿ ದಿ.೧೫-೨-೧೯೬೭ರಂದು ಜನಿಸಿದ ಮಹಾಬಳೇಶ್ವರ ಪುರದಗುಡಿಯವರು ಬಾಲ್ಯದಿಂದಲೇ ಕೃಷಿಗೆ ಒತ್ತು ನೀಡುವ ಮೂಲಕ ತಮ್ಮ ಶೈಕ್ಷಣಿಕ ಭವಿಷ್ಯವನ್ನು ರೂಪಿಸಿಕೊಂಡವರು.

- Advertisement -

ಶಿಕ್ಷಣ

ಇವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಸವದತ್ತಿಯ ಕನ್ನಡ .ಗಂಡು.ಮಕ್ಕಳ ಶಾಲೆ ನಂ.೨ರಲ್ಲಿ ಪೂರೈಸಿ ನಂತರ ಪ್ರೌಢ ಮತ್ತು ಕಾಲೇಜು ಶಿಕ್ಷಣವನ್ನು ಎಸ್.ಕೆ. ಕಾಂಪೋಜಿಟ್ ಜ್ಯೂನಿಯರ್ ಕಾಲೇಜು ಸವದತ್ತಿಯಲ್ಲಿಯೇ ಪೂರ್ಣಗೊಳಿಸಿ, ಪದವಿ ಶಿಕ್ಷಣವನ್ನು ಎಸ್.ವಿ.ಎಸ್. ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಪಡೆದುಕೊಂಡಿದ್ದಾರೆ.

ಸಹೋದರ ಬಸವರಾಜ ಕೂಡ ಕೃಷಿ ಜೊತೆಗೆ ರಾಜಕಾರಣದಲ್ಲಿ ಹೆಸರುವಾಸಿ

ಮಹಾಬಳೇಶ್ವರ ಶಿವಪ್ಪ ಪುರದಗುಡಿಯವರ ಮೂರನೆಯ ಹಿರಿಯ ಸಹೋದರ ಬಸವರಾಜ ಪುರದಗುಡಿಯವರು ವ್ಯಾಪಾರದೊಂದಿಗೆ ರಾಜಕೀಯದಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡವರು. ಇವರು ಸವದತ್ತಿ ಯಲ್ಲಮ್ಮಾ ಪುರಸಭೆಗೆ ಸದಸ್ಯರಾಗಿ ಮುಂದೆ ಅಧ್ಯಕ್ಷರಾಗಿ ಪುರಸಭೆಯ ವಾರ್ಡಗಳ ಅಭಿವೃದ್ದಿಯ ಚಿಂತಕರಾಗಿ ಕೆಲಸ ಮಾಡುತ್ತ ಇಂದು ನಾಡ ಹಬ್ಬ ಉತ್ಸವ ಸಮಿತಿಯ ಅಧ್ಯಕ್ಷರಾಗಿ ಸಂಘಟನಾ ಚತುರರಾಗಿ ಕೆಲಸ ಮಾಡಿಕೊಂಡು ಬಂದಿದ್ದಾರೆ.

