ಬೆಳಗಾವಿ – ಜಿಲ್ಲಾ ಮಟ್ಟದ ದ್ವಿತೀಯ ಕದಳಿ ಮಹಿಳಾ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಗುರುದೇವಿ ಹುಲೇಪ್ಪನವರ ಮಠ ಅವರನ್ನು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಯು ಬೈಲಹೊಂಗಲ ದಲ್ಲಿ ನಡೆಯಲಿರುವ ಸಮ್ಮೇಳನಕ್ಕೆ ಅವರ ಮನೆಗೆ ತೆರಳಿ ಗೌರವ ಆಮಂತ್ರಣ ನೀಡಲಾಯಿತು.
ಸಮ್ಮೇಳನದ ಆಮಂತ್ರಣ ಸ್ವೀಕರಿಸಿ ಮಾತನಾಡಿದ ಅವರು, ನನಗೆ ದೊರೆತಿರುವ ಈ ಗೌರವವನ್ನು ನಾನೆಂದು ಮರೆಯಲಾರೆ ಶರಣ ಸಾಹಿತ್ಯ ಸೇವೆಗೆ ಸಲ್ಲಿಸಿದ ಅಲ್ಪಸೇವೆಯನ್ನು ಪರಿಗಣಿಸಿ ಆಯ್ಕೆ ಮಾಡಿದ ತಮ್ಮೆಲ್ಲರಿಗೆ ಧನ್ಯವಾದಗಳು ಎಂದರು.
ಕದಳಿ ಮಹಿಳಾ ವೇದಿಕೆ ಬೈಲಹೊಂಗಲ ಹಾಗೂ ಪ್ರತಿ ತಾಲೂಕಿನ ಎಲ್ಲಾ ಮಹಿಳಾ ಪದಾಧಿಕಾರಿಗಳು ಹಾಗೂ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಶರಣ ಬಳಗವು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮಂಗಳಾ ಮೆಟಗುಡ್ ಕಾರ್ಯದರ್ಶಿಗಳಾದ ಮಹಾಂತೇಶ ಮೆಣಸಿನಕಾಯಿ, ಸಾಹಿತಿಗಳಾದ ಸುನಂದಾ ಎಮ್ಮಿ ಶೈಲಜಾ ಮಠಪತಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಶರಣ ಅಶೋಕ ಮಳಗಲಿ ಶರಣೆ ಪ್ರೇಮಾ ಅಂಗಡಿ , ಶೈಲಕ್ಕ ಹಿರೆಮಠ ಶಿವಾನಂದ ಕುಡಸೋಮನ್ನವರ, ಮೀನಾಕ್ಷಿ ಕುಡಸೋಮನ್ನವರ ಶ್ರೀಶೈಲ್ ಶರಣಪ್ಪನವರ್ ಸಂತೋಷ ಕೊಳವಿ ಡಾ ಅಡಿವೆಪ್ಪ ಇಟಗಿ ಗಂಗಪ್ಪ ಅಂಗಡಿ ಮುಂತಾದ ಶರಣ ಬಳಗದವರು ಆತ್ಮೀಯವಾಗಿ , ಆಮಂತ್ರಣ ನೀಡಿದರು.