ಬೀದರ – ಹುಲಿ ಉಗುರು ಧರಿಸಿರುವ ವರ್ತೂರು ಸಂತೋಷ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ವನ್ಯಜೀವಿ ಸಂರಕ್ಷಣೆ ಮಾಡುವ ಎಲ್ಲಾ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡುವ ಕೆಲಸ ನಾವು ಮಾಡಬೇಕಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ವನ್ಯಜೀವಿ, ಕಾಡು ಮೃಗಗಳ ಸಂರಕ್ಷಣೆ ಮಾಡೋದು ನಮ್ಮ ಎಲ್ಲರ ಆದ್ಯತೆ ಕರ್ತವ್ಯವಾಗಿದೆ. ಈ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿ ಸಂತೋಷ ಬಂಧನ ನಡೆದಿದೆ. ನಮ್ಮ ಅರಣ್ಯಾಧಿಕಾರಿಗಳು ಹೋಗಿ ತಪಾಸಣೆ ಮಾಡಿ ನನ್ನ ಗಮಕ್ಕೆ ತಂದಿದ್ದರು. ತನಿಖೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳಿ ಅಂತ ನಾನು ಹೇಳಿದ್ದೆ.ತನಿಖೆ ಮಾಡಿ, ಹುಲಿ ಉಗುರಿನ ಬಗ್ಗೆ ಪತ್ತೆ ಹಚ್ಚುತ್ತಾರೆ. ಬಳಿಕ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಅವರು ಬೀದರನಲ್ಲಿ ಹೇಳಿದರು.
ಅರಣ್ಯಗಳಲ್ಲಿ ಕಳ್ಳಬೇಟೆ ಬಗ್ಗೆ ಬಹಳಷ್ಟು ಆರೋಪಗಳು ಇವೆ. ಇಂಥಾ ಕೃತ್ಯಗಳಿಗೆ ಸರ್ಕಾರದ ಆಸ್ಪದ ಕೊಡಲ್ಲ.
ಯಾರೇ ಇದ್ದರೂ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಇಂಥಾ ಪ್ರಕರಣಗಳನ್ನು ಸರ್ಕಾರ ಬಹಳ ಗಂಭೀರವಾಗಿ ತೆಗೆದುಕೊಳ್ಳುತ್ತದೆ ಎಂದು ಖಂಡ್ರೆ ನುಡಿದರು.
ವರದಿ: ನಂದಕುಮಾರ ಕರಂಜೆ, ಬೀದರ