- Advertisement -

ಕುಟುಂಬ ವತ್ಸಲ

ತುಂಬು ಕುಟುಂಬದ ಸಂಸಾರದಲ್ಲಿ ಮಹಾಬಳೇಶ್ವರ ಇವರಿಗೆ ಸೌ.ಅನಸೂಯಾ ಧರ್ಮಪತ್ನಿಯಾಗಿ ಬಂದು ಆರತಿಗೊಬ್ಬ ಮಗಳು ಹಾಗೂ ಕೀರ್ತಿಗೊಬ್ಬ ಮಗ ಎಂಬಂತೆ ಕು.ಸುಷ್ಮಾ ಹಾಗೂ ಕು.ಶ್ರೀಶೈಲ್ ಇಬ್ಬರು ಮುದ್ದಿನ ಮಕ್ಕಳ ತಂದೆಯಾಗಿ ಸಂಯುಕ್ತ ಕುಟುಂಬಗಳ ಹಿರಿಯರು ಬಂಧು ಬಾಂಧವರಿಂದ ತುಂಬಿದ ಜೇನುಗೂಡಿನಂತಹ ತುಂಬ ಸಂಸಾರದ ಮನೆಯ ಸಹೃದಯಿಗಳಾಗಿದ್ದಾರೆ. ಸುಷ್ಮಾ ಬಿ.ಕಾಂ ಓದಿದ್ದು ಮಗಳ ವಿವಾಹವನ್ನು ಅದ್ದೂರಿಯಾಗಿ ನೆರವೇರಿಸಿದ ತಂದೆ ಮಹಾಬಳೇಶ್ವರ ಇವರ ಅಳಿಯ ಅಶೋಕ ತೇಲಿ ಸದ್ಯ ಬೆಂಗಳೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಕಂದಾಯ ಇಲಾಖೆ ಸೇವೆ ಸಲ್ಲಿಸುತ್ತಿದ್ದಾರೆ.ಇವರು ಕೂಡ ಮಾವನಂತೆ ಸಹೃದಯಿ. ನನ್ನ ಹಲವು ಕೃತಿಗಳಿಗೆ ಧನಸಹಾಯ ಮಾಡುವ ಮೂಲಕ ಸಾಹಿತ್ಯದ ಪರಿಚಾರಕರಾಗಿರುವರು. ಮಗ ಶ್ರೀಶೈಲ ಬಿ.ಕಾಂ ಓದುತ್ತಿರುವನು.

ವಿಭಿನ್ನ ಬದುಕು

ಕಾಯಕದಲ್ಲಿ ಕೃಷಿಕರಾಗಿ ವೃತ್ತಿಯಲ್ಲಿ ವ್ಯಾಪಾರಸ್ಥರಾಗಿ ಬೆಳೆದು ಬಂದ ಇವರು ವಿದ್ಯಾರ್ಥಿ ಜೀವನದಲ್ಲಿಯೇ ನಾಯಕತ್ವದ ಸಾಮಾಜಿಕ ಸೇವೆಯನ್ನು ಅಳವಡಿಸಿಕೊಂಡು ರಾಜಕೀಯದ ಅನುಭವ ಪಡೆದುಕೊಂಡವರು. ಅವರ ಪ್ರಾಮಾಣಿಕವಾದ ಸಾಮಾಜಿಕ ಸೇವೆಯು ಇಂದು ಅವರ ರಾಜಕೀಯ ಜೀವನದ ಮೈಲುಗಲ್ಲಾಗಿ ಪರಿಣಮಿಸಿದೆ. ನಿಸ್ವಾರ್ಥ ಪ್ರಾಮಾಣಿಕ ರಾಜಕಾರಣಿಯಾಗಿ ಬೆಳೆಯಲು ಅವರಲ್ಲಿರುವ ಸಾಮಾಜಿಕ ಕಳಕಳಿ, ನೊಂದವರಿಗೆ ತೋರುವ ಸಹಾಯ ಸಹಕಾರಿ ಗುಣಗಳೇ ಪ್ರಮುಖ ಸಾಕ್ಷಿಯಾಗಿವೆ.

ಸಮಾಜದಲ್ಲಿ ಅನೇಕ ಆರ್ಥಿಕ ಹಾಗೂ ಸಂಘ ಸಂಸ್ಥೆಗಳನ್ನು ಹುಟ್ಟು ಹಾಕುವದರೊಂದಿಗೆ ಯುವಕರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಿಕೊಟ್ಟಿದ್ದಾರೆ. ಹಲವಾರು ಸಂಸ್ಥೆಗಳನ್ನು ಹಾಗೂ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಅವರಿಗೆ ಸಹಾಯ ಹಸ್ತವನ್ನು ಚಾಚಿ ಸಮಾಜದಲ್ಲಿ ಉತ್ತಮ ಗೌರವಕ್ಕೆ ಪಾತ್ರರಾಗಿದ್ದಾರೆ.

ಸಹಕಾರಿ ಸೇವೆ

೧೯೯೬ ಡಿಸೆಂಬರ ೬ರಲ್ಲಿ ಜ್ಯೋತಿ ಅರ್ಬನ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯನ್ನು ಹುಟ್ಟು ಹಾಕುವ ಮೂಲಕ ಸಂಸ್ಥಾಪಕ ಅಧ್ಯಕ್ಷರಾಗಿ ಇಂದಿಗೂ ಆ ಆರ್ಥಿಕ ಸಂಸ್ಥೆ ಏಳ್ಗೆಗೆ ಶ್ರಮಿಸುತ್ತ ಅಧ್ಯಕ್ಷರಾಗಿ ಮುಂದುವರೆದುಕೊಂಡು ಬಂದಿದ್ದಾರೆ. ಸಂಸ್ಥೆ ಪ್ರಗತಿಯೊಂದಿಗೆ ಸಂಸ್ಥೆಗೆ ಸ್ವಂತವಾದ ಒಂದು ಸುಸಜ್ಜಿತವಾಗಿರುವ ಅತ್ಯುತ್ತಮವಾದ ಕಟ್ಟಡವನ್ನು ನಿರ್ಮಿಸುವ ಮೂಲಕ ಜ್ಯೋತಿ ಅರ್ಬನ್ ಕೋ.ಆಪರೇಟಿವ್ ಕ್ರೆಡಿಟ್ ಸೊಸೈಟಿಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತ ಬಂದಿದ್ದಾರೆ.

ಧಾರ್ಮಿಕ ಸೇವೆ

ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾಗಿ ಬೇವಿನಕಟ್ಟಿ ಓಣಿಯಲ್ಲಿ ನೂತನವಾಗಿ ದೇವಸ್ಥಾನದ ಕಟ್ಟಡವನ್ನು ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ದೇವಸ್ಥಾನದ ಉದ್ಘಾಟನೆಯ ಸಮಯದಲ್ಲಿ ೫೧ ಉಚಿತ ಸಾಮೂಹಿಕ ವಿವಾಹ ಮಾಡುವದರೊಂದಿಗೆ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಸಮಾಜದಲ್ಲಿ ಯಾವುದೆ ಧರ್ಮದ ಜಾತಿಯ ಕಾರ್ಯಗಳಿರಲಿ ಅಲ್ಲಿ ತಮ್ಮ ಮುಂದಾಳತ್ವವನ್ನು ತೋರುವ ಮೂಲಕ ಸಕ್ರೀಯವಾಗಿ ಪಾಲ್ಗೊಳ್ಳುವ ಇವರ ಸ್ವಭಾವ ಎಲ್ಲರ ಪ್ರೀತಿಗೆ ಪಾತ್ರವಾಗಿದೆ. ಅಷ್ಟೇ ಅಲ್ಲ ಯಲ್ಲಮ್ಮಾ ದೇವಸ್ಥಾನದ ಟ್ರಸ್ಟಿಯಾಗಿ ಕೂಡ ಇವರು ಕಾರ್ಯ ನಿರ್ವಹಿಸಿರುವರು

ಎಮ್.ಎಸ್.ಪುರದಗುಡಿಯವರ ಪರಿಚಯ

ಜನನ: ೧೫-೨-೧೯೬೭

ಪ್ರಾಥಮಿಕ ಶಿಕ್ಷಣ: ಕನ್ನಡ ಗಂಡು ಮಕ್ಕಳ ಶಾಲೆ ನಂ.೨, ಸವದತ್ತಿ

ಮಾದ್ಯಮಿಕ ಶಿಕ್ಷಣ: ಎಸ್.ಕೆ.ಹೈಸ್ಕೂಲ ಸವದತ್ತಿ.

ಪದವಿಪೂರ್ವ ಶಿಕ್ಷಣ: ಎಸ್.ಕೆ.ಪದವಿ ಪೂರ್ವ ಕಾಲೇಜ ಸವದತ್ತಿ.

ಪದವಿ ಶಿಕ್ಷಣ: ಎಸ್.ವಿ.ಎಸ್ ಬೆಳ್ಳುಬ್ಬಿ ಮಹಾವಿದ್ಯಾಲಯ ಸವದತ್ತಿ.

ವೃತ್ತಿ: ಕೃಷಿ ಮತ್ತು ವ್ಯಾಪಾರ

ವಿಳಾಸ: ದೇಸಾಯಿ ಗಲ್ಲಿ, ಸವದತ್ತಿ. ಜಿ.ಬೆಳಗಾವಿ. ಮೊ.೯೬೬೩೮೦೬೮೯೪

ಸಾಮಾಜಿಕ ಹಾಗೂ ರಾಜಕೀಯ ಸೇವೆಯಲ್ಲಿ ಪಾತ್ರ

  • ಗ್ರಾಮ ಸೇವಾ ಸಹಕಾರಿ ಸಂಘದ ೩ನೇ ವಾರ್ಡಿನ ನಿರ್ದೇಶಕರು.
    ಮಲಪ್ರಭಾ ಸಹಕಾರಿ ನೂಲಿನ ಗಿರಿಣಿ ನಿ,. ಸವದತ್ತಿ ನಿರ್ದೇಶಕರು.
  • ಪಿಎಲ್‌ಡಿ ಬ್ಯಾಂಕ ಸವದತ್ತಿಯ ನಿರ್ದೇಶಕರು.
  • ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿರ್ದೇಶಕರು.
  • ಸವದತ್ತಿ ಯಲ್ಲಮ್ಮಾ ಪುರಸಭೆ ಅಧ್ಯಕ್ಷರು.
  • ಜ್ಯೋತಿ ಅರ್ಬನ ಕೋ.ಆಫ್.ಕ್ರೆ.ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷರು.
  • ಶ್ರೀ ಕಲ್ಮೇಶ್ವರ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರು.
  • ಶ್ರೀ ಕಲ್ಮೇಶ್ವರ ಪಿ.ಕೆ.ಪಿ.ಎಸ್ ಅಧ್ಯಕ್ಷರು.

ರಾಜಕೀಯ ರಂಗ:

ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದಂತ ವ್ಯಕ್ತಿತ್ವವನ್ನು ಹೊಂದಿರುವ ಇವರು, ಸವದತ್ತಿ ಯಲ್ಲಮ್ಮಾ ಪುರಸಭೆಗೆ ಚುನಾಯಿತ ಪ್ರತಿನಿಧಿಯಾಗಿ ಆಯ್ಕೆಯಾಗಿ ಪುರಸಭೆಯ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ತಮ್ಮ ರಾಜಕೀಯ ಛಾಪನ್ನು ಮೂಡಿಸಿದ್ದಾರೆ. ಪುರಸಭೆಯ ೨೩ ವಾರ್ಡಗಳಲ್ಲಿ ತಮ್ಮ ಅಧಿಕಾರದವಧಿಯಲ್ಲಿ ಅನೇಕ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳುವ ಮೂಲಕ ಜನರಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ. ಮತ ಕ್ಷೇತ್ರದಲ್ಲಿ ನಡೆಯುವ ಅನೇಕ ಚುನಾವಣೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆಯಾ ಅಭ್ಯರ್ಥಿಗಳ ಗೆಲುವಿಗೆ ಸ್ಪಂದನೆ ನೀಡುತ್ತ ಬಂದಿದ್ದಾರೆ.

ಇಂತಹ ಸಹೃದಯವಂತ ಹಿರಿಯರಿಗೆ ಇಂದು ೫೭ ರ ಹುಟ್ಟುಹಬ್ಬದ ಸಡಗರ. ನನಗೆ ಕುಟುಂಬದ ಹಿತೈಷಿ ಹಾಗೂ ಚಿಕ್ಕಪ್ಪ. ಸಂಬಂಧಿಯಾದ ಇವರಿಗೆ ದೇವರು ಆಯುಷ್ಯ ಆರೋಗ್ಯವನ್ನು ದಯಪಾಲಿಸಲಿ.ಇನ್ನೂ ಹೆಚ್ಚಿನ ಸೇವೆಯನ್ನು ರಾಜಕೀಯ. ಸಾಮಾಜಿಕ ಧಾರ್ಮಿಕ ಬದುಕಿನಲ್ಲಿ ಇವರಿಗೆ ದೇವರು ದಯಪಾಲಿಸಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group